ಶುಕ್ರವಾರ, ಜೂನ್ 9, 2023
ಕಾರು ಪಲ್ಟಿಯಾಗಿ ಬಿಜೆಪಿ ಮುಖಂಡ ಸಾವು; ಇಬ್ಬರು ಮಕ್ಕಳು ಸೇರಿ ನಾಲ್ವರಿಗೆ ಗಾಯ-ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ-ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ-ಆಸೀಸ್‌ ವೇಗದ ದಾಳಿಗೆ ಕಂಗಾಲಾದ ಭಾರತಕ್ಕೆ ಇನ್ನಿಂಗ್ಸ್ ಹಿನ್ನಡೆ ಭೀತಿ; ಅಜಿಂಕ್ಯ ರಹಾನೆ ಆಸರೆ!-ಭಯಾನಕ ಮರ್ಡರ್; ಸಂಗಾತಿಯ ಶರೀರವನ್ನು ಪೀಸ್ ಪೀಸ್ ಮಾಡಿ ಕುಕ್ಕರ್ ನಲ್ಲಿ ಬೇಯಿಸಿದ ಕ್ರೂರಿ ಪ್ರೇಮಿ..!-ಕಾಂಗ್ರೆಸ್ ಸರ್ಕಾರಕ್ಕೆ 18 ಸಲಹೆಗಳನ್ನ ಕೊಟ್ಟ ಶಿಕ್ಷಣ ತಜ್ಞ ಪ್ರೊ ಎಂಆರ್ ​ದೊರೆಸ್ವಾಮಿ-ಸುಧಾಕರ್​​ನಿಂದಲೇ ನಾನು ಸೋತಿದ್ದು; ಎಂಟಿಬಿ ನಾಗರಾಜ್ ನೇರ ಆರೋಪ-ಕೇರಳಕ್ಕೆ ಮಳೆಯ ಅಬ್ಬರ ಶುರು, 48 ಗಂಟೆಗಳಲ್ಲಿ ಕರ್ನಾಟಕದಲ್ಲೂ ಮಳೆ!-16 ಸಾವಿರ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದ ಹೃದ್ರೋಗ ತಜ್ಞ ಹೃದಯಾಘಾತದಿಂದ ನಿಧನ-ಆಂಧ್ರ ಪ್ರದೇಶದಲ್ಲಿ ಭೀಕರ ಅಪಘಾತ - ಓರ್ವ ಮೃತ್ಯು, ಉಚ್ಚಿಲದ ವ್ಯಕ್ತಿಗೆ ಗಂಭೀರ ಗಾಯ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮೋಹನ್‌ ಭಾಗವತ್‌ ಸೇರಿ ಐವರ ನಾಯಕರ ಬ್ಲೂಟಿಕ್‌ ರದ್ದು ಮಾಡಿದ ಟ್ವಿಟರ್!!

Twitter
Facebook
LinkedIn
WhatsApp
ಮೋಹನ್‌ ಭಾಗವತ್‌ ಸೇರಿ ಐವರ ನಾಯಕರ ಬ್ಲೂಟಿಕ್‌ ರದ್ದು  ಮಾಡಿದ ಟ್ವಿಟರ್!!

ಹೊಸದಿಲ್ಲಿ: ಕೇಂದ್ರ ಸರ್ಕಾರ ಮತ್ತು ಟ್ವಿಟರ್ ನಡುವಿನ ವಿವಾದ ತಾರಕಕ್ಕೇರಿದೆ. ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಬ್ಲೂಟಿಕ್‌ ಹಿಂಪಡೆದ ನಂತರ ಕೇಂದ್ರ ಸರ್ಕಾರ ಮತ್ತು ಟ್ವಿಟರ್‌ ನಡುವೆ ವಾರ್‌ ಶುರುವಾಗಿದೆ.
ವಿವಾದದ ನಂತರ ಟ್ವಿಟರ್‌ ಸಂಸ್ಥೆಯು ಆರ್‌ಎಸ್‌ಎಸ್‌ ರಾಷ್ಟ್ರೀಯ ಮುಖ್ಯಸ್ಥ ಮೋಹನ್‌ ಭಾಗವತ್‌ ಸೇರಿದಂತೆ ಬಿಜೆಪಿಯ ನಾಲ್ವರು ನಾಯಕರ ಬ್ಲೂಟಿಕ್‌ ರದ್ದುಮಾಡಿದೆ.
ಆರೆಸ್ಸೆಸ್‌ ನಾಯಕರಾದ ಅರುಣ್‌ ಕುಮಾರ್‌, ಸುರೇಶ್‌ ಜೋಶಿ ಮತ್ತು ಕೃಷ್ಣ ಕುಮಾರ್‌ ಅವರ ಖಾತೆಗೆ ನೀಡಲಾಗಿದ್ದ ಬ್ಲೂಟಿಕ್‌ ಬ್ಯಾಡ್ಜ್‌ಅನ್ನು ಟ್ವಿಟರ್‌ ಹಿಂಪಡೆಯುವ ಮೂಲಕ ವಿವಾದ ಮತ್ತಷ್ಟು ಭುಗಿಲೇಳುವಂತೆ ಮಾಡಿದೆ.

ಟ್ವಿಟರ್‌ಗೆ ಮನವಿ ಮಾಡಿದ ನಂತರ ರದ್ದಾಗಿದ್ದ ವೆಂಕಯ್ಯ ನಾಯ್ಡು ಅವರ ಬ್ಲೂಟಿಕ್‌ ಬ್ಯಾಡ್ಜ್‌ ಮತ್ತೆ ಬಂದಿದ್ದು, ಇದೀಗ ಮಿಕ್ಕವರ ಖಾತೆಗಳ ಕುರಿತು ಮನವಿ ಸಲ್ಲಿಸಲಾಗಿದೆ.
ನಾಯ್ಡು ಅವರ ಖಾತೆಯ ಬ್ಲೂಟಿಕ್‌ ರದ್ದಾದ ನಂತರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯು ಟ್ವಿಟರ್‌ಗೆ ನೋಟಿಸ್‌ ನೀಡಿದ್ದು ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯ ಖಾತೆಗೆ ಆ ರೀತಿ ಮಾಡುವಂತಿಲ್ಲ. ಟ್ವಿಟರ್‌ ಸಂಸ್ಥೆಯು ಭಾರತೀಯರ ತಾಳ್ಮೆಯನ್ನು ಪರೀಕ್ಷಿಸುತ್ತಿದೆ ಎಂದು ಹೇಳಿದೆ.
ಆದರೆ ಟ್ವಿಟರ್‌ ಇದಕ್ಕೆ ಸ್ಪಷ್ಟನೆ ನೀಡಿದ್ದು ಇದಕ್ಕೆ ಯಾವುದೇ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಟ್ವಿಟರ್‌ ನಿಯಮಗಳ ಪ್ರಕಾರ ಯಾವುದೇ ವ್ಯಕ್ತಿಯು ಆರು ತಿಂಗಳ ಕಾಲ ಲಾಗ್‌ ಇನ್‌ ಆಗದಿದ್ದರೆ ಆ ಖಾತೆಯನ್ನು ನಿಷ್ಕ್ರಿಯ ಖಾತೆ ಪರಿಗಣಿಸಲಾಗುವುದು ಎಂದಿದೆ. ಟ್ವಿಟರ್ ಹಾಗೂ ಕೇಂದ್ರ ಸರಕಾರದ ನಡುವಿನ ವಿವಾದ ಇದು ಮೊದಲಲ್ಲ. ಈ ಹಿಂದೆ ಕೆಲ ವಿಷಯಕ್ಕೆ ಸಂಬಂಧ ವಿವಾದವೆದ್ದಿತ್ತು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಅಂತಾರಾಷ್ಟ್ರೀಯ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು