ಬುಧವಾರ, ಫೆಬ್ರವರಿ 8, 2023
‘ಐ ಲವ್ ಯೂ’ ಎಂದ ನಟಿ ಶ್ರಾವ್ಯ ರಾವ್-ಇಂದಿನಿಂದ ಕರ್ನಾಟಕ vs ಸೌರಾಷ್ಟ್ರ ಸೆಮೀಸ್ ಫೈಟ್-ಯುವತಿಗೆ ಮೆಸೇಜ್ ಮಾಡಿದಕ್ಕೆ ಸಹೋದರನಿಂದ ಯುವಕನ ಮೇಲೆ ಹಲ್ಲೆ-ಮದುವೆಗೂ ಮುಂಚೆ ಕಂಡೀಷನ್ಸ್ ಅಪ್ಲೈ- ಬೆಂಗಳೂರಿನ ವಧು, ವರರ ನಯಾ ಟ್ರೆಂಡ್-ಟರ್ಕಿ ಸಿರಿಯಾ ಭೂಕಂಪ: ಸಾವಿನ ಸಂಖ್ಯೆ 8 ಸಾವಿರ; ಗಾಯಾಳುಗಳ ಸಂಖ್ಯೆ 35 ಸಾವಿರ, ರಕ್ಷಣಾ ಕಾರ್ಯಕ್ಕೆ ಅಡಚಣೆ-ಮನೆ ಮುಂದೆ ಮಲಗಿದವರ ಮೇಲೆ ಹುಚ್ಚು ನಾಯಿ ದಾಳಿ – 25ಕ್ಕೂ ಅಧಿಕ ಜನ ಆಸ್ಪತ್ರೆ ದಾಖಲು-ಕಾರ್ಕಳ : ಮಹಿಳೆ ನೇಣು ಬಿಗಿದು ಆತ್ಮಹತ್ಯೆ-ಕಟ್ಟಡದ ಅವಶೇಷಗಳಡಿಯೇ ಮಗುವಿಗೆ ಜನ್ಮ ನೀಡಿ ಮಹಿಳೆ ಸಾವು-ಬೈಕ್‌ನಲ್ಲಿ ರಾಂಚಿ ಸ್ಟೇಡಿಯಂನಿಂದ ಬಿಂದಾಸ್‌ ಆಗಿ ಹೊರಟ ಎಂ ಎಸ್ ಧೋನಿ..! ವಿಡಿಯೋ ವೈರಲ್-ಹೊಸ ಮುಖದ ಬಗ್ಗೆ ರಾಹುಲ್ ಗಾಂಧಿ ಒಲವು. ಕೊಡಗಿನಲ್ಲಿ ಪೊನ್ನನ್ನ,ಡಾ. ಮಂತರ್ ಗೌಡ, ಬೆಳ್ತಂಗಡಿಯಲ್ಲಿ ರಕ್ಷಿತ್ ಶಿವರಾಂ ಬಹುತೇಕ ಫಿಕ್ಸ್.
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ರಿಯಲ್ ಬಾಹುಬಲಿ: ತಲೆಯ ಮೇಲೆ ಬೈಕ್ ಏರಿಸಿ ಹೊರಟ ಕೂಲಿ..!

Twitter
Facebook
LinkedIn
WhatsApp
ರಿಯಲ್ ಬಾಹುಬಲಿ: ತಲೆಯ ಮೇಲೆ ಬೈಕ್ ಏರಿಸಿ ಹೊರಟ ಕೂಲಿ..!

ಇಂದು ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿ ಹೊಂದಲು ಏನೆಲ್ಲ ಸ್ಟಂಟ್​ಗಳನ್ನು ಮಾಡುತ್ತಿದ್ದಾರೆ ಜನರು. ಸ್ಟಂಟ್ ಮಾಡಲು ಹೋಗಿ ಅವಘಡಕ್ಕೂ ಈಡಾಗುತ್ತಿದ್ದಾರೆ. ಆದರೆ ನಿಜ ಜೀವನದಲ್ಲಿ ಹೊಟ್ಟೆಪಾಡಿಗಾಗಿ ಹೀಗೆ ಬದುಕುವವರು ಕಣ್ಣಿಗೆ ಬೀಳುವುದು ಅಪರೂಪ. ಗುಲ್ಜಾರ್ ಸಹಾಬ್​ ಎಂಬ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋ ವೈರಲ್ ಆಗಿದೆ. 88,800 ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. 5,000ಕ್ಕಿಂತಲೂ ಹೆಚ್ಚು ಜನ ಈ ವಿಡಿಯೋ ಇಷ್ಟಪಟ್ಟಿದ್ದಾರೆ. ನೆಟ್ಟಿಗರಂತೂ ಇವನೇ ನಿಜವಾದ ಬಾಹುಬಲಿ ಎಂದು ಕೊಂಡಾಡುತ್ತಿದ್ದಾರೆ.

ಬೈಕ್​ ಓಡಿಸುವುದನ್ನ ಕಲಿಯುವುದು ಒಂದು ಸಾಹಸವಾದರೆ ಹೀಗೆ ಇಷ್ಟು ಭಾರದ ಬೈಕ್​ ಅನ್ನು ತಲೆಯಮೇಲೆ ಹೊತ್ತು ಏಣಿ ಏರುವ ಸಾಹಸ ಇದೆಯಲ್ಲ ಇದು ಸಾಮಾನ್ಯರಿಗೆ ಒದಗುವಂಥದ್ದಲ್ಲ. ಏಣಿಗೆ ಕೈಮುಗಿದು ಒಂದೊಂದು ಮೆಟ್ಟಿಲುಗಳನ್ನು ಅವ ಏರುವ ಕ್ರಮ ಅಪರೂಪದಲ್ಲಿ ಅಪರೂಪ.

ನೆಟ್ಟಿಗರನ್ನಂತೂ ಈ ವಿಡಿಯೋ ಕಣ್ಣುಕಣ್ಣು ಬಿಟ್ಟು ನೋಡುವಂತೆ ಮಾಡುತ್ತಿದೆ. ಅವನ ಕುತ್ತಿಗೆಯಲ್ಲಿರುವ ತ್ರಾಣ ನನಗೆ ಬೇಕು ಎನ್ನುತ್ತಿದ್ದಾರೆ ನೆಟ್ಟಿಗರು.

ರಿಯಲ್ ಬಾಹುಬಲಿ: ತಲೆಯ ಮೇಲೆ ಬೈಕ್ ಏರಿಸಿ ಹೊರಟ ಕೂಲಿ..!

ನಿಜವಾದ ಬಾಹುಬಲಿಯಪ್ಪಾ ನೀನು ಎನ್ನುತ್ತಿದ್ದಾರೆ ಹಲವರು. ಇವನು ಯಾವ ಸಾಹಸ ಪ್ರದರ್ಶನಕ್ಕಾಗಿ ಮಾಡುತ್ತಿಲ್ಲ. ತನ್ನ ಕುಟುಂಬದ ಹೊಟ್ಟೆಬಟ್ಟೆನೆತ್ತಿ ಕಾಯಲು ಅನಿವಾರ್ಯವಾಗಿ ಈ ಕೆಲಸ ಮಾಡುತ್ತಿದ್ದಾನೆ ಎಂದಿದ್ದಾರೆ ಮತ್ತೂ ಕೆಲವರು. ಆದರೆ ಈ ವಿಡಿಯೋ ಎಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿದು ಬಂದಿಲ್ಲ.

ಇವನ ಆತ್ಮವಿಶ್ವಾಸವನ್ನು ಯಾರೂ ಮೆಚ್ಚತಕ್ಕಂಥದ್ದು. ಅಪಾಯಕ್ಕೆ ತೆರೆದುಕೊಂಡು ನಿತ್ಯವೂ ಹೀಗೆ ಹೊಟ್ಟೆ ಹೊರೆಯುವವರ ಬಗ್ಗೆ ಸಹಾನುಭೂತಿ ಇರಲಿ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ