ಗುರುವಾರ, ಜುಲೈ 25, 2024
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಂಗಳೂರಿನ ಶ್ರೀಯುತ ಮೋಹನ್ ಶೆಟ್ಟಿ ವಿಧಿವಶ-Anandpur: ಮದುವೆಯಾಗುವಂತೆ ಪೀಡಿಸುತ್ತಿದ್ದಾಳೆಂದು ಪ್ರೇಯಸಿ ಕೊಲೆ ಮಾಡಿದ ಪ್ರಿಯಕರ-ಮುಡಾ ಸೈಟ್ ಕೋಲಾಹಲ: ಬಿಜೆಪಿ ಶಾಸಕರಿಂದ ಸದನದಲ್ಲಿ ಶ್ರೀರಾಮನ ಭಜನೆ-Shiroor: ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಟ್ರಕ್ ಗಂಗಾವಳಿ ನದಿಯಲ್ಲಿ ಪತ್ತೆ-Ladies PG: ಬೆಂಗಳೂರಿನಲ್ಲಿ ಲೇಡಿಸ್ ಪಿಜಿಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ!-ಕಾಂಗ್ರೆಸ್​ ಹಿರಿಯ ನಾಯಕ ಮರಿಗೌಡ ಪಾಟೀಲ್ ಹುಲ್ಕಲ್ ನಿಧನ-Shimoga: ರಸ್ತೆ ಅಪಘಾತ; ಶಿವಮೊಗ್ಗ ಧರ್ಮಪ್ರಾಂತ್ಯದ ಫಾ.ಆಂಟನಿ ಪೀಟರ್ ಇನ್ನಿಲ್ಲ-Mudra loan: ಮುದ್ರಾ ಸಾಲದ ಮಿತಿ 10 ಲಕ್ಷದಿಂದ 20 ಲಕ್ಷ ರೂಗೆ ಏರಿಕೆ; ಉದ್ದಿಮೆದಾರರಿಗೆ ಉತ್ತೇಜನ-Gold Rate: ಬಜೆಟ್‌ ಬೆನ್ನಲ್ಲೇ ಚಿನ್ನ, ಬೆಳ್ಳಿ ದರ ದಿಢೀರ್‌ ಇಳಿಕೆ-Sanket: ಮಹಿಳಾ ನಿರ್ದೇಶಕಿಯ ಅದ್ಭುತ ನಿರ್ದೇಶನ, ಅಂತರಾಷ್ಟ್ರೀಯ ಮಟ್ಟದ ಬಿಜಿಎಂ, ಕಲಾವಿದರ ಅದ್ಭುತ ಅಭಿನಯ ದಿಂದ ಮನಸೂರೆಗೊಂಡಿರುವ ಕನ್ನಡ ಚಲನಚಿತ್ರ ಸಾಂಕೇತ್ ಜುಲೈ 26ಕ್ಕೆ ಬಿಡುಗಡೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಯಾವ ಕೇಸನ್ನು ಮುಚ್ಚಿ ಹಾಕುತ್ತಿಲ್ಲ-ಇಂದ್ರಜಿತ್ ಲಂಕೇಶ್ ಗೆ ತಿರುಗೇಟು ನೀಡಿದ ನಟ ದರ್ಶನ್.

Twitter
Facebook
LinkedIn
WhatsApp
ಯಾವ ಕೇಸನ್ನು ಮುಚ್ಚಿ ಹಾಕುತ್ತಿಲ್ಲ-ಇಂದ್ರಜಿತ್ ಲಂಕೇಶ್ ಗೆ ತಿರುಗೇಟು ನೀಡಿದ ನಟ ದರ್ಶನ್.

ಬೆಂಗಳೂರು:ಹೋಟೆಲ್ ನಲ್ಲಿ ಸಪ್ಲೈಯರ್ ಮೇಲೆ ನಟ ದರ್ಶನ್ ಹಲ್ಲೆ ಮಾಡಿದ್ದಾರೆ , ಜೊತೆಗೆ ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಸೆಟೆಲ್ ಮಾಡಿಕೊಂಡು 25 ಕೋಟಿ ವಂಚನೆ ಕೇಸ್ ಮುಚ್ಚಿಹಾಕಿದ್ದಾರೆಂದು ಇಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪಕ್ಕೆ ನಟ ದರ್ಶನ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶನ್, “ನಾವು ಮಾತನಾಡಿಕೊಂಡು ಪ್ರಕರಣ ಮುಚ್ಚಿಹಾಕುತ್ತಿಲ್ಲ. ಪೊಲೀಸವರಿಗೆ ತನಿಖೆಗೆ ಸಮಯ ಕೊಡಬೇಕು ಅಲ್ವಾ? ಅದಕ್ಕೋಸ್ಕರ ನಾವು ಕಾಯುತ್ತಿದ್ದೇವೆ. ಇನ್ನೂ ಅರುಣಾಕುಮಾರಿಯನ್ನು ಯಾಕೆ ಮನೆಗೆ ಬಿಟ್ಟುಕೊಂಡರು? ಎಂದು ಇಂದ್ರಜಿತ್ ಪ್ರಶ್ನೆ ಕೇಳ್ತಾರೆ ನಾನು ಅರುಣಾಕುಮಾರಿ ಅವರು ಬ್ಯಾಂಕ್ ನವರು ಎಂದ್ರು ಅದಕ್ಕೆ ಮನೆಯೊಳಗೆ ಬಿಟ್ಟುಕೊಂಡಿದ್ದೇನೆ. ಯಾವುದೇ ವಂಚನೆ ಕೇಸ್ ಮುಚ್ಚಿಹಾಕಿಲ್ಲ. ಒಳಗಡೆ ಏನೂ ಮಾತನಾಡಿಲ್ಲ. ನಾನು ನಾವು ನಾವೇ ಮಾತನಾಡಿಕೊಳ್ಳುವುದು ಬೇಡ. ತನಿಖೆ ಆಗಲಿ ನಂತರ ಮಾತನಾಡೋಣ ಅಂದಿದ್ದೇನೆ. ಅರುಣಾಕುಮಾರಿ ಕರೆಟ್ಟಾಗಿದ್ದರೆ ಅವರೊಂದಿಗೆ ನಾನು ನಿಂತುಕೊಳ್ಳುತ್ತೇನೆ ಅಂತ ಹೇಳಿದ್ದೇನೆ” ಎಂದು ಇಂದ್ರಜಿತ್ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ.
“ನಾನು ಯಾವ ಸಪ್ಲೈಯರ್ ಮೇಲೆ ಕೈ ಮಾಡಿಲ್ಲ. ಬೈದಿರೋದು ನಿಜ. ಊಟಕ್ಕೆ ಲೇಟ್ ಆಗಿದ್ದಕ್ಕೆ ಯಾಕಪ್ಪ ಲೇಟು ಅಂತ ಕೇಳಿದಿವಿ ಅಷ್ಟೇ. ಅದಕ್ಕೆ ರೆಕ್ಕೆ ಪುಕ್ಕ ಕಟ್ಟಿದ್ದಾರೆ. ಆರೋಪ ಮಾಡಲಿ, ಸಾಬೀತು ಮಾಡಲಿ. ಅವರಿಗೆ ಒಳ್ಳೆ ಕಾಂಟೆಕ್ಟ್ಸ್ ಇರಬಹುದು. ಸಾಬೀತು ಮಾಡಲಿ. ಹೋಟೆಲ್ ಮಾಲೀಕ ಸಂದೇಶ್ ಗೂ ನನಗೂ ಸಾವಿರ ಗಲಾಟೆ ಇದೆ. ಇಂದ್ರಜಿತ್ ಅವರು ಇನ್ವೆಸ್ಟಿಗೇಟರ್ ಇದನ್ನು ಮಾಡಲಿ ಒಳ್ಳೆದು” ಎಂದಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು