ಬುಧವಾರ, ಫೆಬ್ರವರಿ 21, 2024
ತನ್ನ ಬಗ್ಗೆ ಸುಳ್ಳು ಸುದ್ದಿಯ ಗ್ರಾಫಿಕ್ ಸೃಷ್ಟಿ ಮಾಡಿದವರ ವಿರುದ್ಧ ಕಾನೂನು ಕ್ರಮ - ಮಡಿಕೇರಿ ಶಾಸಕ ಡಾ.ಮಂತರ್‌ ಗೌಡ ಸ್ಪಷ್ಟನೆ-ಲೋಕಸಭಾ ಚುನಾವಣೆಗೆ ಸ್ಪರ್ಧೆ ವಿಚಾರ: ಸ್ಪಷ್ಟನೆ ನೀಡಿದ ಡಾ. ಮಂಜುನಾಥ್-21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸಿಗರೇಟ್ ಸೇದುವಂತಿಲ್ಲ : ದಂಡಗಳಲ್ಲಿ ಬದಲಾವಣೆ; ಇಲ್ಲಿದೆ ವಿವರ-Arecanut price :ಕುಸಿತ ಕಂಡ ಅಡಿಕೆ ಧಾರಣೆ; ಬೆಳೆಗಾರರಿಗೆ ಹೊಡೆತ ಬೀಳಲು ಕಾರಣವೇನು?-ಶೋಭಾ ಕರಂದ್ಲಾಜೆ ಲೋಕಸಭೆ ಚುನಾವಣೆ ಸ್ಪರ್ಧಿಸದಂತೆ ಬಿಜೆಪಿ ಕಾರ್ಯಕರ್ತರಿಂದ ಪತ್ರ ಚಳುವಳಿ..!-18 ವರ್ಷ ಬಳಿಕ ದುಬೈ ಜೈಲಿನಲ್ಲಿದ್ದು ಭಾರತಕ್ಕೆ ಮರಳಿ ಕುಟುಂಬದ ಜೊತೆ ಸೇರಿದ ಐವರು; ಇಲ್ಲಿದೆ ವಿಡಿಯೋ-Vidya Balan: ವಿದ್ಯಾ ಬಾಲನ್ ಹೆಸರಿನಲ್ಲಿ ಹಣ ವಸೂಲಿ ;ದೂರು ದಾಖಲು.!-Taruwar Kohli: ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ತರುವರ್ ಕೊಹ್ಲಿ..!-ಉಡುಪಿ : ಗಂಗೊಳ್ಳಿ ಬೋಟ್ ಅಗ್ನಿ ದುರಂತ; ರಾಜ್ಯ ಸರ್ಕಾರದಿಂದ 1.75 ಕೋ. ಪರಿಹಾರ ಮಂಜೂರು..!-ಮೆಫೆಡ್ರೋನ್‌ ಎಂಬ 2,500 ಕೋಟಿ ರೂ. ಮೌಲ್ಯದ ಮಾದಕವಸ್ತು ಜಪ್ತಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ರೈತನ ಮಗಳಾಗಿ ರೈತರ ಅಭ್ಯುದಯಕ್ಕೆ ಕೆಲಸ ಮಾಡುತ್ತೇನೆ ಎಂದ ಶೋಭಾ ಕರಂದ್ಲಾಜೆ.

Twitter
Facebook
LinkedIn
WhatsApp
ರೈತನ ಮಗಳಾಗಿ ರೈತರ ಅಭ್ಯುದಯಕ್ಕೆ ಕೆಲಸ ಮಾಡುತ್ತೇನೆ ಎಂದ ಶೋಭಾ ಕರಂದ್ಲಾಜೆ.

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೈತರ ಪರ ಕೆಲಸ ಮಾಡುವ ಜವಾಬ್ದಾರಿಯನ್ನು ನನಗೆ ನೀಡಿದ್ದು, ನಾನು ರೈತರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತೇನೆ ಎಂದು ನೂತನ ಕೃಷಿ ಮತ್ತು ರೈತರ ಅಭಿವೃದ್ಧಿ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ರೈತರ ಪರವಾಗಿ ಕೆಲಸ ಮಾಡುವ ಜವಾಬ್ದಾರಿಯನ್ನು ನೀಡಿದ್ದು, ನಾನು ರೈತರ ಕಲ್ಯಾಣಕ್ಕಾಗಿ ಶ್ರಮಿಸಿ ಸರ್ಕಾರದ ಲಾಭಗಳು, ಯೋಜನೆಗಳು ರೈತರಿಗೆ ತಲುಪುವಂತೆ ಮಾಡುತ್ತೇನೆ ಎಂದಿದ್ದಾರೆ.
ಇನ್ನು ನಾನೊಬ್ಬ ರೈತನ ಮಗಳು ಹಾಗಾಗಿ ನನಗೆ ರೈತರ ನೋವು ನನಗೆ ತಿಳಿದಿದೆ. ರೈತರ ಕಲ್ಯಾಣಕ್ಕಾಗಿ ದುಡಿಯುತ್ತೇನೆ” ಎಂದಿದ್ದಾರೆ.
ರೈತರ ಪ್ರತಿಭಟನೆಯ ಕುರಿತು ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಯನ್ನು ವಿರೋಧಿಸಿ ರೈತರು ಪ್ರತಿಭಟಿಸುತ್ತಿದ್ದು ಅವರೊಂದಿಗೆ ಸರ್ಕಾರ ಮಾತುಕತೆ ನಡೆಸಿದ್ದು, ಈಗಲೂ ಮಾತನಾಡಲು ಸಿದ್ಧವಿದ್ದು, ಸರ್ಕಾರ ರೈತರೊಂದಿಗಿದೆ ಎಂಬುದನ್ನು ನಾವು ದೇಶಕ್ಕೆ ತಿಳಿಸಬೇಕಿದೆ ಎಂದು ಹೇಳಿದ್ದಾರೆ.
ಇನ್ನು ಬುಧವಾರ ಸಂಜೆಯಷ್ಟೇ ಮಂತ್ರಿಯಾಗಿ ಶೋಭಾ ಕರಂದ್ಲಾಜೆ ಪ್ರಮಾಣವಚನ ಸ್ವೀಕರಿಸಿದ್ದು, ಉಡುಪಿ – ಚಿಕ್ಕಮಗಳೂರು ಸಂಸದೆಯಾಗಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು