- ಕ್ರೀಡೆ, ಸಿನೆಮಾ
- 9:57 ಫೂರ್ವಾಹ್ನ
- ಮೇ 25, 2023
ಯುವ ಸಂಗೀತ ನಿರ್ದೇಶಕನ ಜೊತೆ ಲವ್ವಲ್ಲಿ ಬಿದ್ದ ಸ್ಮೃತಿ ಮಂಧಾನ?

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಖ್ಯಾತ ಬಾಲಿವುಡ್ ಗಾಯಕನ ಸಹೋದರನಿಗೆ ಹುಟ್ಟುಹಬ್ಬದ ಅಭಿನಂದನೆ ಸಲ್ಲಿಸಿದ್ದಾರೆ. ಖ್ಯಾತ ಬಾಲಿವುಡ್ ಗಾಯಕನ ಸಹೋದರ ಸ್ವತಃ ಗಾಯಕ ಮತ್ತು ಚಲನಚಿತ್ರ ನಿರ್ದೇಶಕರೂ ಆಗಿದ್ದಾರೆ. ಸ್ಮೃತಿ ಮಂಧಾನ ಅವರೊಂದಿಗಿನ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಅವರ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ.
ಆದರೆ ಸ್ಮೃತಿ ಅವರ ಈ ಪೋಸ್ಟ್ಗೆ ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಸ್ಮೃತಿ ಈ ಗಾಯಕರೊಂದಿಗೆ ಡೇಟಿಂಗ್ ಮಾಡುತ್ತಿದ್ದೀರಾ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಸ್ಮೃತಿ ಮಂಧಾನ ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಿಂದ ಬಾಲಿವುಡ್ನ ಖ್ಯಾತ ಗಾಯಕ ಪಾಲಕ್ ಮುಚ್ಚಲ್ ಅವರ ಸಹೋದರ ಪಲಾಶ್ ಮುಚ್ಚಲ್ ಅವರ ಜನ್ಮದಿನದಂದು ಶುಭಹಾರೈಸಿದ್ದಾರೆ. ಸ್ಮೃತಿ ಪಲಾಶ್ ಅವರೊಂದಿಗಿನ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಇತರ ಮಹಿಳಾ ಕ್ರಿಕೆಟಿಗರಾದ ಹರ್ಲೀನ್ ಡಿಯೋಲ್, ಜೆಮಿಮಾ ರಾಡ್ರಿಗಸ್ ಮತ್ತು ಡೇನಿಯಲ್ ವ್ಯಾಟ್ ಕೂಡ 26 ವರ್ಷದ ಸ್ಮೃತಿ ಮಂಧಾನ ಅವರ ಪೋಸ್ಟ್ಗೆ ಕಾಮೆಂಟ್ ಮಾಡಿದ್ದಾರೆ. ಮಹಿಳಾ ಕ್ರಿಕೆಟಿಗರ ಕಾಮೆಂಟ್ಗಳ ಜೊತೆಗೆ, ಕೆಲವು ಅಭಿಮಾನಿಗಳು ಪಲಾಶ್ ಮುಚ್ಚಲ್ ಸ್ಮೃತಿ ಮಂಧಾನ ಅವರ ಬಾಯ್ಫ್ರೆಂಡ್ ಎಂದು ಹೇಳುತ್ತಿದ್ದಾರೆ.
ಸ್ಮೃತಿ ಮಂಧಾನ ಅವರ ಅನೇಕ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ, ಇದರಲ್ಲಿ ಅವರು ಪಲಾಶ್ ಮುಚ್ಚಲ್ ಅವರ ಹುಟ್ಟುಹಬ್ಬದ ಆಚರಣೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಗಳಲ್ಲಿ ಪಲಾಶ್ ತನ್ನ ಹುಟ್ಟುಹಬ್ಬದ ಕೇಕ್ ಅನ್ನು ಸ್ಮೃತಿಗೆ ತಿನ್ನಿಸುತ್ತಿರುವುದನ್ನು ಕಾಣಬಹುದು. ಇದಲ್ಲದೆ, ಸ್ಮೃತಿ ಮತ್ತು ಪಲಾಶ್ ಅವರ ಅನೇಕ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಕಳೆದ ವರ್ಷ ಸ್ಮೃತಿ ಮಂಧಾನ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ (ಜುಲೈ 16) ಪಲಾಶ್ ಅವರೊಮದಿಗಿನ ಫೋಟೋ ವೈರಲ್ ಆಗಿತ್ತು. ಪಲಾಶ್ ಸಹೋದರಿ ಪಾಲಕ್ ಕೂಡ ಸ್ಮೃತಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು.
ಕಳೆದ ವರ್ಷ ನವೆಂಬರ್ನಲ್ಲಿ ಪಾಲಕ್ ಮುಚ್ಚಲ್ ಅವರ ಮನೆಯ ಒಂದು ಶುಭ ಕಾರ್ಯದಲ್ಲಿ ಸ್ಮೃತಿ ಮಂಧಾನ ಕಾಣಿಸಿಕೊಂಡಿದ್ದರು. ಇದರ ಫೋಟೋಗಳು ಇದೀಗ ಎಲ್ಲಡೆ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ತರಹೇವಾರಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
ಇದಲ್ಲದೇ ಪಲಾಶ್ ಮುಚ್ಚಲ್ ಕೈಯಲ್ಲಿ ಹಚ್ಚೆ ಹಾಕಿಸಿಕೊಂಡಿದ್ದಾರೆ. ಪಲಾಶ್ನ ಕೈ ಹಚ್ಚೆ ಮೇಲೆ SM18 ಎಂದು ಬರೆಯಲಾಗಿದೆ. ಸ್ಮೃತಿ ಮಂಧಾನ ಮತ್ತು 18 ಎಂಬುದು ಅವರ ಹೆಸರು ಮತ್ತು ಜೆರ್ಸಿ ನಂಬರ್ ಆಗಿದೆ. ಇದೂ ಸಹ ಹೊಸ ಚರ್ಚೆಗೆ ಕಾರಣವಾಗಿದೆ.
28 ವರ್ಷದ ಪಲಾಶ್ ಮುಚ್ಚಲ್ ಅವರು ಚಲನಚಿತ್ರ ನಿರ್ದೇಶಕ, ಬರಹಗಾರ, ಸಂಗೀತ ಸಂಯೋಜಕ, ಗಾಯಕ ಮತ್ತು ಗೀತರಚನೆಕಾರರಾಗಿದ್ದಾರೆ. ಡಿಷ್ಕಿಯಾವೂನ್ ಚಿತ್ರದಲ್ಲಿ ಪಲಾಶ್ ಸಂಗೀತ ನೀಡಿದ್ದಾರೆ. ಇದು ಅವರ ಚೊಚ್ಚಲ ಚಿತ್ರವಾಗಿತ್ತು. ಭೂತನಾಥ್ ರಿಟರ್ನ್ಸ್ ಚಿತ್ರಕ್ಕೂ ಪಲಾಶ್ ಸಂಗೀತ ನೀಡಿದ್ದಾರೆ. ಚಿತ್ರದ ‘ಪಾರ್ಟಿ ತೋ ಬಂತೀ ಹೈ’ ಹಾಡು ಕೂಡ ಬಹಳ ಫೇಮಸ್ ಆಗಿತ್ತು.
ಇದಲ್ಲದೇ ಪಲಾಶ್ ‘ಖೇಲೆ ಹಮ್ ಜಿ ಜಾನ್ ಸೇ’ ಚಿತ್ರದಲ್ಲೂ ನಟಿಸಿದ್ದಾರೆ. ಈ ಚಿತ್ರವನ್ನು ಅಶುತೋಷ್ ಗೋವಾರಿಕರ್ ನಿರ್ದೇಶಿಸಿದ್ದಾರೆ ಮತ್ತು ಈ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಪಲಾಶ್ ಅವರ ಅನೇಕ ಸಂಗೀತ ವೀಡಿಯೊಗಳು ಸಹ ಸಾಕಷ್ಟು ಜನಪ್ರಿಯವಾಗಿವೆ.
ಪಲಾಶ್ ಮುಚ್ಚಲ್ ಅವರು ರಾಜ್ಪಾಲ್ ಯಾದವ್ ಮತ್ತು ರುಬಿನಾ ದಿಲಾಯಿಕ್ ಅವರೊಂದಿಗೆ ‘ಅರ್ಧ್’ ಚಿತ್ರವನ್ನೂ ಮಾಡಿದ್ದಾರೆ. ಪಲಾಶ್ ಮುಚ್ಚಲ್ ಅವರು 18 ನೇ ವಯಸ್ಸಿನಲ್ಲಿ ಬಾಲಿವುಡ್ನ ಅತ್ಯಂತ ಕಿರಿಯ ಸಂಗೀತ ಸಂಯೋಜಕ/ನಿರ್ದೇಶಕರಾಗಿದ್ದಾರೆ. ಅವರು ಬಾಲಿವುಡ್ನ ಅತ್ಯಂತ ಕಿರಿಯ ಸಂಗೀತ ಸಂಯೋಜಕರಾಗಿ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.