ಶನಿವಾರ, ಸೆಪ್ಟೆಂಬರ್ 7, 2024
ಪ್ರಜ್ವಲ್‌ ರೇವಣ್ಣಗೆ ಶಾಕ್; ಜಾಮೀನು ಅರ್ಜಿ ವಜಾ!-ಸೋನಿಯಾ, ರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿ; ಇಬ್ಬರ ವಿರುದ್ಧ ಕೇಸ್ ದಾಖಲು-ಕೋವಿಡ್ ಹಗರಣ: ಸಿಎಂ ಕೈ ಸೇರಿದ ವರದಿ; ಮಾಜಿ ಆರೋಗ್ಯ ಸಚಿವರಿಗೆ ತಟ್ಟುತ್ತಾ ಬಿಸಿ?-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರೇಪ್ ಹೇಗಾಗುತ್ತೆ ಎಂದು ಕಂಗನಾಗೆ (Kangana Ranaut) ಕೇಳಿ; ಮಾಜಿ ಸಂಸದನ ವಿವಾದಿತ ಹೇಳಿಕೆ!-Chikkaballapur: ಟಿಟಿ - ಕಾರಿನ ಮಧ್ಯೆ ಭೀಕರ ಅಪಘಾತ; ಮೂವರ ದುರ್ಮರಣ-ಐವನ್ ಡಿಸೋಜಾ ಮನೆ ಮೇಲೆ ಕಲ್ಲುತೂರಾಟ: ಬಂಟ್ವಾಳ ಮೂಲದ ಇಬ್ಬರ ಬಂಧನ-Sarah Rahanuma: ಟಿವಿ ಪತ್ರಕರ್ತೆಯ ಶವ ಢಾಕಾ ಸರೋವರದಲ್ಲಿ ಪತ್ತೆ-ನಟ ದರ್ಶನ್ ಗೆ ಜೈಲೇ ಗತಿ; ನ್ಯಾಯಾಂಗ ಬಂಧನ ವಿಸ್ತರಣೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮೊಹಮ್ಮದ್ ಶಮಿಗೆ ಬಿಗ್ ಶಾಕ್: ಪತ್ನಿಗೆ ತಿಂಗಳು 50 ಸಾವಿರ ರೂ. ನೀಡುವಂತೆ ಕೋರ್ಟ್ ಆದೇಶ

Twitter
Facebook
LinkedIn
WhatsApp
article l 201841007223226552000

2014 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟಿದ್ದ ಮೊಹಮ್ಮದ್ ಶಮಿ ಹಾಗೂ ಹಸಿನ್ ಜಹಾನ್​ಗೆ ಒಬ್ಬಳು ಮಗಳಿದ್ದಾಳೆ. ವಿಶೇಷ ಎಂದರೆ ಅದಾಗಲೇ ಮದುವೆಯಾಗಿ ಡೈವೋರ್ಸ್ ಪಡೆದಿದ್ದ ಹಸಿನ್ ಜಹಾನ್ ಅವರನ್ನು ಶಮಿ ವಿವಾಹವಾಗಿದ್ದರು.

ಟೀಮ್ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ಹಾಗೂ ಪತ್ನಿ ಹಸಿನ್ ಜಹಾನ್ ನಡುವಣ 5 ವರ್ಷಗಳ ಕಾನೂನು ಹೋರಾಟ ಒಂದು ಹಂತಕ್ಕೆ ಬಂದು ನಿಂತಿದೆ. ಐದು ವರ್ಷಗಳ ಹಿಂದೆ ಆರಂಭವಾಗಿದ್ದ ಕಾನೂನು ಸಮರದಲ್ಲಿ ಇದೀಗ ಅಲಿಪುರ ಜಿಲ್ಲಾ ನ್ಯಾಯಾಲಯವು ಪತ್ನಿ ಹಸಿನ್ ಜಹಾನ್ ಪರವಾಗಿ ತೀರ್ಪು ನೀಡಿದೆ.

Hasin Jahan
Shami Hasin

ಮೊಹಮ್ಮದ್ ಶಮಿ ಅವರ ವಾರ್ಷಿಕ ಆದಾಯ ಆದಾಯ ತೆರಿಗೆ 7.19 ಕೋಟಿ ರೂ. ಇದನ್ನು ಪರಿಗಣಿಸಿ ಪ್ರತಿ ತಿಂಗಳು 10ನೇ ತಾರೀಖಿನಂದು 50 ಸಾವಿರ ರೂ. ಪಾವತಿಗೆ ಕೋರ್ಟ್​ ಆದೇಶಿಸಿದೆ. ಅಷ್ಟೇ ಅಲ್ಲದೆ ಹಸಿನ್ ಜಹಾನ್ ಅವರ ಮಾಸಿಕ 10 ಲಕ್ಷ ರೂ. ಬೇಡಿಕೆಯನ್ನು ತಿರಸ್ಕರಿಸಿದೆ.

2014 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟಿದ್ದ ಮೊಹಮ್ಮದ್ ಶಮಿ ಹಾಗೂ ಹಸಿನ್ ಜಹಾನ್​ಗೆ ಒಬ್ಬಳು ಮಗಳಿದ್ದಾಳೆ. ವಿಶೇಷ ಎಂದರೆ ಅದಾಗಲೇ ಮದುವೆಯಾಗಿ ಡೈವೋರ್ಸ್ ಪಡೆದಿದ್ದ ಹಸಿನ್ ಜಹಾನ್ ಅವರನ್ನು ಶಮಿ ವಿವಾಹವಾಗಿದ್ದರು. ಆದರೆ ಹೊಸ ಜೀವನ ಆರಂಭಿಸಿದ್ದ ಈ ಜೋಡಿ ನಡುವೆ ಬಿರುಕುಂಟಾಗಿತ್ತು.

ಅದರಲ್ಲೂ 2018 ರಲ್ಲಿ ಕೌಟುಂಬಿಕ ಹಿಂಸೆ, ಹಲ್ಲೆ, ವರದಕ್ಷಿಣೆ ಕಿರುಕುಳ ಮತ್ತು ಕ್ರಿಕೆಟ್ ಫಿಕ್ಸಿಂಗ್‌ನಂತಹ ಹಲವು ಗಂಭೀರ ಆರೋಪಗಳನ್ನು ಹಸಿನ್ ಜಹಾನ್ ಮಾಡಿದ್ದರು. ಆದಾಗ್ಯೂ, ಫಿಕ್ಸಿಂಗ್ ಬಗ್ಗೆ ಬಿಸಿಸಿಐ ತನಿಖೆಯಲ್ಲಿ ಅವರು ನಿರಪರಾಧಿ ಎಂದು ಸಾಬೀತಾಗಿತ್ತು.

ಇನ್ನು ಪತ್ನಿ ಮಾಡಿರುವ ಎಲ್ಲಾ ಆರೋಪಗಳನ್ನು ಮೊಹಮ್ಮದ್ ಶಮಿ ಸಾರಾಸಗಟಾಗಿ ತಳ್ಳಿ ಹಾಕಿದ್ದರು. ಸದ್ಯ ಪತ್ಯೇಕವಾಗಿ ವಾಸಿಸುತ್ತಿರುವ ಈ ಜೋಡಿಯು ಇನ್ನೂ ಕೂಡ ವಿಚ್ಛೇದನ ಪಡೆದಿಲ್ಲ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ