ಗುರುವಾರ, ಫೆಬ್ರವರಿ 22, 2024
ಕುಡಿಬೇಡ ಎಂದು ಬುದ್ಧಿ ಹೇಳಿದಕ್ಕೆ ಯುವಕ ಆತ್ಮಹತ್ಯೆ..!-Suratkal :ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದಾಗಲೇ ಹೃದಯಾಘಾತ; ಯುವಕ ಸಾವು.!-ದೆಹಲಿ ಚಲೋ ಪ್ರತಿಭಟನೆಯಲ್ಲಿ ಓರ್ವ ಯುವ ರೈತ ಸಾವು ; 2 ದಿನಗಳ ಕಾಲ ಪ್ರತಿಭಟನೆ ಸ್ಥಗಿತ.!-Tanya Singh: ಖ್ಯಾತ ಮಾಡೆಲ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ; ಐಪಿಎಲ್ ಸ್ಟಾರ್ ಆಟಗಾರನಿಗೆ ನೋಟಿಸ್.!-ಡಾಲಿ ಧನಂಜಯ್: ಲೋಕಸಭೆ ಚುನಾವಣಾ ಸ್ಪರ್ಧೆ ಬಗ್ಗೆ ನಟ ಡಾಲಿ ಧನಂಜಯ್ ಪ್ರತಿಕ್ರಿಯೆ ಏನು?-ಪುತ್ತೂರು: ಟಿಪ್ಪರ್ ಮತ್ತು ಬೈಕ್ ನಡುವೆ ಅಪಘಾತ ; ಚಿಕಿತ್ಸೆ ಫಲಿಸದೆ ಯುವಕ ಸಾವು!-Gold Rate Today : ಸತತ ಇಳಿಕೆ ಕಂಡಿದ್ದ ಚಿನ್ನದ ದರ ಮತ್ತೆ ಏರಿಕೆಯತ್ತ..!-IPL 2024: ಇಂದು ಐಪಿಎಲ್ 2024 ವೇಳಾಪಟ್ಟಿ ಪ್ರಕಟ; ಫೈನಲ್ ಪಂದ್ಯ ಯಾವಾಗ?-ಬೆಡ್​ರೂಮ್​ಗೆ ನುಗ್ಗಿದ ಅಪರಿಚಿತನನ್ನು ಕೊಂದು ಪೊಲೀಸರಿಗೆ ಶರಣಾದ ವ್ಯಕ್ತಿ..!-ತನ್ನ ಬಗ್ಗೆ ಸುಳ್ಳು ಸುದ್ದಿಯ ಗ್ರಾಫಿಕ್ ಸೃಷ್ಟಿ ಮಾಡಿದವರ ವಿರುದ್ಧ ಕಾನೂನು ಕ್ರಮ - ಮಡಿಕೇರಿ ಶಾಸಕ ಡಾ.ಮಂತರ್‌ ಗೌಡ ಸ್ಪಷ್ಟನೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ವಿಶೇಷ ಲೇಖನ--ಕೊರೋನಾ ಮತ್ತು ಭವಿಷ್ಯದ ಚಿಂತನೆ

Twitter
Facebook
LinkedIn
WhatsApp
ವಿಶೇಷ ಲೇಖನ–ಕೊರೋನಾ ಮತ್ತು ಭವಿಷ್ಯದ ಚಿಂತನೆ.
ಇಡೀ ಪ್ರಪಂಚವನ್ನು ಕೊರೋನಾ ಎಂಬ ಮಹಾಮಾರಿ ಇನ್ನಿಲ್ಲದಂತೆ ಕಾಡಿದೆ. ಅದು ಯಾವೊಂದು ದೇಶವನ್ನು ಬಿಟ್ಟಿಲ್ಲ. ಪ್ರಪಂಚದ ಮಾನವಕುಲ ಕೊರೋನಾ ವಿಪತ್ತಿನಿಂದ ಭಾದೆಗೆ ಒಳಗಾಗಿದೆ. ಮನುಷ್ಯ ಸಹಜವಾಗಿ ಮನುಷ್ಯ ಭವಿಷ್ಯದ ಬಗ್ಗೆ ಚಿಂತನೆ ನಡೆಸುತ್ತಾನೆ. ಭವಿಷ್ಯದ ಚಿಂತನೆ ಅವನನ್ನು ಉತ್ಸಾಹದಿಂದ ಜೀವನ ನಡೆಸುವಂತೆ ಪ್ರೇರೇಪಿಸುತ್ತದೆ. ಆದರೆ ಕೊರೋನಾ ಎಂಬ ಮಹಾಮಾರಿ ಮನುಷ್ಯನ ಭವಿಷ್ಯದ ಚಿಂತನೆಗೆ ಬಹುದೊಡ್ಡ ಸವಾಲನ್ನು ಎತ್ತಿದೆ. ಭವಿಷ್ಯದ ಬಗ್ಗೆ ನೂರಾರು ಪ್ರಶ್ನೆಗಳು ಏಳುವಂತೆ ಮಾಡಿದೆ. ಹಲವಾರು ಮಂದಿ ತಮ್ಮ ಭವಿಷ್ಯದ ಬಗ್ಗೆ ಆತಂಕಿತರಾಗಿರುವ ಬಗ್ಗೆ ನಾವು ನೋಡಬಹುದು. ಆದರೆ ಮಾನವಕುಲದ ಹುಟ್ಟು ,ವಿಕಸನ ವನ್ನು ನಾವು ಸೂಕ್ಷ್ಮವಾಗಿ ಗಮನಿಸುವುದಾದರೆ, ಮನುಷ್ಯ ತನ್ನ ವಿಕಸನದ ಪ್ರತಿಹಂತದಲ್ಲೂ ಸವಾಲುಗಳನ್ನು ಎದುರಿಸಿದ್ದಾನೆ. ಆ ಸವಾಲುಗಳನ್ನು ಎದುರಿಸಿ ಇಂದಿನ ಆಧುನಿಕ ನಾಗರಿಕ ಮನುಷ್ಯನ ಎನಿಸಿಕೊಂಡಿದ್ದಾನೆ.

ಸವಾಲು ಮನುಷ್ಯನಿಗೆ ಹೊಸದರಲ್ಲ. ಸವಾಲು ಇದ್ದಾಗಲೇ, ಮನುಷ್ಯ ಹೊಸತನಕ್ಕೆ ತೆರೆದುಕೊಳ್ಳುತ್ತಾರೆ. ಸಂಶೋಧನೆಗೆ ತೊಡಗಿಕೊಳ್ಳುತ್ತಾನೆ. ಹೊಸ ಆವಿಷ್ಕಾರದ ಬಗ್ಗೆ ಗಮನಹರಿಸುತ್ತಾನೆ. ಒಂದು ವೇಳೆ ಸವಾಲು ಇಲ್ಲದೆ ಹೋದರೆ, ಆತ ನಿಂತ ನೀರಾಗುತ್ತಾನೆ. ಈ ದೃಷ್ಟಿಯಲ್ಲಿ ಮನುಷ್ಯನಿಗೆ ಸವಾಲನ್ನು ಎದುರಿಸುವ ಬುದ್ಧಿವಂತಿಕೆ ಅನಾದಿಕಾಲದಿಂದಲೂ ಬಂದಿದೆ. ಆದರೆ ಭವಿಷ್ಯದ ಬಗ್ಗೆ ಆತಂಕಿತನಾದರೆ ಭವಿಷ್ಯದ ಯೋಜನೆಗಳನ್ನು ಹಮ್ಮಿಕೊಳ್ಳಲು ಸಾಧ್ಯವೇ? ಸಾಧ್ಯವೇ ಇಲ್ಲ. ಕೊರೋನ ಕಾರಣವನ್ನು ಮುಂದಿಟ್ಟುಕೊಂಡು ಭವಿಷ್ಯದ ಬಗ್ಗೆ ಯೋಜನೆಗಳನ್ನು ಹಾಕಿಕೊಳ್ಳದೆ ಇರುವುದು ಮೂರ್ಖತನ ಎನಿಸಬಹುದು. ನಮ್ಮ ಭವಿಷ್ಯದ ಯೋಜನೆಗಳನ್ನು ಸ್ವಲ್ಪಮಟ್ಟಿಗೆ ಮುಂದೂಡಬಹುದು. ಆದರೆ ಭವಿಷ್ಯದ ಯೋಜನೆಗಳನ್ನು ಇಲ್ಲದಂತೆ ಮಾಡಿದರೆ ಜೀವನಕ್ಕೆ ಅರ್ಥವಿರುವುದಿಲ್ಲ. ಸವಾಲುಗಳನ್ನು ಎದುರಿಸಲು ಸಾಧ್ಯವಾಗುವುದಿಲ್ಲ. ಈ ನೆಲೆಯಲ್ಲಿ ಭವಿಷ್ಯದ ಚಿಂತನೆ ಇದ್ದರೆ ಮಾತ್ರ ನಮ್ಮ ಜೀವನ ಸುಖಮಯವಾದ ಜೀವನ, ಸಂತೋಷಮಯ ವಾಗಿರಲು ಸಾಧ್ಯ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಭವಿಷ್ಯದ ಚಿಂತನೆ ಮತ್ತು ಕನಸು ಕಾಣುವುದನ್ನು ಬಿಡಬಾರದು. ಬಿಟ್ಟರೆ ಈ ಮಹಾಮಾರಿಯ ಸವಾಲನ್ನು ಎದುರಿಸಲು ಸಾಧ್ಯವಿಲ್ಲ. ಭವ್ಯ ಬದುಕಿನ ಭವಿಷ್ಯದ ಚಿಂತನೆ ನಮ್ಮ ಮನದಲ್ಲಿ ಇರಲಿ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕಲೆ-ಸಾಹಿತ್ಯ

ಸಂಭ್ರಮ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು