
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಪಶ್ಚಿಮ ಘಟ್ಟಗಳು ವಿಶ್ವದ ಮಾನ್ಯತೆ ಪಡೆದ ಅಪರೂಪದ ಪ್ರದೇಶ. ಯುನೆಸ್ಕೋದಿಂದ ಗೌರವ ಪಡೆದ ಪಶ್ಚಿಮ ಘಟ್ಟಗಳು ಅಪೂರ್ವ ಸಸ್ಯವನ ರಾಶಿಗಳ ಸಂಗಮ.
ಕೇರಳದಲ್ಲಿ ಆರಂಭಗೊಂಡು ಗುಜರಾತಿನ ತನಕ ಆರು ರಾಜ್ಯಗಳಲ್ಲಿ ವಿಸ್ತಾರಗೊಂಡಿರುವ ಪಶ್ಚಿಮ ಘಟ್ಟಗಳು ಪ್ರಪಂಚದ ಹದಿನೆಂಟು ಸೂಕ್ಷ್ಮ ಪ್ರದೇಶಗಳಲ್ಲಿ ಒಂದು.
ಕರ್ನಾಟಕದಲ್ಲೂ ಪಶ್ಚಿಮಘಟ್ಟದ ಬಹುತೇಕ ಪ್ರದೇಶಗಳು ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಪಶ್ಚಿಮ ಘಟ್ಟಗಳು ಇಂದು ಭಾರತಕ್ಕೆ ಮಳೆ ಸುರಿಸುವ ಮಹತ್ವದ ಪಾತ್ರವಹಿಸುತ್ತವೆ. ಈ ಘಟ್ಟ ಪ್ರದೇಶಗಳು ಇಲ್ಲದೆ ಹೋದರೆ ನೀರು ಆವಿಯಾಗಿ ಮೋಡಗಳನ್ನು ತಡೆಯುವ ಪ್ರದೇಶವೇ ಇಲ್ಲದಂತಾಗಿ ಮಳೆ ಸುರಿಯುವ ಪ್ರಮೇಯವೇ ಇಲ್ಲದಂತಾಗುತ್ತದೆ.
ಅದ್ಭುತವಾದ ವನ ರಾಶಿಗಳು, ನೂರಾರು ಪ್ರಾಣಿ, ಸರಿಸ್ರಪಗಳು, ಪಕ್ಷಿಗಳ ನೆಲೆಬೀಡಾಗಿರುವ ಪಶ್ಚಿಮ ಘಟ್ಟಗಳು ಪ್ರಕೃತಿ ಪ್ರಿಯರಿಗೆ ಅದ್ಭುತ ಲೋಕ. ಜುಳುಜುಳು ಹರಿಯುವ ನದಿಗಳು ಪಶ್ಚಿಮ ಘಟ್ಟಗಳನ್ನು ಇನ್ನಷ್ಟು ರೋಚಕ ವನ್ನಾಗಿ ಮಾಡಿದೆ.
ದಟ್ಟವಾದ ಕಾಡುಗಳು ಕಂಡುಬರುತ್ತಿರುವುದು ಪಶ್ಚಿಮ ಘಟ್ಟಗಳ ವಿಶೇಷ. ಯುನೆಸ್ಕೋ ಮಾನ್ಯತೆ ಪಡೆದಿರುವ ಈ ಪ್ರದೇಶಗಳು ಅತಿ ಸೂಕ್ಷ್ಮ ಪ್ರದೇಶಗಳ ಆಗಿರುವ ಕಾರಣ ಈ ಘಟ್ಟಪ್ರದೇಶ ಗಳನ್ನು ಭವಿಷ್ಯದ ಜನಾಂಗಕ್ಕಾಗಿ ಉಳಿಸುವ ಅಗತ್ಯ ಇದೆ.
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
108MP ಕ್ಯಾಮೆರಾದ ಗ್ಯಾಲಕ್ಸಿ F54 5G ಅನಾವರಣ ಮಾಡಿದ ಸ್ಯಾಮ್ಸಂಗ್