ಬುಧವಾರ, ಫೆಬ್ರವರಿ 21, 2024
ತನ್ನ ಬಗ್ಗೆ ಸುಳ್ಳು ಸುದ್ದಿಯ ಗ್ರಾಫಿಕ್ ಸೃಷ್ಟಿ ಮಾಡಿದವರ ವಿರುದ್ಧ ಕಾನೂನು ಕ್ರಮ - ಮಡಿಕೇರಿ ಶಾಸಕ ಡಾ.ಮಂತರ್‌ ಗೌಡ ಸ್ಪಷ್ಟನೆ-ಲೋಕಸಭಾ ಚುನಾವಣೆಗೆ ಸ್ಪರ್ಧೆ ವಿಚಾರ: ಸ್ಪಷ್ಟನೆ ನೀಡಿದ ಡಾ. ಮಂಜುನಾಥ್-21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸಿಗರೇಟ್ ಸೇದುವಂತಿಲ್ಲ : ದಂಡಗಳಲ್ಲಿ ಬದಲಾವಣೆ; ಇಲ್ಲಿದೆ ವಿವರ-Arecanut price :ಕುಸಿತ ಕಂಡ ಅಡಿಕೆ ಧಾರಣೆ; ಬೆಳೆಗಾರರಿಗೆ ಹೊಡೆತ ಬೀಳಲು ಕಾರಣವೇನು?-ಶೋಭಾ ಕರಂದ್ಲಾಜೆ ಲೋಕಸಭೆ ಚುನಾವಣೆ ಸ್ಪರ್ಧಿಸದಂತೆ ಬಿಜೆಪಿ ಕಾರ್ಯಕರ್ತರಿಂದ ಪತ್ರ ಚಳುವಳಿ..!-18 ವರ್ಷ ಬಳಿಕ ದುಬೈ ಜೈಲಿನಲ್ಲಿದ್ದು ಭಾರತಕ್ಕೆ ಮರಳಿ ಕುಟುಂಬದ ಜೊತೆ ಸೇರಿದ ಐವರು; ಇಲ್ಲಿದೆ ವಿಡಿಯೋ-Vidya Balan: ವಿದ್ಯಾ ಬಾಲನ್ ಹೆಸರಿನಲ್ಲಿ ಹಣ ವಸೂಲಿ ;ದೂರು ದಾಖಲು.!-Taruwar Kohli: ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ತರುವರ್ ಕೊಹ್ಲಿ..!-ಉಡುಪಿ : ಗಂಗೊಳ್ಳಿ ಬೋಟ್ ಅಗ್ನಿ ದುರಂತ; ರಾಜ್ಯ ಸರ್ಕಾರದಿಂದ 1.75 ಕೋ. ಪರಿಹಾರ ಮಂಜೂರು..!-ಮೆಫೆಡ್ರೋನ್‌ ಎಂಬ 2,500 ಕೋಟಿ ರೂ. ಮೌಲ್ಯದ ಮಾದಕವಸ್ತು ಜಪ್ತಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ವಿಶ್ವದಲ್ಲೇ ಸುಂದರವಾದ ಹೆಣ್ಣು ಶುಭ ಪೂಂಜ ಎಂದ ಮಂಜು!!

Twitter
Facebook
LinkedIn
WhatsApp
ವಿಶ್ವದಲ್ಲೇ ಸುಂದರವಾದ ಹೆಣ್ಣು ಶುಭ ಪೂಂಜ ಎಂದ ಮಂಜು!!

ಬಿಗ್ ಬಾಸ್ ಮನೆಯಲ್ಲಿ ಮಂಜು ಪಾವಗಡ ಅವರ ಕಾಮಿಡಿ ಬಿಗ್ ಬಾಸ್ ವೀಕ್ಷಕರಿಗೆ ಮಾತ್ರವಲ್ಲದೇ ಮನೆಯ ಎಲ್ಲಾ ಸದಸ್ಯರಿಗೂ ಮನೋರಂಜನೆ ನೀಡುತ್ತಿದೆ.
ಇತ್ತಿಚೇಗೆ ಮನಸ್ತಾಪಗಳ ಮನೆಯಾಗಿದ್ದ ಬಿಗ್ ಬಾಸ್ ಈಗ ಕಾಮಿಡಿ ಶೋ ಆಗಿದೆ. ಪ್ರತಿನಿತ್ಯ ಮಂಜು ತಮ್ಮ ಕಾಮಿಡಿ ಮಾತುಗಳಿಂದ ಮನೆಯ ಎಲ್ಲಾ ಸದಸ್ಯರನ್ನೂ ನಗಿಸುತ್ತಲೇ ಇರುತ್ತಾರೆ. ಟಾಸ್ಕ್ ಮುಗಿದ ಬಳಿಕೆ ಮನೆಯಲ್ಲಿ ಮಂಜನದ್ದೇ ಮಾತು. ನಿನ್ನೆ ಶುಭಾ ಪೂಂಜಾ ಅವರನ್ನು ವಿಶ್ವದಲ್ಲೇ ಸುಂದರವಾದ ಸುಂದರಿ ಎಂದು ಮಂಜು ಹೊಗಳಿದ್ದಾರೆ.
ಈ ವಾರ ಬಿಗ್ ಬಾಸ್ ನೀಡಿದ ಟಾಸ್ಕ್ ಗಳು ಮನೆಯ ಸದಸ್ಯರಿಗೆ ಹೆಚ್ಚು ಮಹತ್ವದ್ದಾಗಿತ್ತು. ವಾರದ ಕೊನೆಯಲ್ಲಿ ಅತೀ ಹೆಚ್ಚು ಟಾಸ್ಕ್ ಗೆದ್ದು ಹೆಚ್ಚು ‘ಗೆಲುವಿನ ದಂಡ’ ಪಡೆದ ತಂಡ ನಾಮಿನೇಷನ್ ಪ್ರಕ್ರಿಯೆಯಿಂದ ದೂರ ಉಳಿಯುತ್ತದೆ. ಹೀಗಾಗಿ ಮಂಜು ಹಾಗೂ ಅರವಿಂದ್ ನೇತೃತ್ವದ ಎರಡು ಗುಂಪುಗಳಲ್ಲೂ ಗೆಲ್ಲುವ ಛಲ ಇತ್ತು.  ಪ್ರತೀ ಬಾರಿ ಬಿಗ್ ಬಾಸ್ ಟಾಸ್ಕ್ ಗಳನ್ನು ಮನೆಯ ಸದಸ್ಯರು ಎದುರಿಸಬೇಕು. ಪ್ರತೀ ಬಾರಿ ಬಿಗ್ ಬಾಸ್ ನೀಡಿದ ಟಾಸ್ಕ್ ಗಳಲ್ಲೂ ಎರಡೂ ತಂಡಗಳು ಸಮನಾಗಿ ಜಯ ಸಾಧಿಸುತ್ತಲೇ ಬಂದಿವೆ. ಆದರೆ ಕೊನೆ ಆಟದಲ್ಲಿ ಮಂಜು ನೇತೃತ್ವ ವಹಿಸಿದ ತಂಡವೇ ಜನ ಗಳಿಸಿತು.
ಪ್ರತಿಯೊಂದು ಆಟಗಳಲ್ಲಿ ಗೆಲುವು ಸಾಧಿಸಿದ ತಂಡ ಸೋಲನ್ನು ಅನುಭವಿಸಿದ ತಂಡದ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಬೇಕು. ಆಯ್ಕೆಯಾದ ಇಬ್ಬರು ಸದಸ್ಯರು ಬಿಗ್ ಬಾಸ್ ಹೇಳಿದಂತೆ ನಡೆದುಕೊಳ್ಳಬೇಕು.
ಹೀಗೆ ಗೆಲುವಿನ ದಂಡ ಪಡೆಯಲು ಎರಡೂ ತಂಡಗಳಿಗೆ ಬಿಗ್ ಬಾಸ್ ‘ಮಜಾ ಮಜಾಲು’ ಟಾಸ್ಕ್  ನೀಡಿದ್ದರು. ಇದರಲ್ಲಿ ಅರವಿಂದ್ ತಂಡ ಜಯ ಸಾಧಿಸಿತು. ಈ ವೇಳೆ ಗೆಲುವಿನ ತಂಡ ಮಂಜು ಹಾಗೂ ಚಕ್ರವರ್ತಿಯನ್ನು ಆಯ್ಕೆ ಮಾಡಿತು. ಆಯ್ಕೆಯಂತೆ ಮಂಜು ಹಾಗೂ ಚಕ್ರವರ್ತಿ ಇಬ್ಬರೂ ಶುಭಾ ಮತ್ತು ವೈಷ್ಣವಿಯೊಂದಿಗೆ ಮಾತನಾಡುವಾಗಲೆಲ್ಲಾ ಹೊಗಳಿನೇ ಮಾತನಾಡಬೇಕು.
ಈ ವೇಳೆ ಮಂಜು ‘ವಿಶ್ವದಲ್ಲೇ ಸುಂದರವಾದ ಸುಂದರಿ’ ಶುಭಾ ಎಂದು ಹೊಗಳಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು