ಭಾನುವಾರ, ಮೇ 26, 2024
ಜೂನ್ 1 ರಿಂದ ಐದು ದಿನ ಮದ್ಯ ಮಾರಾಟ ಬಂದ್..!-ನಾನು ಕೈಹಿಡಿದು ಬೆಳೆಸಿದವರೇ ನನ್ನನ್ನು ವಜಾ ಮಾಡಲು ಶಿಫಾರಸ್ಸು ಮಾಡಿದ್ದಾರೆ; ರಘುಪತಿ ಭಟ್-ಚುನಾವಣೆ ಗೆದ್ದು ಬಿಜೆಪಿಯ ಶಾಸಕನಾಗುತ್ತೇನೆ; ಜಗದೀಶ್ ಶೆಟ್ಟರ್ ನನಗೆ ಮಾದರಿ - ರಘುಪತಿ ಭಟ್-ಎಸ್ಆರ್ ಹೆಚ್ ತಂಡದ ಮಾಲಕಿ ನ್ಯಾಷನಲ್ ಕ್ರಶ್ ಕಾವ್ಯ ಮಾರನ್ ಹಿನ್ನೆಲೆ ಏನು..!-ಉಡುಪಿ: ನಡು ರಸ್ತೆಯಲ್ಲೇ ಎರಡು ತಂಡದ ಯುವಕರ ನಡುವೆ ಗ್ಯಾಂಗ್ ವಾರ್; ಇಲ್ಲಿದೆ ವಿಡಿಯೋ-ಬಸ್ಸನ್ನು ಚಲಾಯಿಸುವಾಗಲೇ ಛತ್ರಿ ಹಿಡಿದು ವಿಡಿಯೋ ಮಾಡಿದ ಡ್ರೈವರ್; ನಿರ್ವಾಹಕಿ ಮತ್ತು ಚಾಲಕ ಸಸ್ಸೆಂಡ್..!-ಬಸ್ಸನ್ನು ಚಲಾಯಿಸುವಾಗಲೇ ಛತ್ರಿ ಹಿಡಿದು ವಿಡಿಯೋ ಮಾಡಿದ ಡ್ರೈವರ್; ನಿರ್ವಾಹಕಿ ಮತ್ತು ಚಾಲಕ ಸಸ್ಸೆಂಡ್..!-ಪೋರ್ಷೆ ಕಾರು ಅಪಘಾತ ಪ್ರಕರಣ: ಅಪ್ರಾಪ್ತನ ತಂದೆಗೆ ನ್ಯಾಯಾಂಗ ಬಂಧನ ; ಇಬ್ಬರು ಪೊಲೀಸರು ಅಮಾನತು..!-miyazaki mango: ಜಗತ್ತಿನಲ್ಲಿ ದುಬಾರಿ ಮಾವಿನ ಹಣ್ಣಿನ ಪಟ್ಟಿಯಲ್ಲಿ ಮಿಯಾಜಕಿ ಹಣ್ಣಿನ ವಿಶೇಷತೆ ಏನು..?-ಮಧ್ಯಪ್ರಿಯರಿಗೆ ಜೂನ್ ಮೊದಲ ವಾರದಲ್ಲಿ ಎಣ್ಣೆ ಸಿಗೋದು ಡೌಟ್..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ರಾಜಕಾರಣಿಗಳಂತೆ ಬಹಿರಂಗವಾಗಿ ಕಿತ್ತಾಡಲು ಶುರುಮಾಡಿದ ಅಧಿಕಾರಿಗಳು-ಮೈಸೂರಿನಲ್ಲಿ ಅಧಿಕಾರಿ ಶಿಲ್ಪಾ ನಾಗ್ ರಾಜೀನಾಮೆ.

Twitter
Facebook
LinkedIn
WhatsApp
ರಾಜಕಾರಣಿಗಳಂತೆ ಬಹಿರಂಗವಾಗಿ ಕಿತ್ತಾಡಲು ಶುರುಮಾಡಿದ ಅಧಿಕಾರಿಗಳು-ಮೈಸೂರಿನಲ್ಲಿ ಅಧಿಕಾರಿ ಶಿಲ್ಪಾ ನಾಗ್ ರಾಜೀನಾಮೆ.

ಮೈಸೂರು: ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರಿ ರಾಜಕಾರಣಿಗಳಂತೆ ವರ್ತಿಸುತ್ತಿರುವ ಅಧಿಕಾರಿಗಳ ಬಹಿರಂಗ ಸಮರ ಮೈಸೂರಿನಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ.

ಮೈಸೂರಿನಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ನಡುವೆ ಶೀತಲ ಸಮರ ನಡೆಯುತ್ತಿದೆ. ಸ್ವತಂತ್ರವಾಗಿ ಕೆಲಸ ಮಾಡಲು ಜಿಲ್ಲಾಧಿಕಾರಿ ಬಿಡುತ್ತಿಲ್ಲ ಎಂದು ತೀವ್ರ ಬೇಸರ ವ್ಯಕ್ತಪಡಿಸಿರುವ ಪಾಲಕೆ ಆಯುಕ್ತೆ ಶಿಲ್ಪಾ ನಾಗ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿರುವ ಆಯುಕ್ತೆ ಶಿಲ್ಪಾ ನಾಗ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ಕೆಲಸ ಮಾಡಲು ಬಿಡುತ್ತಿಲ್ಲ.  ಇಂತಹ ದುರಂಹಂಕಾರಿ ಜಿಲ್ಲಾಧಿಕಾರಿ ಯಾರಿಗೂ ಬೇಡ. ನಾನಂತೂ ಕೆಲಸ ಮಾಡೋ ವ್ಯವಧಾನವನ್ನೇ ಕಳೆದುಕೊಂಡಿದ್ದೇನೆ ಎಂದು ಭಾವೋದ್ವೇಗಕ್ಕೆ ಒಳಗಾಗಿ ಮಾತನಾಡಿದ್ದಾರೆ.

ಐಎಎಸ್ ಅಧಿಕಾರಿಯಿಂದಲೇ ಮತ್ತೊಬ್ಬ ಐಎಎಸ್ ಅಧಿಕಾರಿಗೆ ಕಿರುಕುಳ ನೀಡೋದು ಸರಿಯಲ್ಲ. ನನ್ನನ್ನು ಟಾರ್ಗೆಟ್ ಮಾಡುತ್ತಿರುವುದು ನೋವು ತಂದಿದೆ. ಈ ಬಗ್ಗೆ ರಾಜ್ಯದ ಮುಖ್ಯ ಕಾರ್ಯದರ್ಶಿಗೂ ಪತ್ರ ಬರೆದಿದ್ದೇನೆ. ಇಲ್ಲಿ ಕೆಲಸ ಮಾಡುವುದಕ್ಕಿಂತ ರಾಜೀನಾಮೆ ನೀಡಿ ಹೊರಗೆ ಹೋಗೋದೆ ಬೆಟರ್ ಎನಿಸಿದೆ ಎಂಬುದಾಗಿ ತಮ್ಮ ರಾಜೀನಾಮೆ ನಿರ್ಧಾರವನ್ನು ಹೊರ ಹಾಕಿದ್ದಾರೆ.

ಸದಾ ವಿವಾದಗಳಿಗೇ ಹೆಸರುವಾಸಿಯಾದ ರೋಹಿನಿ ಸಿಂಧುರಿ ಹಾಸನದ ನಂತರ ಮೈಸೂರಿನಲ್ಲಿ ವಿವಾದಕ್ಕೆ ಗುರಿಯಾಗಿದ್ದಾರೆ. ಆದರೆ ಅಧಿಕಾರಿಗಳನ್ನು ನಿಯಂತ್ರಿಸಬೇಕಾದ ಸರಕಾರ ಸುಮ್ಮನೆ ಕುಳಿತುಕೊಂಡಿರುವುದು ಈ ಸರಕಾರ ಸಂವಿಧಾನ ಪ್ರಕಾರ ಕೆಲಸ ನಿರ್ವಹಿಸುತ್ತಿದೆ ಎಂಬ ಬಹುದೊಡ್ಡ ಪ್ರಶ್ನೆ ಎತ್ತಿದೆ ಎನ್ನುತ್ತಾರೆ ಮೈಸೂರಿನ ಪ್ರಜ್ಞಾವಂತ ನಾಗರಿಕರು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಚುನಾವಣೆ ಗೆದ್ದು ಬಿಜೆಪಿಯ ಶಾಸಕನಾಗುತ್ತೇನೆ; ಜಗದೀಶ್ ಶೆಟ್ಟರ್ ನನಗೆ ಮಾದರಿ - ರಘುಪತಿ ಭಟ್

ಚುನಾವಣೆ ಗೆದ್ದು ಬಿಜೆಪಿಯ ಶಾಸಕನಾಗುತ್ತೇನೆ; ಜಗದೀಶ್ ಶೆಟ್ಟರ್ ನನಗೆ ಮಾದರಿ – ರಘುಪತಿ ಭಟ್

ಚುನಾವಣೆ ಗೆದ್ದು ಬಿಜೆಪಿಯ ಶಾಸಕನಾಗುತ್ತೇನೆ; ಜಗದೀಶ್ ಶೆಟ್ಟರ್ ನನಗೆ ಮಾದರಿ – ರಘುಪತಿ ಭಟ್. ಪದವೀಧರ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಮಾಜಿ ಶಾಸಕ ರಘುಪತಿ ಭಟ್‌ ಅವರನ್ನು ಪಕ್ಷದಿಂದ ಆರು ವರ್ಷ ಉಚ್ಚಾಟಿಸಲಾಗಿದೆ.

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು