ಮಂಗಳವಾರ, ಮೇ 30, 2023
ಹಾವನ್ನು ಸೆರೆ ಹಿಡಿಯಲು ಹೋದಾಗ ನಾಗರ ಹಾವು ಕಚ್ಚಿ ಸ್ನೇಕ್ ನರೇಶ್ ಸಾವು!-ದ.ಕ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ - ಸುನಿಲ್ ಕುಮಾರ್-ದ.ಕ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ - ಸುನಿಲ್ ಕುಮಾರ್-ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆ ; ಪದಕಗಳನ್ನು ಗಂಗಾ ನದಿಗೆ ಎಸೆಯಲು ಕುಸ್ತಿಪಟುಗಳ ನಿರ್ಧಾರ-ಕ್ರೋಮಿಂಗ್ ಟ್ರೆಂಡ್ ಗೆ ಬಲಿಯಾದ 13 ವರ್ಷದ ಬಾಲಕಿ! ಬ್ಲೂವೇಲ್ ರೀತಿಯ ಈ ಗೇಮಿಂಗ್ ಯಾವುದು?-ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಕಾಲ ಬೆರಳಿಗೆ ಹಾವು ಕಡಿದು ವಿದ್ಯಾರ್ಥಿನಿ ಸಾವು-ಮಹಿಳೆಯರಿಗೂ ಕಂಬಳದಲ್ಲಿ ಅವಕಾಶ, ತರಬೇತಿಗೆ ಸಿದ್ಧವಾಗುತ್ತಿದೆ ವೇದಿಕೆ-ದುಬಾರಿ ಕಾರು ಬಿಟ್ಟು ಆಟೋದಲ್ಲಿ ಪ್ರಯಾಣಿಸಿದ ನಟಿ ಇರಾ ಖಾನ್‌-ಉಡುಪಿ : ಗೇರುಬೀಜ ಸಾಗಾಟದ ಲಾರಿ ಪಲ್ಟಿ ಅಪಾಯದಿಂದ ಪಾರಾದ ಚಾಲಕ-ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ: ರಾಮಲಿಂಗಾರೆಡ್ಡಿ ಘೋಷಣೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ರಾಜ್ಯಕ್ಕಿಂದು ಪ್ರಧಾನಿ ಮೋದಿ ಆಗಮನ

Twitter
Facebook
LinkedIn
WhatsApp
amit shah 0116307512631660060556 3

ಬೆಂಗಳೂರು: ಚುನಾವಣೆ ಹೊತ್ತಲ್ಲಿ ಬಿಜೆಪಿ ರಾಜ್ಯದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದಾರೆ. ದಾವಣಗೆರೆಯಲ್ಲಿ ಇಂದು (ಮಾ.25) ನಡೆಯಲಿರುವ ‘ವಿಜಯ ಸಂಕಲ್ಪ ಯಾತ್ರೆ’ಯ ಸಮಾರೋಪ ಸಮಾರಂಭ ಹಾಗೂ ಬೆಂಗಳೂರಿನಲ್ಲಿ ಕೆ.ಆರ್.ಪುರಂ ಮತ್ತು ವೈಟ್ ಫೀಲ್ಡ್ ನಡುವಿನ ಮೆಟ್ರೋ ಉದ್ಘಾಟನೆಗೆ ಮೋದಿ ಬರುತ್ತಿದ್ದಾರೆ.

ಬಹುನೀರಿಕ್ಷೀತ ಕೆ.ಆರ್.ಪುರ ಮತ್ತು ವೈಟ್ ಫೀಲ್ಡ್ ನಡುವಿನ ಮೆಟ್ರೋ ಉದ್ಘಾಟನೆ ಕೂಡ ಇಂದು ಪ್ರಧಾನಿ ಮೋದಿ ಅವರಿಂದ ಆಗಲಿದೆ. 4500 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರೋ ಹೊಸ ಮೆಟ್ರೋ ಮಾರ್ಗ ಇಂದು ಲೋಕಾರ್ಪಣೆಗೊಳ್ಳಲಿದೆ. ಮಧ್ಯಾಹ್ನ 13:55ಕ್ಕೆ ಪ್ರಧಾನಿಗಳು ಎಚ್‌ಎಎಲ್‌ನಿಂದ ರಸ್ತೆ ಮೂಲಕ ನೇರವಾಗಿ ವೈಟ್ ಫೀಲ್ಡ್‌ನ ಕಾಡುಗೋಡಿ ಮೆಟ್ರೋ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. 1 ಗಂಟೆಯಿಂದ 1:35 ರ ಒಳಗೆ 13.71 ಕಿ.ಮೀ ಉದ್ದ ಮೆಟ್ರೋ ಮಾರ್ಗವನ್ನ ಉದ್ಘಾಟಿಸಲಿರೋ ನಮೋ, ಬಳಿಕ ಮೆಟ್ರೋ ಸಂಚಾರ ಕೂಡ ಮಾಡಲಿದ್ದಾರೆ. ವೈಟ್ ಫೀಲ್ಡ್‌ನ ಕಾಡುಗೋಡಿ ನಿಲ್ದಾಣದಿಂದ ಒಂದು ಕಿ.ಮೀ ದೂರದಲ್ಲಿರುವ ಚೆನ್ನಸಂದ್ರ ಮೆಟ್ರೋ ನಿಲ್ದಾಣದವರೆಗೆ ಹೊಸ ಮಾರ್ಗದಲ್ಲಿ ಸಂಚಾರ ಮಾಡಿ ಅಲ್ಲಿಂದ ನೇರವಾಗಿ ಮತ್ತೆ ಎಚ್‌ಎಎಲ್‌ಗೆ ತೆರಳಿ ಅಲ್ಲಿಂದ ದಾವಣಗೆರೆಗೆ ಪ್ರಯಾಣ ಬೆಳೆಸಲಿದ್ದಾರೆ.

ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪಕ್ಕೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ. ಜನರ ಮಧ್ಯೆ ತೆರೆದ ವಾಹನದಲ್ಲಿ ಆಗಮಿಸುವ ಮೋದಿಗಾಗಿ ಆಕರ್ಷಕ ತೆರೆದ ರಥವನ್ನು ತಯಾರಿ ಮಾಡಲಾಗಿದೆ. ಕೇಸರಿ ಬಣ್ಣದ ತೆರದ ವಾಹನವನ್ನು ಗುಜರಾತ್‌ನಿಂದ ತರಿಸಲಾಗಿದ್ದು, ಅದೇ ಮಾದರಿಯ ಕರ್ನಾಟಕದ ಮತ್ತೆರೆಡು ವಾಹನಗಳು ಕೂಡ ಸಜ್ಜಾಗಿವೆ. ಆ ವಾಹನಗಳು ಕೇಸರಿ ಬಣ್ಣದಿಂದ ಕಂಗೊಳಿಸ್ತಿದ್ದು, ಸುತ್ತಲು ಮೋದಿ ಭಾವಚಿತ್ರ ಆಕರ್ಷಿಸುತ್ತಿವೆ. ಈವರೆಗೆ ನಡೆದ ರ‍್ಯಾಲಿಗಳಲ್ಲಿ ಅತಿ ವೈಭವಪೂರ್ಣ ರಥಗಳಲ್ಲಿ ರೋಡ್ ಶೋ ನಡೆಸಿದ್ದ ಮೋದಿ ಈ ಬಾರಿ ಸರಳ ಹಾಗೂ ಆಕರ್ಷಕವಾದ ತೆರೆದ ವಾಹನದಲ್ಲಿ ಜನರ ಮಧ್ಯೆ ಬರಲಿದ್ದಾರೆ. ಈ ಮೂರು ವಾಹನಗಳಲ್ಲಿ ಎಸ್ಪಿಜಿ ತಂಡ ಅಂತಿಮಗೊಳಿಸಿದ ರಥವನ್ನು ಮೋದಿ ಏರಲಿದ್ದಾರೆ.

ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬರುವ 8 ಲಕ್ಷಕ್ಕೂ ಅಧಿಕ ಕಾರ್ಯಕರ್ತರಿಗೆ ಊಟ ಮತ್ತು ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ವೇದಿಕೆಯ ಮುಂಭಾಗದಲ್ಲಿ ಬೃಹತ್ ಪೆಂಡಾಲ್ ಹಾಕಿದ್ದು, ಒಂದು ಸಾವಿರ ಬಾಣಸಿಗರಿಂದ ಊಟ ಮತ್ತು ಉಪಾಹಾರ ತಯಾರಿಸಲಾಗ್ತಿದೆ. ಬೆಳಗ್ಗೆ ಉಪಹಾರಕ್ಕೆ ಉಪ್ಪಿಟ್ಟು, ಮಧ್ಯಾಹ್ನ ಊಟಕ್ಕೆ ಪಲಾವ್, ಗೋಧಿ ಹುಗ್ಗಿ, ಮೊಸರನ್ನ ವ್ಯವಸ್ಥೆ ಮಾಡಲಾಗಿದೆ. ಒಂದು ಲಕ್ಷ ಜನರಿಗೆ ಉಪಾಹಾರ, 8 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. 400 ಊಟದ ಕೌಂಟರ್‌ಗಳನ್ನ ತೆರೆಯಲಾಗಿದ್ದು, ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ 200 ಕೌಂಟರ್ ವ್ಯವಸ್ಥೆ ಮಾಡಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ