ಬುಧವಾರ, ಫೆಬ್ರವರಿ 21, 2024
ತನ್ನ ಬಗ್ಗೆ ಸುಳ್ಳು ಸುದ್ದಿಯ ಗ್ರಾಫಿಕ್ ಸೃಷ್ಟಿ ಮಾಡಿದವರ ವಿರುದ್ಧ ಕಾನೂನು ಕ್ರಮ - ಮಡಿಕೇರಿ ಶಾಸಕ ಡಾ.ಮಂತರ್‌ ಗೌಡ ಸ್ಪಷ್ಟನೆ-ಲೋಕಸಭಾ ಚುನಾವಣೆಗೆ ಸ್ಪರ್ಧೆ ವಿಚಾರ: ಸ್ಪಷ್ಟನೆ ನೀಡಿದ ಡಾ. ಮಂಜುನಾಥ್-21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸಿಗರೇಟ್ ಸೇದುವಂತಿಲ್ಲ : ದಂಡಗಳಲ್ಲಿ ಬದಲಾವಣೆ; ಇಲ್ಲಿದೆ ವಿವರ-Arecanut price :ಕುಸಿತ ಕಂಡ ಅಡಿಕೆ ಧಾರಣೆ; ಬೆಳೆಗಾರರಿಗೆ ಹೊಡೆತ ಬೀಳಲು ಕಾರಣವೇನು?-ಶೋಭಾ ಕರಂದ್ಲಾಜೆ ಲೋಕಸಭೆ ಚುನಾವಣೆ ಸ್ಪರ್ಧಿಸದಂತೆ ಬಿಜೆಪಿ ಕಾರ್ಯಕರ್ತರಿಂದ ಪತ್ರ ಚಳುವಳಿ..!-18 ವರ್ಷ ಬಳಿಕ ದುಬೈ ಜೈಲಿನಲ್ಲಿದ್ದು ಭಾರತಕ್ಕೆ ಮರಳಿ ಕುಟುಂಬದ ಜೊತೆ ಸೇರಿದ ಐವರು; ಇಲ್ಲಿದೆ ವಿಡಿಯೋ-Vidya Balan: ವಿದ್ಯಾ ಬಾಲನ್ ಹೆಸರಿನಲ್ಲಿ ಹಣ ವಸೂಲಿ ;ದೂರು ದಾಖಲು.!-Taruwar Kohli: ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ತರುವರ್ ಕೊಹ್ಲಿ..!-ಉಡುಪಿ : ಗಂಗೊಳ್ಳಿ ಬೋಟ್ ಅಗ್ನಿ ದುರಂತ; ರಾಜ್ಯ ಸರ್ಕಾರದಿಂದ 1.75 ಕೋ. ಪರಿಹಾರ ಮಂಜೂರು..!-ಮೆಫೆಡ್ರೋನ್‌ ಎಂಬ 2,500 ಕೋಟಿ ರೂ. ಮೌಲ್ಯದ ಮಾದಕವಸ್ತು ಜಪ್ತಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಯಡಿಯೂರಪ್ಪ ಸಮರ್ಥರಲ್ಲ. ರಾಜ್ಯ ಬಿಜೆಪಿಗೆ ಪರ್ಯಾಯ ನಾಯಕತ್ವದ ಅಗತ್ಯ ಇದೆ: ಎಚ್ ವಿಶ್ವನಾಥ್.

Twitter
Facebook
LinkedIn
WhatsApp
ಯಡಿಯೂರಪ್ಪ ಸಮರ್ಥರಲ್ಲ. ರಾಜ್ಯ ಬಿಜೆಪಿಗೆ ಪರ್ಯಾಯ ನಾಯಕತ್ವದ ಅಗತ್ಯ ಇದೆ: ಎಚ್ ವಿಶ್ವನಾಥ್.

ಬೆಂಗಳೂರು: ಕರ್ನಾಟಕ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಕುಸಿಯುತ್ತಿದ್ದು, ಪರ್ಯಾಯ ನಾಯಕತ್ವ ಬೇಕಾಗಿದೆ ಎಂದು ಬಿಜೆಪಿಯ ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ನುಡಿದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಗಾರಪ್ಪ ಅವರ ಕಾಲದಲ್ಲಿ ಕ್ಲಾಸಿಕ್‌ ಕಂಪ್ಯೂಟರ್‌, ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಬಾಟ್ನಿಂಗ್‌ ಹಗರಣದಿಂದ ನಾಯಕತ್ವವೇ ಕುಸಿದು ಹೋಯಿತು. ಇಲ್ಲಿಯೂ ನಾಯಕತ್ವ ಕುಸಿಯುತ್ತಿದೆ. ಇದರಿಂದ ಪಕ್ಷಕ್ಕೆ ಪ್ರಯೋಜನ ಇಲ್ಲ. ಅವರ ಮಾರ್ಗದರ್ಶನದಲ್ಲಿ ಪರ್ಯಾಯ ನಾಯಕತ್ವ ಕೊಡಿ. ವೀರಶೈವರಿಗೇ ಕೊಡಿ ಎಂದು ಆಗ್ರಹಿಸಿದರು.

ನಿಜವಾಗಿಯೂ ರಾಜ್ಯ ಬಿಜೆಪಿಯ ಆಂತರಿಕ ಕಲಹ ಕಡಿಮೆಯಾಗಿದೆಯ?

ನಾನು ಪಕ್ಷದ ಕಾರ್ಯಕ್ರಮಗಳ ಬಗ್ಗೆ ಮಾತನಾಡಿಲ್ಲ. ನಾನು ಮಾತನಾಡಿರುವುದು ಪಕ್ಷದ ನೈತಿಕತೆ, ಪಾರದರ್ಶಕತೆ, ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ. ನನ್ನ ಮೇಲೆ ಕ್ರಮ ತೆಗೆದುಕೊಳ್ಳಿ. ಆದರೆ, ಯಾರ ಮೇಲೆ ಕ್ರಮ ತೆಗೆದುಕೊಳ್ಳುವುದು ಎಂಬುದು ಬಹಳ ಮುಖ್ಯ. ಸತ್ಯ ಹೇಳುವವರ ಮೇಲೆ ಕ್ರಮ ತೆಗೆದುಕೊಳ್ಳುವುದಲ್ಲ. ಜನಾಭಿಪ್ರಾಯ ಯಾರಿಂದ ಕುಸಿಯುತ್ತಿದೆ ಎಂಬುದನ್ನು ನೀವು ನೋಡಬೇಕು ಎಂದು ತಿಳಿಸಿದರು.

ಮುಖ್ಯಮಂತ್ರಿ ಸರಿಯಿಲ್ಲ ಬದಲಾಯಿಸಿ ಎಂದ ವಿಶ್ವನಾಥ್. ಸರಿ ವಿಶ್ವನಾಥ್ ಇಲ್ಲ ಎಂದ ರೇಣುಕಾಚಾರ್ಯ.


ನೀವು ಬಿಜೆಪಿಯವರೇ ಎಂದು ರೇಣುಕಾಚಾರ್ಯ ಕೇಳುತ್ತಾನೆ. ನಾನು ಶುದ್ಧ ಬಿಜೆಪಿಯವ, ನೀನು ಮಿಕ್ಸಡ್‌ ಬಿಜೆಪಿ. ಕೆಜೆಪಿಯಿಂದ ಬಂದವನು ನೀನು. ಹಿಂದೆ ಇದೇ ಯಡಿಯೂರಪ್ಪರ ವಿರುದ್ಧ ನನ್ನನ್ನು ಸಚಿವ ಮಾಡಲಿಲ್ಲ ಎಂದು ಹೈದರಾಬಾದ್‌ಗೆ ಓಡಿ ಹೋಗಿದ್ರಲ್ಲ? ನಂತರ ನಿಮ್ಮನ್ನು ಯಾಕೆ ಸಚಿವ ಸ್ಥಾನದಿಂದ ತೆಗೆದರು? ಜಯಲಕ್ಷ್ಮೀ ನರ್ಸ್‌ ಕಥೆ ಏನಾಯ್ತು ಎಂದು ರೇಣುಕಾಚಾರ್ಯ ವಿರುದ್ಧ ಹರಿಹಾಯ್ದರು.
ಹಾಲಪ್ಪ ತನ್ನ ಸ್ನೇಹಿತನ ಮನೆಗೆ ಊಟಕ್ಕೆ ಹೋಗಿ, ಆತನ ಹೆಂಡತಿಯನ್ನು ಅತ್ಯಾಚಾರ ಮಾಡಲು ಪ್ರಯತ್ನಿಸಿ ಸಚಿವ ಸ್ಥಾನ ಕಳೆದುಕೊಂಡೆ. ನನ್ನ ಮೇಲೆ ಮಾತನಾಡುತ್ತೀರಾ ಎಂದು ಹಾಲಪ್ಪ ವಿರುದ್ಧ ಹರಿಹಾಯ್ದರು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು