ಶನಿವಾರ, ಜೂನ್ 29, 2024
11-21% ಟಾರಿಪ್ ಹೆಚ್ಚಿಸಿದ ಏರ್ಟೆಲ್; ಜುಲೈ 3 ರಿಂದ ಯಾವ ಪ್ಲಾನ್ ಗೆ ಹೇಗಿದೆ ದರ.?-ಕಾರ್ಕಳ: ಬಸ್ ಚಲಾವಣೆ ವೇಳೆ ಅಸ್ವಸ್ಥಗೊಂಡ ಚಾಲಕ; ಹಿಮ್ಮುಖವಾಗಿ ಬಸ್ ಚಲಿಸಿ 40ಕ್ಕೂ ಹೆಚ್ಚು ಪ್ರಯಾಣಿಕರು ಪಾರು.!-ಸಂಸತ್ತಲ್ಲಿ ನೀಟ್‌ ಕುರಿತು ರಾಹುಲ್‌ ಗಾಂಧಿ ಮಾತಾಡುವಾಗ ಮೈಕ್‌ ಆಫ್; ಕಾಂಗ್ರೆಸ್ ಗಂಭೀರ ಆರೋಪ-ಭೀಕರ ರಸ್ತೆ ಅಪಘಾತ; ನಿಂತಿದ್ದ ಲಾರಿಗೆ ಟಿಟಿ ವಾಹನ ಡಿಕ್ಕಿ,13 ಮಂದಿ ದುರ್ಮರಣ-T20 World Cup: ಆಂಗ್ಲರ ವಿರುದ್ಧ ಭಾರತಕ್ಕೆ ಭರ್ಜರಿ ಜಯ; ಫೈನಲ್​ಗೇರಿದ ಭಾರತ.-ಬೆಳ್ತಂಗಡಿ: ನೀರಿನಲ್ಲಿ ವಿದ್ಯುತ್ ಪ್ರವಹಿಸಿ ಯುವತಿ ಸಾವು; ದಕ್ಷಿಣ ಕನ್ನಡದಲ್ಲಿ 2 ದಿನದಲ್ಲಿ 7 ಮಂದಿ ದುರ್ಮರಣ.!-ಕರಾವಳಿಯಾದ್ಯಂತ ಭಾರಿ ಮಳೆ ಹಿನ್ನೆಲೆ ನಾಳೆ ಜೂನ್ 28 ಶುಕ್ರವಾರದಂದು ಶಾಲಾ ಕಾಲೇಜಿಗೆ ರಜೆ ಘೋಷಣೆ..!-ಸಿದ್ದರಾಮಯ್ಯರವರ ಎದುರೆ CM ಸ್ಥಾನವನ್ನು ಡಿಕೆಶಿ ಗೆ ಬಿಟ್ಟುಬಿಡುವಂತೆ ಸ್ವಾಮೀಜಿ ಹೇಳಿಕೆ!-ಮಡಿಕೇರಿ: ಬೆಳಗ್ಗೆ ಕರ್ತವ್ಯಕ್ಕೆ ಹೊರಡುತ್ತಿರುವಾಗ ಹೃದಯಘಾತ; ಯುವತಿ ಸಾವು..!-ಮಂಗಳೂರು: ರಿಕ್ಷಾ ತೊಳೆಯುತ್ತಿರುವ ವೇಳೆ ವಿದ್ಯುತ್ ತಂತಿ ಬಿದ್ದು ಇಬ್ಬರು ರಿಕ್ಷಾ ಚಾಲಕರು ಮೃತ್ಯು..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಯೂಟ್ಯೂಬ್‌ ಲೈಕ್ಸ್‌, ವೀಕ್ಷಣೆಗಾಗಿ ವಿಮಾನವನ್ನೇ ಪತನಗೊಳಿಸಿದ ಯೂಟ್ಯೂಬರ್!

Twitter
Facebook
LinkedIn
WhatsApp

ನ್ಯೂಯಾರ್ಕ್ (ಮೇ 14, 2023): ಕೆಲವು ಯೂಟ್ಯೂಬರ್‌ಗಳು ತಾವು ವಿಡಿಯೋ ಚಿತ್ರೀಕರಣ ಮಾಡಿಕೊಂಡು ಅದಕ್ಕೆ ‘ವ್ಯೂ’ (ವೀಕ್ಷಣೆ) ಹೆಚ್ಚು ಬರಬೇಕೆಂದು ನಾನಾ ಸಾಹಸ-ದುಸ್ಸಾಹಸ ಮಾಡೋದುಂಟು. ಅಂಥದ್ದರಲ್ಲಿ ಅಮೆರಿಕದ ಯೂಟ್ಯೂಬರ್‌ ಒಬ್ಬ ವಿಮಾನದಿಂದ ತಾನು ಹಾರಿ ಅದನ್ನು ಅಪಘಾತಕ್ಕೆ ಒಳಪಡಿಸಿ ಚಿತ್ರೀಕರಿಸಿದ್ದಾನೆ. ಈತನ ವಿರುದ್ಧ ಈಗ ಕೇಸು ದಾಖಲಾಗಿದ್ದು, 20 ವರ್ಷ ಜೈಲು ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ.

ಟ್ರೆವರ್‌ ಜಾಕೋಬ್‌ ಎಂಬಾತನೇ ಈ ದುಸ್ಸಾಹಸ ಮಾಡಿದಾತ. ವಿಮಾನ ಹಾರಿಸುತ್ತಿದ್ದ ಈತ ಆಗಸದ ಮಧ್ಯದಲ್ಲಿ ಎಂಜಿನ್‌ ಹಾಳಾಗಿದೆ ಎಂದು ಅದನ್ನು ಇಳಿಸುವ ಬದಲು ಅಲ್ಲೇ ಬಿಟ್ಟು ಪ್ಯಾರಶೂಟ್‌ನಿಂದ ಚಿಗಿದಿದ್ದಾನೆ. ಬಳಿಕ ವಿಮಾನ ಪತನವಾಗಿದೆ. ಈ ಘಟನೆಯನ್ನು ಆತ ಚಿತ್ರೀಕರಿಸಿಕೊಂಡಿದ್ದು, ವಿಡಿಯೋವನ್ನು ಯೂಟ್ಯೂಬ್‌ಗೆ ಹಾಕಿ ಹೆಚ್ಚು ಹಿಟ್ಸ್‌ ಬರಲು ಹೀಗೆ ಮಾಡಿದ್ದಾನೆ.

29 ವರ್ಷದ ಟ್ರೆವರ್ ಜಾಕೋಬ್ ಡಿಸೆಂಬರ್ 2021 ರಲ್ಲಿ ವಿಮಾನ ಅಪಘಾತದ ವಿಡಿಯೋವನ್ನು ಯೂಟ್ಯೂಬ್‌ಗೆ ಪೋಸ್ಟ್ ಮಾಡಿದ್ದು, ಇದು ಅಪಘಾತ ಎಂದು ಸೂಚಿಸುತ್ತದೆ. ಇದು ಇಲ್ಲಿಯವರೆಗೆ 2.9 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ. ಆರಂಭದಲ್ಲಿ ಇದನ್ನು ಅಪಘಾತ ಎನ್ನಲಾಯಿತಾದ್ರೂ, ಉತ್ಪನ್ನ ಪ್ರಾಯೋಜಕತ್ವದ ಒಪ್ಪಂದದ ಭಾಗವಾಗಿ ವಿಡಿಯೋ ಚಿತ್ರೀಕರಿಸೋದಾಗಿಯೂ ಹೇಳಿದ್ದಾರೆ. 29 ವರ್ಷದ ಪೈಲಟ್ ಮತ್ತು ಸ್ಕೈಡೈವರ್ ಫೆಡರಲ್ ತನಿಖೆಯನ್ನು ತಡೆಯುವ ಉದ್ದೇಶದಿಂದ ವಿಮಾನ ಕ್ರ್ಯಾಶ್‌ ಆಗಿದೆ. ಅಪರಾಧ ತಪ್ಪಿಸಿಕೊಳ್ಳಲು ಈ ರೀತಿ ಮಾಡಿರೋದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದೂ ಯುಎಸ್ ನ್ಯಾಯ ಇಲಾಖೆ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.

29 ವರ್ಷದ ಟ್ರೆವರ್ ಜಾಕೋಬ್ ಡಿಸೆಂಬರ್ 2021 ರಲ್ಲಿ ವಿಮಾನ ಅಪಘಾತದ ವಿಡಿಯೋವನ್ನು ಯೂಟ್ಯೂಬ್‌ಗೆ ಪೋಸ್ಟ್ ಮಾಡಿದ್ದು, ಇದು ಅಪಘಾತ ಎಂದು ಸೂಚಿಸುತ್ತದೆ. ಇದು ಇಲ್ಲಿಯವರೆಗೆ 2.9 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ. ಆರಂಭದಲ್ಲಿ ಇದನ್ನು ಅಪಘಾತ ಎನ್ನಲಾಯಿತಾದ್ರೂ, ಉತ್ಪನ್ನ ಪ್ರಾಯೋಜಕತ್ವದ ಒಪ್ಪಂದದ ಭಾಗವಾಗಿ ವಿಡಿಯೋ ಚಿತ್ರೀಕರಿಸೋದಾಗಿಯೂ ಹೇಳಿದ್ದಾರೆ. 29 ವರ್ಷದ ಪೈಲಟ್ ಮತ್ತು ಸ್ಕೈಡೈವರ್ ಫೆಡರಲ್ ತನಿಖೆಯನ್ನು ತಡೆಯುವ ಉದ್ದೇಶದಿಂದ ವಿಮಾನ ಕ್ರ್ಯಾಶ್‌ ಆಗಿದೆ. ಅಪರಾಧ ತಪ್ಪಿಸಿಕೊಳ್ಳಲು ಈ ರೀತಿ ಮಾಡಿರೋದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದೂ ಯುಎಸ್ ನ್ಯಾಯ ಇಲಾಖೆ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.

ನವೆಂಬರ್ 2021 ರಲ್ಲಿ, ಟ್ರೆವರ್ ಜ್ಯಾಕೋಬ್‌ ಕ್ಯಾಲಿಫೋರ್ನಿಯಾದ ಸಾಂಟಾ ಬಾರ್ಬರಾ ವಿಮಾನ ನಿಲ್ದಾಣದಿಂದ ಏಕಾಂಗಿ ವಿಮಾನದಲ್ಲಿ ತನ್ನ ವಿಮಾನದಲ್ಲಿ ಕ್ಯಾಮೆರಾಗಳನ್ನು ಅಳವಡಿಸಿದ್ದರು. ಟ್ರೆವರ್ ಜೇಕಬ್ ತನ್ನೊಂದಿಗೆ ಕ್ಯಾಮೆರಾಗಳ ಜೊತೆಗೆ, ಪ್ಯಾರಾಚೂಟ್ ಮತ್ತು ಸೆಲ್ಫಿ ಸ್ಟಿಕ್ ಅನ್ನು ತೆಗೆದುಕೊಂಡಿಡು ಹೋಗಿದ್ದಾರೆ.

ಇನ್ನು, ಅವರು “ತನ್ನ ಗಮ್ಯಸ್ಥಾನವನ್ನು ತಲುಪುವ ಉದ್ದೇಶವನ್ನು ಹೊಂದಿರಲಿಲ್ಲ. ಬದಲಿಗೆ ಹಾರಾಟದ ಸಮಯದಲ್ಲಿ ತನ್ನ ವಿಮಾನದಿಂದ ಹೊರಹೋಗಲು ಯೋಜಿಸಿದ್ದರು ಮತ್ತು ಸ್ವತಃ ವಿಮಾನದಿಂದ ನೆಲಕ್ಕೆ ಪ್ಯಾರಾಚೂಟ್‌ ಕೆಳಕ್ಕೆ ಇಳಿಯುವ ವಿಡಿಯೋ ಮಾಡಿದರು. ಮತ್ತು ಈ ವಿಮಾನವು ಲ್ಯಾಂಡ್‌ ಆಗುವ ವೇಳೆ ಅಪಘಾತಕ್ಕೀಡಾಯಿತು” ಎಂದು ಅಮೆರಿಕದ ಕ್ಯಾಲಿಫೋರ್ನಿಯಾದ ಸೆಂಟ್ರಲ್ ಡಿಸ್ಟ್ರಿಕ್ಟ್‌ನ US ಅಟಾರ್ನಿ ಕಚೇರಿ ಹೇಳಿದೆ.

ಕಳೆದ ವರ್ಷ ಅವರ ಪೈಲಟ್ ಪರವಾನಗಿಯನ್ನು ರದ್ದುಗೊಳಿಸಲಾಗಿತ್ತು. ಒಟ್ಟಾರೆ, ಈ ಘಟನೆ ಅಮೆರಿಕ ನಾಗರಿಕ ವಿಮಾನಯಾನ ಪ್ರಾಧಿಕಾರದ ಕೆಂಗಣ್ಣಿಗೆ ಗುರಿಯಾಗಿದ್ದು ಈಗ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಲ್ಲಿದ್ದಾನೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ