ಶುಕ್ರವಾರ, ಜೂನ್ 9, 2023
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು-ಕಾರು ಪಲ್ಟಿಯಾಗಿ ಬಿಜೆಪಿ ಮುಖಂಡ ಸಾವು; ಇಬ್ಬರು ಮಕ್ಕಳು ಸೇರಿ ನಾಲ್ವರಿಗೆ ಗಾಯ-ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ-ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ-ಆಸೀಸ್‌ ವೇಗದ ದಾಳಿಗೆ ಕಂಗಾಲಾದ ಭಾರತಕ್ಕೆ ಇನ್ನಿಂಗ್ಸ್ ಹಿನ್ನಡೆ ಭೀತಿ; ಅಜಿಂಕ್ಯ ರಹಾನೆ ಆಸರೆ!-ಭಯಾನಕ ಮರ್ಡರ್; ಸಂಗಾತಿಯ ಶರೀರವನ್ನು ಪೀಸ್ ಪೀಸ್ ಮಾಡಿ ಕುಕ್ಕರ್ ನಲ್ಲಿ ಬೇಯಿಸಿದ ಕ್ರೂರಿ ಪ್ರೇಮಿ..!-ಕಾಂಗ್ರೆಸ್ ಸರ್ಕಾರಕ್ಕೆ 18 ಸಲಹೆಗಳನ್ನ ಕೊಟ್ಟ ಶಿಕ್ಷಣ ತಜ್ಞ ಪ್ರೊ ಎಂಆರ್ ​ದೊರೆಸ್ವಾಮಿ-ಸುಧಾಕರ್​​ನಿಂದಲೇ ನಾನು ಸೋತಿದ್ದು; ಎಂಟಿಬಿ ನಾಗರಾಜ್ ನೇರ ಆರೋಪ-ಕೇರಳಕ್ಕೆ ಮಳೆಯ ಅಬ್ಬರ ಶುರು, 48 ಗಂಟೆಗಳಲ್ಲಿ ಕರ್ನಾಟಕದಲ್ಲೂ ಮಳೆ!-16 ಸಾವಿರ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದ ಹೃದ್ರೋಗ ತಜ್ಞ ಹೃದಯಾಘಾತದಿಂದ ನಿಧನ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ರಾಜ್ಯ ರಾಜಕೀಯದಲ್ಲಿ ಸ್ಫೋಟಕ ಸುದ್ದಿ- 28 ಮಂದಿ ಶಾಸಕರಿಂದ ಅರುಣ್ ಸಿಂಗ್ ಭೇಟಿ?

Twitter
Facebook
LinkedIn
WhatsApp
ರಾಜ್ಯ ರಾಜಕೀಯದಲ್ಲಿ ಸ್ಫೋಟಕ ಸುದ್ದಿ- 28 ಮಂದಿ ಶಾಸಕರಿಂದ ಅರುಣ್ ಸಿಂಗ್ ಭೇಟಿ?

ಬೆಂಗಳೂರು – ಬಿಜೆಪಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಅವರನ್ನು ವಯಕ್ತಿಕವಾಗಿ ಭೇಟಿ ಮಾಡಲು 28 ಬಿಜೆಪಿ ಶಾಸಕರು ಅವಕಾಶ ಕೇಳಿದ್ದಾರೆ.

ಬೆಳಗ್ಗೆ 9 ಗಂಟೆಯಿಂದ ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಶಾಸಕರ ಜೊತೆಗೆ ಅರುಣ ಸಿಂಗ್ ವಯಕ್ತಿಕವಾಗಿ ಮಾತನಾಡಲಿದ್ದಾರೆ. ಬೆಳಗಾವಿಯ ಇಬ್ಬರು ಶಾಸಕರು ಸೇರಿದಂತೆ ಸುಮಾರು 28 ಶಾಸಕರು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತನಾಡಲು ಅವಕಾಶ ಕೇಳಿದ್ದಾರೆ.
ಹರತಾಳು ಹಾಲಪ್ಪ, ಸಿದ್ದು ಸವದಿ, ರಾಜೇಶ ಗೌಡ, ಅಭಯ ಪಾಟೀಲ, ಕುಮಾರ ಬಂಗಾರಪ್ಪ, ಸಿ.ಪಿ.ಯೋಗೀಶ್ವರ, ರೂಪಾಲಿ ನಾಯಕ, ಸುನೀಲ ಕುಮಾರ, ಪರಪ್ಪ ಮುನವಳ್ಳಿ, ಅಪ್ಪಚ್ಚು ರಂಜನ್, ಉದಯ ಗರುಡಾಚಾರ, ಜ್ಯೋತಿ ಗಣೇಶ, ಪ್ರೀತಂ ಗೌಡ, ಅರವಿಂದ ಬೆಲ್ಲದ್, ಮಹೇಶ ಕುಮಠಳ್ಳಿ, ಸೋಮಶೇಖರ ರೆಡ್ಡಿ, ಸಿದ್ದು ಸವದಿ, ಮಹಾದೇವಪ್ಪ ಯಾದವಾಡ ಸೇರಿದಂತೆ 28 ಜನರು ಅವಕಾಶ ಕೇಳಿದ್ದಾರೆ.
ಸಚಿವ ಉಮೇಶ ಕತ್ತಿ, ಶಾಸಕರಾದ ಮಹಾಂತೇಶ ದೊಡ್ಡಗೌಡರ್ ಮತ್ತು ಅನಿಲ ಬೆನಕೆ ಹೆಸರು ಕೂಡ ಕೇಳಿ ಬಂದಿದ್ದು ಖಚಿತವಾಗಿಲ್ಲ.
ಆದರೆ ಇದರಲ್ಲಿ ಎಷ್ಟು ಜನರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರವಾಗಿದ್ದಾರೆ? ಎಷ್ಟು ಜನರು ಯಡಿಯೂರಪ್ಪ ವಿರುದ್ಧವಾಗಿದ್ದಾರೆ ಎನ್ನುವುದು ಖಚಿತವಾಗಿಲ್ಲ. ಯಡಿಯೂರಪ್ಪ ಪರವಾಗಿರುವವರು ಸೀಕ್ರೆಟ್ ಭೇಟಿ ಮಾಡುವ ಸಾಧ್ಯತೆ ಕಡಿಮೆ. ಅರುಣ ಸಿಂಗ್ ಶಾಸಕರೊಂದಿಗೆ ಚರ್ಚಿಸುವ ಹೊತ್ತಿನಲ್ಲಿ ಮುಖ್ಯಮಂತ್ರಿಗಳಾಗಲಿ, ಬಿಜೆಪಿ ರಾಜ್ಯಾಧ್ಯಕ್ಷರಾಗಲಿ ಇರುವುದಿಲ್ಲ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು