ಗುರುವಾರ, ಫೆಬ್ರವರಿ 22, 2024
ಕುಡಿಬೇಡ ಎಂದು ಬುದ್ಧಿ ಹೇಳಿದಕ್ಕೆ ಯುವಕ ಆತ್ಮಹತ್ಯೆ..!-Suratkal :ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದಾಗಲೇ ಹೃದಯಾಘಾತ; ಯುವಕ ಸಾವು.!-ದೆಹಲಿ ಚಲೋ ಪ್ರತಿಭಟನೆಯಲ್ಲಿ ಓರ್ವ ಯುವ ರೈತ ಸಾವು ; 2 ದಿನಗಳ ಕಾಲ ಪ್ರತಿಭಟನೆ ಸ್ಥಗಿತ.!-Tanya Singh: ಖ್ಯಾತ ಮಾಡೆಲ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ; ಐಪಿಎಲ್ ಸ್ಟಾರ್ ಆಟಗಾರನಿಗೆ ನೋಟಿಸ್.!-ಡಾಲಿ ಧನಂಜಯ್: ಲೋಕಸಭೆ ಚುನಾವಣಾ ಸ್ಪರ್ಧೆ ಬಗ್ಗೆ ನಟ ಡಾಲಿ ಧನಂಜಯ್ ಪ್ರತಿಕ್ರಿಯೆ ಏನು?-ಪುತ್ತೂರು: ಟಿಪ್ಪರ್ ಮತ್ತು ಬೈಕ್ ನಡುವೆ ಅಪಘಾತ ; ಚಿಕಿತ್ಸೆ ಫಲಿಸದೆ ಯುವಕ ಸಾವು!-Gold Rate Today : ಸತತ ಇಳಿಕೆ ಕಂಡಿದ್ದ ಚಿನ್ನದ ದರ ಮತ್ತೆ ಏರಿಕೆಯತ್ತ..!-IPL 2024: ಇಂದು ಐಪಿಎಲ್ 2024 ವೇಳಾಪಟ್ಟಿ ಪ್ರಕಟ; ಫೈನಲ್ ಪಂದ್ಯ ಯಾವಾಗ?-ಬೆಡ್​ರೂಮ್​ಗೆ ನುಗ್ಗಿದ ಅಪರಿಚಿತನನ್ನು ಕೊಂದು ಪೊಲೀಸರಿಗೆ ಶರಣಾದ ವ್ಯಕ್ತಿ..!-ತನ್ನ ಬಗ್ಗೆ ಸುಳ್ಳು ಸುದ್ದಿಯ ಗ್ರಾಫಿಕ್ ಸೃಷ್ಟಿ ಮಾಡಿದವರ ವಿರುದ್ಧ ಕಾನೂನು ಕ್ರಮ - ಮಡಿಕೇರಿ ಶಾಸಕ ಡಾ.ಮಂತರ್‌ ಗೌಡ ಸ್ಪಷ್ಟನೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ರಾಷ್ಟ್ರ ರಾಜಕಾರಣದಲ್ಲಿ ತೃತೀಯರಂಗದ ರಚನೆಯ ಬಗ್ಗೆ ಶುರುವಾಗಿದೆ ಚರ್ಚೆ!

Twitter
Facebook
LinkedIn
WhatsApp
ರಾಷ್ಟ್ರ ರಾಜಕಾರಣದಲ್ಲಿ ತೃತೀಯರಂಗದ ರಚನೆಯ ಬಗ್ಗೆ ಶುರುವಾಗಿದೆ ಚರ್ಚೆ!

ನವದೆಹಲಿ: ಬಿಜೆಪಿ ವಿರುದ್ಧ ಮೂರನೇ ಫ್ರಂಟ್ ರಚನೆಯಾಗುವ ಬಗ್ಗೆ ಊಹಾಪೋಹಗಳ ನಡುವೆ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ(ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ರನ್ನು ಭೇಟಿಯಾಗಿ ಚರ್ಚೆ ನಡೆಸಿದರು.

ಶರದ್ ಪವಾರ್ ಅವರ ನಿವಾಸದಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ಇನ್ನು ಕಳೆದ ಎರಡು ವಾರದಲ್ಲಿ ಇದು ಎರಡನೇ ಭೇಟಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಎನ್‌ಸಿಪಿಯ ಸಾಮಾನ್ಯ ಸಭೆಗೂ ಒಂದು ದಿನ ಮೊದಲು ಪ್ರಶಾಂತ್ ಕಿಶೋರ್ ಮತ್ತು ಪವಾರ್ ಸಭೆ ನಡೆಸಿದ್ದಾರೆ. ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಗೆಲುವಿನಲ್ಲಿ ಪ್ರಶಾಂತ್ ಕಿಶೋರ್ ಪ್ರಮುಖ ಪಾತ್ರ ವಹಿಸಿದ್ದರು. ಇದಕ್ಕೂ ಮುನ್ನ ಜೂನ್ 11ರಂದು ಪವಾರ್ ಅವರನ್ನು ಭೇಟಿ ಮಾಡಲಾಗಿತ್ತು. ಇದು ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ಒಗ್ಗೂಡುತ್ತಿರುವುದಕ್ಕೆ ಸಾಕ್ಷಿಯಾಗಿತ್ತು.

ಮೂಲಗಳ ಪ್ರಕಾರ, ಮಾಜಿ ಹಣಕಾಸು ಸಚಿವ ಪ್ರಸ್ತುತ ಟಿಎಂಸಿ ಮುಖಂಡ ಯಶ್ವಂತ್ ಸಿನ್ಹಾ, ರಾಷ್ಟ್ರೀಯ ಜನತಾದಳ(ಆರ್‌ಜೆಡಿ) ನಾಯಕ ಮನೋಜ್ ಝಾ ಮತ್ತು ಆಮ್ ಆದ್ಮಿ ಪಕ್ಷದ(ಎಎಪಿ) ಮುಖಂಡ ಸಂಜಯ್ ಸಿಂಗ್ ಕೂಡ ಮಂಗಳವಾರ ಪವಾರ್ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. 2014ರ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಪರ ಕೆಲಸ ಮಾಡಿದ್ದ ಕಿಶೋರ್ ನಂತರ ಎನ್ ಡಿಎ ವಿರೋಧಿ ಪಕ್ಷಗಳಿಗೆ ಚುನಾವಣೆ ತಂತ್ರಗಾರರಾಗಿ ಕೆಲಸ ಮಾಡಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಮತ್ತು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಪರ ಚುನಾವಣಾ ಕಾರ್ಯತಂತ್ರವನ್ನು ರೂಪಿಸಿದ್ದರು. ಇದೀಗ ಇಂದು ಮೀಟಿಂಗ್ ನಡೆಯಲಿದ್ದು ಎಲ್ಲ ಬೆಳವಣಿಗೆಗಳು ಕುತೂಹಲವನ್ನು ಕೆರಳಿಸಿವೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು