ಬುಧವಾರ, ಫೆಬ್ರವರಿ 28, 2024
ಹಿಮಾಚಲ ಕಾಂಗ್ರೆಸ್ ಸರ್ಕಾರವನ್ನು ಬಿಕ್ಕಟ್ಟಿನಿಂದ ಪಾರು ಮಾಡಲು ಡಿ.ಕೆ. ಶಿವಕುಮಾರ್‌ ಎಂಟ್ರಿ.!-ಲೋಕಸಭೆ ಚುನಾವಣೆ ಹೊತ್ತಿನಲ್ಲಿಯೇ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್ ಗೆ ಸಿಬಿಐ ಸಮನ್ಸ್.!-ರಾಜೀನಾಮೆ ಸುಳ್ಳು ಸುದ್ದಿ ; ನಾನಿನ್ನೂ ರಾಜೀನಾಮೆ ನೀಡಿಲ್ಲ,5 ವರ್ಷ ನಮ್ಮದೇ ಸರ್ಕಾರ: ಹಿಮಾಚಲ ಸಿಎಂ-ಹಿರಿಯ ನಟಿ ಮತ್ತು ರಾಜಕಾರಣಿ ಜಯಪ್ರದಾರನ್ನು ಬಂಧಿಸುವಂತೆ ಕೋರ್ಟ್ ಆದೇಶ.!-ರಾಜ್ಯದಲ್ಲಿ ವಿದ್ಯುತ್ ದರ ಇಳಿಕೆಗೆ ಸರ್ಕಾರ ಆದೇಶ; ಹೇಗಿದೆ ಪರಿಷ್ಕೃತ ದರ?-ಮಂಗಳೂರು : ಖಾಸಗಿ ಬಸ್ ಸಾರಿಗೆ ಉದ್ಯಮಿ ನೇಣು ಬಿಗಿದು ಆತ್ಮಹತ್ಯೆಗೆ ಶರಣು.!-RCB ತಂಡದ ಸ್ಟಾರ್ ಆಟಗಾರ್ತಿ ಹಾಗೂ ಕನ್ನಡತಿ ಶ್ರೇಯಾಂಕಾ ಪಾಟೀಲ್ ಗೆ ಅಭಿಮಾನಿಯಿಂದ ಮದುವೆ ಪ್ರಸ್ತಾಪ..!-Accident: ಟ್ರಕ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸಾವು!-ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ಸಂತನ್ ಸಾವು..!-ಮಂಗಳೂರು: ಪಾಕಿಸ್ತಾನ ಪರ ಘೋಷಣೆ ; ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರು ಪೊಲೀಸ್ ವಶಕ್ಕೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮೋದಿ ಸರಕಾರದ ಪುನರ್ರಚನೆ ಯಲ್ಲಿ ಕರ್ನಾಟಕಕ್ಕೆ ಹೊಸಮುಖ?

Twitter
Facebook
LinkedIn
WhatsApp
ಮೋದಿ ಸರಕಾರದ ಪುನರ್ರಚನೆ ಯಲ್ಲಿ ಕರ್ನಾಟಕಕ್ಕೆ ಹೊಸಮುಖ?

ನವದೆಹಲಿ:ಪ್ರಧಾನಿ ಮೋದಿ ನೇತೃತ್ವದ ಒಕ್ಕೂಟ ಸರ್ಕಾರದ ಸಂಪುಟ ಪುನರ್‌ರಚನೆ ಯಾಗುತ್ತದೆ ಎಂದು ಹೇಳಲಾಗುತ್ತಿದೆ. ಕೊರೊನಾ ಸಂದರ್ಭದಲ್ಲಿ ಮೋದಿಯವರ ವರ್ಚಸ್ಸು ಕುಸಿಯುತ್ತಿದ್ದು, ಕೊರೊನಾ ವೈಫಲ್ಯವನ್ನು ಕೆಲವರ ತಲೆಕಟ್ಟಿ ಮೋದಿಯವರ ವರ್ಚಸ್ಸನ್ನು ಮರುಸ್ಥಾಪಿಸುವ ಹುನ್ನಾರ ಇದರ ಹಿಂದೆ ಇದೆ. ಹೀಗಾಗಿ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸದ ಮಂತ್ರಿಗಳಿಗೆ ಗೇಟ್‌ಪಾಸ್‌ ಕೊಡುವುದು ಅನಿವಾರ್ಯವಾಗಿದೆ ಎಂದು ಮೂಲಗಳು ಹೇಳಿವೆ. ಅಲ್ಲದೆ, ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಮತ್ತು ಶಿವಸೇನೆ ಎನ್‌ಡಿಎಯಿಂದ ನಿರ್ಗಮಿಸಿದ ನಂತರ ಮತ್ತು ಎಲ್‌ಜೆಪಿ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನದ ಕಾರಣದಿಂದಾಗಿ ಸಂಪುಟದಲ್ಲಿ ಖಾಲಿ ಹುದ್ದೆಗಳಿವೆ. ಅನೇಕ ಮಂತ್ರಿಗಳು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ.

ಈಗಿರುವ ಕೆಲವು ಸಚಿವರು ಸ್ಥಾನ ಕಳೆದುಕೊಳ್ಳಲಿದ್ದು, 27 ಹೊಸಬರಿಗೆ ಸಂಪುಟದಲ್ಲಿ ಜಾಗ ಸಿಗಲಿದೆ ಎಂದು ಹೇಳಲಾಗಿದೆ. ಮಧ್ಯಪ್ರದೇಶದ ಪ್ರಭಾವಿ ಕಾಂಗ್ರೆಸ್‌ ನಾಯಕರಾಗಿದ್ದು, ಈಚೆಗೆ ಬಿಜೆಪಿ ಸೇರಿಕೊಂಡಿರುವ ಜ್ಯೋತಿರಾದಿತ್ಯ ಸಿಂಧಿಯಾ, ಬಿಹಾರದ ಉಪಮುಖ್ಯಮಂತ್ರಿಯಾಗಿದ್ದ, ರಾಜಸ್ಯಭಾ ಸದಸ್ಯ ಸುಶೀಲ್‌ ಮೋದಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಭೂಪೇಂದರ್‌ ಯಾದವ್‌ ಅವರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳಬೇಕಾದ ಅನಿವಾರ್ಯವೂ ಮೋದಿ ಸರ್ಕಾರಕ್ಕಿದೆ. ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ಚುನವಣೆ ನಡೆಯಲಿದೆ. ಆದ್ದರಿಂದ ಅಲ್ಲಿನ ನಾಯಕರಿಗೆ ಜಾಸ್ತಿ ಅವಕಾಶ ಸಿಗುವ ಸಾಧ್ಯತೆಯಿದೆ. ಆದ್ದರಿಂದ ಉತ್ತರಪ್ರದೇಶದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ವತಂತ್ರ ದೇವ್‌ ಸಿಂಗ್‌, ಪಕಜ್‌ ಚೌಧರಿ, ವರುಣ್‌ ಗಾಂಧಿ, ಅನುಪ್ರಿಯ ಪಾಟೀಲ್‌ ಮತ್ತು ರಾಜ್ಯಸಭಾ ಸದಸ್ಯ ಅನಿಲ್‌ ಜೈನ್‌ ಹೆಸರು ಈ ಭಾಗದಿಂದ ಕೇಳಿಬರುತ್ತಿದೆ.

ನಿಜವಾಗಿಯೂ ರಾಜ್ಯ ಬಿಜೆಪಿಯ ಆಂತರಿಕ ಕಲಹ ಕಡಿಮೆಯಾಗಿದೆಯ?

ಇದರ ಜತೆಗೆ ಅಸ್ಸಾ ಮುಖ್ಯಮಂತ್ರಿಯಾಗಿದ್ದ ಸುರ್ಬಾನಂದ್‌ ಸೋನಾವಾಲ್‌, ಮಹಾರಾಷ್ಟ್ರದ ಸಿಎಂ ಆಗಿದ್ದ ನಾರಾಯಣ್‌ ರಾಣೆ, ಸಂಸದ ಪ್ರೀತಮ್‌ ಮುಂದೆ, ಬಿಜೆಪಿ ಹಿರಿಯ ನಾಯಕ ಕೈಲಾಸ್‌ ವಿಜಯ್‌ ವರ್ಗಿಯಾ, ಬಿಜೆಪಿ ವಕ್ತಾರ ಸಜೈದ್‌ ಜಾಫರ್‌ ಹೆಸರೂ ಕೇಳಿಬಂದಿದೆ.

ಒಡಿಶಾ ಸಂಸದ ಅಶ್ವಿನ್ ವೈಷ್ಣವ್, ದೆಹಲಿಯಿಂದ ಸಂಸದೆ ಮೀನಾಕ್ಷಿ ಲೇಖಿ, ಬಂಗಾಳದ ಮಾಜಿ ರೈಲ್ವೇ ಸಚಿವ ದಿನೇಶ್ ತ್ರಿವೇದಿ, ಬಿಹಾರದಲ್ಲಿ ಚಿರಾಗ್ ಪಾಸ್ವಾನ್ ವಿರುದ್ಧ ದಂಗೆ ಎದ್ದ ಪಶುಪತಿ ಪರಾಸ್, ರಾಜ್ಯ ಸಭಾ ಸದಸ್ಯ ಅನಿಲ್ ಜೈನ್, ರಾಜಸ್ಥಾನದಿಂದ ಕಿರಿಯ ಸಂಸದ ಚೌಧರಿ, ರಾಹುಲ್ ಕಸ್ವಾನ್ ಮತ್ತು ಸಿಕಾರ್ ಸಂಸದ ಸುಮೇಧಾನಂದ ಸರಸ್ವತಿ, ಜೆಡಿಯು ನಾಮನಿರ್ದೇಶನಗಳಾದ ಆರ್.ಸಿ.ಪಿ. ಸಿಂಗ್ ಮತ್ತು ಸಂತೋಷ್ ಕುಮಾರ್, ಲಡಾಖ್‌ನ ಸಂಸದ ಜಮ್ಯಾಂಗ್‌ ನಮ್‌ಸ್ಯಾಲ್‌, ಹರಿಯಾಣದ ಸಂಸದರಾದ ಸುನೀತಾ ಡುಗ್ಗಲ್‌ ಮುಂತಾದವರ ಹೆಸರು ಕೂಡ ಸಂಭಾವ್ಯ ಪಟ್ಟಿಯಲ್ಲಿದೆ. ಇನ್ನು ಕರ್ನಾಟಕದಿಂದ ಕೇವಲ ಒಬ್ಬರ ಹೆಸರು ಮಾತ್ರ ಸಚಿವ ಸಂಪುಟಕ್ಕೆ ಸೇರುವ ಸಾಧ್ಯತೆ ಇದ್ದು, ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಅವರಿಗೆ ಸಂಪುಟದಲ್ಲಿ ಜಾಗ ಕೊಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಕಳೆದ ಒಂದು ವಾರದಿಂದ ಬಂಟ್ವಾಳ ಸಬ್ ರಿಜಿಸ್ಟರ್ ಕೇಂದ್ರದಲ್ಲಿ ಹಲವಾರು ದಾಖಲ ಪತ್ರಗಳ ರಿಜಿಸ್ಟ್ರೇಷನ್ ಆಗದೆ ನಾಗರಿಕರು ಪರದಾಡುತ್ತಿದ್ದಾರೆ ಎಂಬ ಮಾಹಿತಿ ಮಾಧ್ಯಮಕ್ಕೆ ಲಭ್ಯವಾಗಿದೆ.

ಬಿಸಿ ರೋಡು ಸೇರಿ ದಕ್ಷಿಣ ಕನ್ನಡದ ಹಲವು ನೋಂದಾವಣಾ ಕಚೇರಿಗಳಲ್ಲಿ ಸರ್ವರ್ ಸಮಸ್ಯೆ. ವಾರಗಟ್ಟಲೆ ಹೈರಾಣದ ನಾಗರಿಕರು

ಬಿಸಿ ರೋಡು ಸೇರಿ ದಕ್ಷಿಣ ಕನ್ನಡದ ಹಲವು ನೋಂದಾವಣಾ ಕಚೇರಿಗಳಲ್ಲಿ ಸರ್ವರ್ ಸಮಸ್ಯೆ. ವಾರಗಟ್ಟಲೆ ಹೈರಾಣದ ನಾಗರಿಕರು Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡದ ಹಲವಾರು ಸಬ್ ರಿಜಿಸ್ಟರ್ ಗಳಲ್ಲಿ ಕಳೆದ

ಅಂಕಣ

Vicky and team's reels

Video: ವಿರುಷ್ಕಾ ದಂಪತಿಯ ಮಗುವಿನ ಅಕಾಯ್​ ಹೆಸರಿನ ಬಗ್ಗೆ ವಿಕ್ಕಿ ಆ್ಯಂಡ್​ ಟೀಮ್​ನ Reels Viral!

Video: ವಿರುಷ್ಕಾ ದಂಪತಿಯ ಮಗುವಿನ ಅಕಾಯ್​ ಹೆಸರಿನ ಬಗ್ಗೆ ವಿಕ್ಕಿ ಆ್ಯಂಡ್​ ಟೀಮ್​ನ ರೀಲ್ಸ್ ವೈರಲ್! Twitter Facebook LinkedIn WhatsApp ನಾನು ನಂದಿನಿ ಖ್ಯಾತಿಯ ವಿಕ್ಕಿ ಆ್ಯಂಡ್​ ಟೀಮ್​! ಇದಾಗಲೇ ಹಲವಾರು ರೀಲ್ಸ್​ಗಳನ್ನು

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು