ಮಂಗಳವಾರ, ಅಕ್ಟೋಬರ್ 3, 2023
Galaxy S23 FE: ಸ್ಯಾಮ್ಸಂಗ್ ಗ್ಯಾಲಕ್ಸಿ S23 ಎಫ್​ಇ ಸ್ಮಾರ್ಟ್​ಫೋನ್ ಅ.4 ರಂದು ಬಿಡುಗಡೆ!-ಜಿಂಬಾಬ್ವೆಯಲ್ಲಿ ವಿಮಾನ ಪತನ ; ಭಾರತದ ಕೋಟ್ಯದೀಶ್ವರ ಹಾಗೂ ಗಣಿ ಉದ್ಯಮಿ ಮತ್ತು ಅವರ ಪುತ್ರ ದುರ್ಮರಣ!-ಸಂಕ್ರಾಂತಿ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ; ಸಿಪಿ ಯೋಗೇಶ್ವರ್ ಬಾಂಬ್-ದಿಗ್ಗಜ ಮಾಜಿ ಓಟಗಾರ್ತಿ ಪಿ.ಟಿ ಉಷಾರವರ ರಾಷ್ಟ್ರೀಯ ದಾಖಲೆ ಸರಿಗಟ್ಟಿ ಪದಕ ಸುತ್ತಿಗೇರಿದ ವಿತ್ಯಾ!-ನೀವು ಹೆದರಿಸದರೆ ಮಾತ್ರಕ್ಕೆ ನಾನು ಹೆದರಲ್ಲ ದೇವೇಗೌಡರಿಗೆ ಡಿಕೆಶಿ ಟಾಂಗ್!-ಜಿಪಿಎಸ್ ಮ್ಯಾಪ್ ನೋಡಿ ಕಾರನ್ನು ಚಲಿಸುವುತ್ತಿರುವಾಗ ನದಿಗೆ ಬಿದ್ದು ಇಬ್ಬರು ವೈದ್ಯರು ಸಾವು ; ಮೂವರು ಪಾರು!-ಹೃದಯ ವಿದ್ರಾವಕ ಘಟನೆ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸೇರಿ 6 ಮಂದಿ ಹತ್ಯೆ-ಬೆಂಗಳೂರಿನ ಕಂಬಳಕ್ಕೆ ಹೇಗಿದೆ ತಯಾರಿ; ದಕ್ಷಿಣ ಕನ್ನಡ ಭಾಗದ 150 ಫುಡ್ ಸ್ಟಾಲ್ ಏರ್ಪಾಡು..!-ಪಿಯುಸಿಯಲ್ಲಿ ಅಂಕ ಕಡಿಮೆ ಬಂತೆಂದು ಮನನೊಂದು ಅಪಾರ್ಟ್‌ಮೆಂಟ್‌ನಿಂದ ಜಿಗಿದ ಬಾಲಕಿ ; ರಕ್ಷಣೆಗೆ ಧಾವಿಸಿದ ಯುವಕ - ಇಲ್ಲಿದೆ ವಿಡಿಯೋ-ಬರ್ತ್‌ಡೇ ಪಾರ್ಟಿಯಲ್ಲಿ ಡೆಕೋರೇಷನ್‌ಗೆ ಹಾಕಿದ್ದ ಹೀಲಿಯಂ ಬಲೂನ್‌ ಬ್ಲಾಸ್ಟ್‌ ; ಐವರು ಗಂಭೀರ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ವಿಶ್ವದ ಅತೀ ಉದ್ದದ ನದಿ ಹಡಗು ಯಾನಕ್ಕೆ ಜ.13ಕ್ಕೆ ಪ್ರಧಾನಿ ಚಾಲನೆ

Twitter
Facebook
LinkedIn
WhatsApp
Icon of the Seas

ನವದೆಹಲಿ: ವಾರಾಣಸಿಯಿಂದ ಆರಂಭವಾಗಿ ಬಾಂಗ್ಲಾದೇಶದ ಮುಖಾಂತರ ಅಸ್ಸಾಂನ ದಿಭ್ರೂಗಢಕ್ಕೆ ಬಂದು ಸೇರಲಿರುವ ವಿಶ್ವದ ಅತಿ ದೊಡ್ಡ ನದಿ ಪ್ರಯಾಣದ ಕ್ರೂಸ್‌ ಹಡಗು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಜ.13ರಂದು ಚಾಲನೆ ನೀಡಲಿದ್ದಾರೆ. ‘ಗಂಗಾ ವಿಲಾಸ್‌ ಕ್ರೂಸ್‌’ ಎಂಬ ಹೆಸರಿನ ಈ ಹಡಗು ವಾರಾಣಾಸಿಯಂದ ಬಾಂಗ್ಲಾ ಮಾರ್ಗವಾಗಿ ಅಸ್ಸಾಂನ ದಿಬ್ರುಗಢಕ್ಕೆ 3200 ಕಿ.ಮೀ. ದೂರ ಕ್ರಮಿಸಲಿದೆ.

ಗಂಗಾ ವಿಲಾಸ್‌ ಕ್ರೂಸ್‌ಗೆ (Ganga Vilas Cruise) ವಾರಾಣಸಿಯ (Varanasi)ರವೀಂದ್ರ ಘಾಟ್‌ನಲ್ಲಿ (Rabindra Ghat) ಚಾಲನೆ ನೀಡಲಾಗುತ್ತದೆ. ಇದು ಒಟ್ಟು 50 ದಿನಗಳ ಕಾಲ 27ಕ್ಕೂ ಹೆಚ್ಚು ನದಿ ವ್ಯವಸ್ಥೆಗಳಲ್ಲಿ ಪ್ರಯಾಣಿಸಲಿದ್ದು, 50ಕ್ಕೂ ಹೆಚ್ಚು ಪ್ರದೇಶಗಳಲ್ಲಿ ನಿಲ್ಲಲಿದೆ. ಗಾಜಿಪುರ, ಬಕ್ಸರ್‌ ಮತ್ತು ಪಟನಾ ಮೂಲಕ ಕೋಲ್ಕತಾವನ್ನು ತಲುಪಲಿದೆ. ಈ ಹಡಗು ಗಂಗಾ (Ganga) ಮತ್ತು ಬ್ರಹ್ಮಪುತ್ರಾ (Brahmaputra) ನದಿಗಳಲ್ಲಿ ಚಲಿಸಲಿದೆ. ಈ ಕ್ರೂಸ್‌ ಪ್ರಯಾಣವನ್ನು ಆನಂದಿಸಲು ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ, ಜಿಮ್‌, ಸ್ಪಾ, ವೀಕ್ಷಣಾಲಯ ಮುಂತಾದವುಗಳನ್ನು ನಿರ್ಮಿಸಲಾಗಿದೆ. ಈ ಹಡಗು ವಿಶ್ವ ಪಾರಂಪರಿಕ ತಾಣಗಳು (World Heritage Sites), ವನ್ಯಧಾಮಗಳು, ಕಾಜಿರಂಗ ಮತ್ತು ಸುಂದರಬನ್‌ ರಾಷ್ಟ್ರೀಯ ಉದ್ಯಾನವನಗಳಲ್ಲೂ ಈ ಹಡಗು ನಿಲ್ಲಲಿದೆ.

20ನೇ ದಿನ ಫರಕ್ಕಾ ಮತ್ತು ಮುರ್ಷಿದಾಬಾದ್‌ (Murshidabad) ಮೂಲಕ ಬಾಂಗ್ಲಾದೇಶವನ್ನು (Bangladesh)ಪ್ರವೇಶಿಸುವ ಈ ಹಡಗು 15 ದಿನಗಳ ಕಾಲ ಬಾಂಗ್ಲಾದಲ್ಲಿ ಪ್ರಯಾಣಿಸಲಿದೆ. ಬಳಿಕ ಶಿವಸಾಗರ ಬಳಿ ಮತ್ತೆ ಭಾರತದ ಗಡಿಯನ್ನು ಪ್ರವೇಶಿಸಲಿದೆ. ಜ.13ರಂದು ನಡೆಯುವ ಚಾಲನಾ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ