ಮಂಗಳವಾರ, ಫೆಬ್ರವರಿ 18, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ರೇವ್ ಪಾರ್ಟಿ ಪ್ರಕರಣ; ತೆಲುಗು ನಟಿ ಹೇಮಾ ಬಂಧನ..!

Twitter
Facebook
LinkedIn
WhatsApp
ರೇವ್ ಪಾರ್ಟಿ ಪ್ರಕರಣ; ತೆಲುಗು ನಟಿ ಹೇಮಾ ಬಂಧನ..!

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಜಿ.ಆರ್​. ಫಾರ್ಮ್‌ಹೌಸ್‌ನಲ್ಲಿ ರೇವ್ ಪಾರ್ಟಿ (Bengaluru Rave Party) ಮಾಡಿದ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ತೆಲುಗು ನಟಿ ಹೇಮಾ (Telugu Actress Hema) ಅವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಇಂದು (ಜೂನ್​ 3) ಹೇಮಾ ಅವರ ಬಂಧನ (Hema Arrest) ಆಗಿದೆ. ಡ್ರಗ್ಸ್‌ ಹಾಗೂ ರೇವ್ ಪಾರ್ಟಿ ಆಯೋಜನೆಯಲ್ಲಿ ಹೇಮಾ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ. ಆದರೆ ಫಾರ್ಮ್​ ಹೌಸ್​ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ವಿಡಿಯೋ ಮಾಡಿ ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲು ಹೇಮಾ ಪ್ರಯತ್ನಿಸಿದ್ದರು.

ಜಿ.ಆರ್​. ಫಾರ್ಮ್​ಹೌಸ್​ನಲ್ಲಿ ನಡೆದ ರೇವ್​ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ ಬಳಿಕ ಆರೋಪಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರ ವರದಿ ಬಂದಿದ್ದು, ನಟಿ ಹೇಮಾ ಡ್ರಗ್ಸ್‌ ಸೇವಿಸಿದ್ದು ದೃಢಪಟ್ಟಿದೆ. ಈ ಕುರಿತಂತೆ ಎರಡು ಸಲ ನೋಟಿಸ್ ನೀಡಿದ್ದರೂ ಸಿಸಿಬಿ ಎದುರು ವಿಚಾರಣೆಗೆ ಹೇಮಾ ಹಾಜರಾಗಿರಲಿಲ್ಲ. ಹೀಗಾಗಿ ಸಿಸಿಬಿ ಪೊಲೀಸರು ಹೇಮಾರನ್ನು ಅರೆಸ್ಟ್​ ಮಾಡಿದ್ದಾರೆ.

ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಹೇಮಾಗೆ ಮೆಡಿಕಲ್ ಟೆಸ್ಟ್‌ ಮಾಡಲಾಗಿದೆ. ನಾಳೆ ಬೆಳಗ್ಗೆ ಅವರನ್ನು ಆನೇಕಲ್ ಕೋರ್ಟ್‌ಗೆ ಪೊಲೀಸರು ಹಾಜರುಪಡಿಸಲಿದ್ದಾರೆ. ಈ ಪ್ರಕರಣದಲ್ಲಿ ಮೊದಲಿನಿಂದಲೂ ಜನರ ಕಣ್ಣಿನಿಂದ ತಪ್ಪಿಸಿಕೊಳ್ಳಲು ಹೇಮಾ ಪ್ರಯತ್ನಿಸುತ್ತಿದ್ದರು. ಇಂದು (ಜೂನ್​ 3) ಕೂಡ ವಿಚಾರಣೆಗೆ ಬರುವಾಗ ಅವರು ಬುರ್ಕಾ ಧರಿಸಿದ್ದರು!

ಪೆಡ್ಲರ್​ ಬಂಧನ:

ಟಾಲಿವುಡ್​ ಸೆಲೆಬ್ರಿಟಿಗಳು ನಡೆಸಿದ್ದ ಬೆಂಗಳೂರಿನ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಓರ್ವ ಡ್ರಗ್ ಪೆಡ್ಲರ್​ನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯು ಡಿ.ಜೆ. ಹಳ್ಳಿ ನಿವಾಸಿಯಾಗಿದ್ದು ಇಮಾರ್ ಶರೀಫ್ ಎಂದು ಗುರುತಿಸಲಾಗಿದೆ. ಈತ ಪಾರ್ಟಿಯಲ್ಲಿ ಡ್ರಗ್ಸ್ ಸಪ್ಲೈ ಮಾಡಿದ್ದ. ಈತನ ಬಳಿ 40 ಎಂಡಿಎಂಎ ಮಾತ್ರೆಗಳು ಪತ್ತೆಯಾಗಿವೆ. ಸದ್ಯ ಶರೀಫ್​ನನ್ನು ಬಂಧಿಸಿ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist