ಭಾನುವಾರ, ಸೆಪ್ಟೆಂಬರ್ 8, 2024
ಪ್ರಜ್ವಲ್‌ ರೇವಣ್ಣಗೆ ಶಾಕ್; ಜಾಮೀನು ಅರ್ಜಿ ವಜಾ!-ಸೋನಿಯಾ, ರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿ; ಇಬ್ಬರ ವಿರುದ್ಧ ಕೇಸ್ ದಾಖಲು-ಕೋವಿಡ್ ಹಗರಣ: ಸಿಎಂ ಕೈ ಸೇರಿದ ವರದಿ; ಮಾಜಿ ಆರೋಗ್ಯ ಸಚಿವರಿಗೆ ತಟ್ಟುತ್ತಾ ಬಿಸಿ?-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರೇಪ್ ಹೇಗಾಗುತ್ತೆ ಎಂದು ಕಂಗನಾಗೆ (Kangana Ranaut) ಕೇಳಿ; ಮಾಜಿ ಸಂಸದನ ವಿವಾದಿತ ಹೇಳಿಕೆ!-Chikkaballapur: ಟಿಟಿ - ಕಾರಿನ ಮಧ್ಯೆ ಭೀಕರ ಅಪಘಾತ; ಮೂವರ ದುರ್ಮರಣ-ಐವನ್ ಡಿಸೋಜಾ ಮನೆ ಮೇಲೆ ಕಲ್ಲುತೂರಾಟ: ಬಂಟ್ವಾಳ ಮೂಲದ ಇಬ್ಬರ ಬಂಧನ-Sarah Rahanuma: ಟಿವಿ ಪತ್ರಕರ್ತೆಯ ಶವ ಢಾಕಾ ಸರೋವರದಲ್ಲಿ ಪತ್ತೆ-ನಟ ದರ್ಶನ್ ಗೆ ಜೈಲೇ ಗತಿ; ನ್ಯಾಯಾಂಗ ಬಂಧನ ವಿಸ್ತರಣೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ ರಾಜೇಶ್ ನಾಪತ್ತೆ.

Twitter
Facebook
LinkedIn
WhatsApp
ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ ರಾಜೇಶ್ ನಾಪತ್ತೆ.

ಸುಳ್ಯ: ತಾಲೂಕಿನ ‌ಬೆಳ್ಳಾರೆಯ ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ ,ಉದ್ಯಮಿ ಹಾಗೂ ಕೃಷಿಕ ರಾಜೇಶ್ ಗುಂಡಿಗದ್ದೆಯವರು ಸೆ.4 ರಂದು ಮನೆಯಿಂದ ಕಾಣೆಯಾಗಿದ್ದು ಈ ಬಗ್ಗೆ ಸೆ.5 ರಂದು ಬೆಳ್ಳಾರೆ ಠಾಣೆಯಲ್ಲಿ ಅವರ ಪತ್ನಿ ಪೊಲೀಸು ದೂರು ನೀಡಿದ ಘಟನೆ ನಡೆದಿದೆ.
ರಾಜೇಶ್ ಗುಂಡಿಗದ್ದೆ (47) ಎಂಬವರು ಸೆ. 4 ರಂದು ಬೆಳಿಗ್ಗೆ ಮನೆಯಿಂದ ತಮ್ಮ ಇಕೋ ಸ್ಪೋರ್ಟ್ಸ್ ಕಾರು ( ಕೆಎ 21 ಪಿ 6758)ನಲ್ಲಿ ಸುಳ್ಯ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮನೆಗೆ ಬಾರದೆ, ಫೋನ್ ಸಂಪರ್ಕಕ್ಕೂ ಸಿಗದೆ ಕಾಣೆಯಾಗಿರುವುದಾಗಿ ಅವರ ಪತ್ನಿ ವಿನಯಶ್ರೀಯವರು ಬೆಳ್ಳಾರೆ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ರಾಜೇಶ್ ಗುಂಡಿಗದ್ದೆಯವರು ಸುಳ್ಯಕ್ಕೆ ಬಂದು ನಂತರ ಕಲ್ಲುಗುಂಡಿ ಪೇಟೆಯಾಗಿ ಸಂಪಾಜೆ ಕಡೆಗೆ ಪ್ರಯಾಣಿಸಿರುವ ದೃಶ್ಯ ಸಿ.ಸಿ. ಟೀವಿಯಲ್ಲಿ ಸೆರೆಯಾಗಿರುವುದಾಗಿ ಮತ್ತು ಬಂದಡ್ಕ ಟವರ್ ಅಲ್ಲಿ ಇವರ ಮೊಬೈಲ್ ಸ್ವಿಚ್ ಆಫ್ ಆಗಿರುವುದಾಗಿ ತಿಳಿದು ಬಂದಿದೆ.
ಹಲವು ವರ್ಷಗಳ ಹಿಂದೆ ಬಾಳಿಲದಲ್ಲಿ ಸ್ಥಾಪನೆಯಾದ ರಬ್ಬರ್ ಉತ್ಪಾದಕರ ಸಂಘ ನಂತರದ ದಿನಗಳಲ್ಲಿ ಬೆಳ್ಳಾರೆಗೆ ಸ್ಥಳಾಂತರಗೊಂಡು ಬಳಿಕ ಬೆಳ್ಳಾರೆ ರಬ್ಬರ್ ಉತ್ಪಾದಕರ ಸಂಘ ಎಂಬ ಹೆಸರಿನಲ್ಲಿ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಭಾಗದಲ್ಲಿ ವ್ಯವಹಾರ ನಡೆಸುತ್ತಿತ್ತು. ರಾಜೇಶ್ ಗುಂಡಿಗದ್ದೆ ಇದರ ಅಧ್ಯಕ್ಷರಾಗಿದ್ದರು. ಬೆಳ್ಳಾರೆ, ಪೆರುವಾಜೆ, ಬಾಳಿಲ, ಐವರ್ನಾಡು, ಕೊಡಿಯಾಲ ಸೇರಿದಂತೆ ಆಸುಪಾಸಿನ ಗ್ರಾಮಗಳ ರಬ್ಬರು ಬೆಳೆಗಾರರು ರಬ್ಬರ್ ಹಾಲನ್ನು ಸಂಘಕ್ಕೆ ನೀಡುತ್ತಿದ್ದು, ತಮಗೆ ಅವಶ್ಯಕತೆ ಇರುವಾಗ ಹಣ ತೆಗೆದುಕೊಳ್ಳುತ್ತಿದ್ದರು. ವ್ಯವಹಾರದ ಅನುಕೂಲಕ್ಕಾಗಿ ಮಣಿಕ್ಕಾರ ಕಾಂಪ್ಲೆಕ್ಸ್ ಅಲ್ಲಿ ಕಚೇರಿ ಶಾಖೆಯನ್ನು ತೆರೆದಿದ್ದರು. ಇತ್ತೀಚೆಗಿನ ವರ್ಷಗಳಿಂದ ಹಾಲು ನೀಡಿದ ಗ್ರಾಹಕರಿಗೆ ಹಣ ಕೊಡಲು ಬಾಕಿ ಇರುವ ಮೊತ್ತ ಏರುತ್ತಾ ಹೋಗಿ ಕೋಟಿಗಟ್ಟಲೆ ಹಣ ಕೊಡಲು ಬಾಕಿ ಇದೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ.

ಇದರೊಂದಿಗೆ ಸಂಘದ ಹೆಸರಲ್ಲಿ ಪಡೆದ ಸಾಲ ಮತ್ತು ಭೂಮಿ ಖರೀದಿ ಮತ್ತು ಅಭಿವೃದ್ಧಿಗೆ ಸೇರಿದಂತೆ ತಮ್ಮ ವೈಯಕ್ತಿಕ ನೆಲೆಯಲ್ಲಿ ಮಾಡಿದ ಸಾಲವೂ ವಿಪರೀತ ಇದೆ ಎನ್ನಲಾಗಿದೆ. ಹಣ ಪಾವತಿ ಬಾಕಿ ಏರುತ್ತಾ ಹೋದ ಹಾಗೆ ಗ್ರಾಹಕರು ಮತ್ತು ಇತರ ಸಾಲಗಾರರು ರಾಜೇಶರಲ್ಲಿ ಹಣ ನೀಡುವಂತೆ ಒತ್ತಡ ಹಾಕುತ್ತಿದ್ದರೆನ್ನಲಾಗಿದೆ. ರಬ್ಬರ್ ಉತ್ಪಾದಕರ ಸಂಘ ನಷ್ಟದಿಂದ ನಡೆಯುತ್ತಿದ್ದು ಬೆಂಗಳೂರು ಮೂಲದ ಕಂಪೆನಿಗೆ ಮಾರಾಟ ಮಾಡಿ ಸಂಘದ ಗ್ರಾಹಕರಿಗೆ ಹಣ ಪಾವತಿಸುವುದಾಗಿ ಇತ್ತೀಚೆಗೆ ಮಹಾಸಭೆಯಲ್ಲಿ ನಿರ್ಧಾರವಾಗಿತ್ತೆನ್ನಲಾಗಿದೆ.

ಅದರಂತೆ ಖರೀದಿದಾರರೊಬ್ಬರು ಸಂಘದ ಮೀಟಿಂಗ್‌ಗೆ ಬಂದು ಸಂಘವನ್ನು 12 ಕೋಟಿ ರೂ.ಗಳಿಗೆ ಖರೀದಿಸುವ ಭರವಸೆಯನ್ನು ನೀಡಿ ಸ್ವಲ್ಪ ಹಣವನ್ನು ನೀಡಿದ್ದರೆನ್ನಲಾಗಿದ್ದು, ಬಳಿಕ ಸಂಘದ ನಷ್ಟವನ್ನು ಸರಿದೂಗಿಸಲು ಕಷ್ಟವೆಂದು ಅಭಿಪ್ರಾಯಪಟ್ಟು ವ್ಯವಹಾರದಿಂದ ಹಿಂದೆ ಸರಿದರೆನ್ನಲಾಗಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ivan dsouza ಐವನ್ ಡಿಸೋಜಾ

ಐವನ್ ಡಿಸೋಜಾ ಮನೆ ಮೇಲೆ ಕಲ್ಲುತೂರಾಟ: ಬಂಟ್ವಾಳ ಮೂಲದ ಇಬ್ಬರ ಬಂಧನ

ಐವನ್ ಡಿಸೋಜಾ ಮನೆ ಮೇಲೆ ಕಲ್ಲುತೂರಾಟ: ಬಂಟ್ವಾಳ ಮೂಲದ ಇಬ್ಬರ ಬಂಧನ Twitter Facebook LinkedIn WhatsApp ಮಂಗಳೂರು, ಆಗಸ್ಟ್​​ 28: ರಾಜ್ಯಪಾಲರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಎಂಎಲ್​ಸಿ ಐವನ್ ಡಿಸೋಜಾ (Ivan D’Souza)  ಮನೆ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು