ಶುಕ್ರವಾರ, ಜೂನ್ 9, 2023
ಅಜ್ಜಿಯನ್ನು ಕೊಲೆ ಮಾಡಿ ಶವ ಸುಟ್ಟ ಪ್ರಕರಣ: ಮೊಮ್ಮಗನ ಬಂಧನ-ಸೈಕ್ಲೋನ್‌ ಎಫೆಕ್ಟ್‌; ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಭಾರೀ ಮಳೆ ಸಾಧ್ಯತೆ-ಬಾಬಾಬುಡನಗಿರಿಯಲ್ಲಿ ಶೌಚಾಲಯ ಸಮಸ್ಯೆ; ರಾಷ್ಟ್ರಪತಿಗೆ ಪತ್ರ ಬರೆದ ಮಹಿಳೆ-ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು-ಕಾರು ಪಲ್ಟಿಯಾಗಿ ಬಿಜೆಪಿ ಮುಖಂಡ ಸಾವು; ಇಬ್ಬರು ಮಕ್ಕಳು ಸೇರಿ ನಾಲ್ವರಿಗೆ ಗಾಯ-ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ-ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ-ಆಸೀಸ್‌ ವೇಗದ ದಾಳಿಗೆ ಕಂಗಾಲಾದ ಭಾರತಕ್ಕೆ ಇನ್ನಿಂಗ್ಸ್ ಹಿನ್ನಡೆ ಭೀತಿ; ಅಜಿಂಕ್ಯ ರಹಾನೆ ಆಸರೆ!-ಭಯಾನಕ ಮರ್ಡರ್; ಸಂಗಾತಿಯ ಶರೀರವನ್ನು ಪೀಸ್ ಪೀಸ್ ಮಾಡಿ ಕುಕ್ಕರ್ ನಲ್ಲಿ ಬೇಯಿಸಿದ ಕ್ರೂರಿ ಪ್ರೇಮಿ..!-ಕಾಂಗ್ರೆಸ್ ಸರ್ಕಾರಕ್ಕೆ 18 ಸಲಹೆಗಳನ್ನ ಕೊಟ್ಟ ಶಿಕ್ಷಣ ತಜ್ಞ ಪ್ರೊ ಎಂಆರ್ ​ದೊರೆಸ್ವಾಮಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಯೂತ್ ಆಫ್ ಜಿಎಸ್ ಬಿಯಿಂದ ವ್ಯಾಕ್ಸಿನೇಶನ್ ಅಭಿಯಾನಕ್ಕೆ ಚಾಲನೆ

Twitter
Facebook
LinkedIn
WhatsApp
ಯೂತ್ ಆಫ್ ಜಿಎಸ್ ಬಿಯಿಂದ ವ್ಯಾಕ್ಸಿನೇಶನ್ ಅಭಿಯಾನಕ್ಕೆ ಚಾಲನೆ

ಕಲೆ, ಸಂಸ್ಕೃತಿ, ಸಾಮಾಜಿಕ ಸಂಘಟನೆ ಯೂತ್ ಆಫ್ ಜಿಎಸ್ ಬಿ ವತಿಯಿಂದ ಕೊಂಚಾಡಿಯಲ್ಲಿರುವ ವನಿತಾ ಅಚ್ಯುತ್ ಪೈ ಸಭಾಂಗಣದಲ್ಲಿ ವ್ಯಾಕ್ಸಿನೇಶನ್ ಅಭಿಯಾನ ಸೋಮವಾರ ನಡೆಯಿತು. ಬೆಳಿಗ್ಗೆ ದೀಪ ಬೆಳಗಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಹನುಮಂತ ಕಾಮತ್, ಪೈಸೇಲ್ಸ್ ನ ಗಣಪತಿ ಪೈ, ಕೊಂಚಾಡಿ ಶ್ರೀ ವೆಂಕಟರಮಣ ದೇವಸ್ಥಾನದ ಟ್ರಸ್ಟಿ ಪ್ರಶಾಂತ್ ಪೈ, ಉದ್ಯಮಿ ವಾಸುದೇವ್ ಕಾಮತ್, ಯೂತ್ ಆಫ್ ಜಿಎಸ್ ಬಿ ಸಂಚಾಲಕರಾದ ಮಂಗಲ್ಪಾಡಿ ನರೇಶ್ ಶೆಣೈ, ನರೇಶ್ ಪ್ರಭು, ಚೇತನ್ ಕಾಮತ್ ಉಪಸ್ಥಿತರಿದ್ದರು.
ಸುಮಾರು 700 ಕ್ಕಿಂತಲೂ ಹೆಚ್ಚು ನಾಗರಿಕರು ಆನ್ ಲೈನ್ ಮೂಲಕ ಹೆಸರು ನೊಂದಾಯಿಸಿಕೊಂಡು ಈ ಅಭಿಯಾನದಲ್ಲಿ ಭಾಗವಹಿಸಿದರು. ಬಿಪಿಎಲ್ ಕಾರ್ಡ್ ಹೊಂದಿದವರಿಗೆ ತೆಲಂಗಾಣದ Puzzolana ಸಂಸ್ಥೆ ಪ್ರಾಯೋಜಕತ್ವದ ಮೂಲಕ ಉಚಿತ ಲಸಿಕೆ ನೀಡಲಾಯಿತು.

ಆಗಮಿಸಿದ ಪ್ರತಿಯೊಬ್ಬರಿಗೂ ಬೆಳಿಗ್ಗೆ ಉಪಹಾರ ಮತ್ತು ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಯೂತ್ ಆಫ್ ಜಿಎಸ್ ಬಿ ವತಿಯಿಂದ ಏರ್ಪಡಿಸಲಾಗಿತ್ತು. ಒಂದು ಮೆಡಿಕಲ್ ಏಮರ್ಜೆನ್ಸಿ ಕೊಠಡಿ ಮತ್ತು ಎರಡು ವ್ಯಾಕ್ಸಿನೇಶನ್ ಬೂತ್ ನಲ್ಲಿ ಕೆಎಂಸಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ಲಸಿಕೆ ವಿತರಣೆಯಲ್ಲಿ ಸಹಕರಿಸಿದರು.

ಶಾಸಕರಾದ ಡಾ.ವೈ ಭರತ್ ಶೆಟ್ಟಿ, ಹಾಂಗ್ಯೋ ಸಂಸ್ಥೆಯ ಮಾಲೀಕರಾದ ಪ್ರದೀಪ್ ಪೈ, ಮೇಯರ್ ಪ್ರೇಮಾನಂದ ಶೆಟ್ಟಿ, ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ ಹಾಗೂ ಗಣ್ಯರು ಆಗಮಿಸಿ ಯೂತ್ ಆಫ್ ಜಿಎಸ್ ಬಿ ಅಭಿಯಾನಕ್ಕೆ ಶುಭ ಕೋರಿದರು. ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಲಸಿಕಾ ವಿತರಣೆ ನಡೆದಿದೆ.ಪಾಲಿಕೆ ವ್ಯಾಪ್ತಿಯ ಬಿಪಿಎಲ್ ಕಾರ್ಡಿನ ನಾಗರಿಕರಿಗೆ ವಾಹನದ ವ್ಯವಸ್ಥೆಯನ್ನು ಮಾಡಲಾಗಿತ್ತು

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಅಂತಾರಾಷ್ಟ್ರೀಯ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು