ಭಾನುವಾರ, ಸೆಪ್ಟೆಂಬರ್ 15, 2024
20 ವರ್ಷಗಳ ಬಳಿಕ ಹುಕ್ಕೇರಿ ಪುರಸಭೆ ಕಾಂಗ್ರೆಸ್ ತೆಕ್ಕೆಗೆ-ಪ್ರಜ್ವಲ್‌ ರೇವಣ್ಣಗೆ ಶಾಕ್; ಜಾಮೀನು ಅರ್ಜಿ ವಜಾ!-ಸೋನಿಯಾ, ರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿ; ಇಬ್ಬರ ವಿರುದ್ಧ ಕೇಸ್ ದಾಖಲು-ಕೋವಿಡ್ ಹಗರಣ: ಸಿಎಂ ಕೈ ಸೇರಿದ ವರದಿ; ಮಾಜಿ ಆರೋಗ್ಯ ಸಚಿವರಿಗೆ ತಟ್ಟುತ್ತಾ ಬಿಸಿ?-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರೇಪ್ ಹೇಗಾಗುತ್ತೆ ಎಂದು ಕಂಗನಾಗೆ (Kangana Ranaut) ಕೇಳಿ; ಮಾಜಿ ಸಂಸದನ ವಿವಾದಿತ ಹೇಳಿಕೆ!-Chikkaballapur: ಟಿಟಿ - ಕಾರಿನ ಮಧ್ಯೆ ಭೀಕರ ಅಪಘಾತ; ಮೂವರ ದುರ್ಮರಣ-ಐವನ್ ಡಿಸೋಜಾ ಮನೆ ಮೇಲೆ ಕಲ್ಲುತೂರಾಟ: ಬಂಟ್ವಾಳ ಮೂಲದ ಇಬ್ಬರ ಬಂಧನ-Sarah Rahanuma: ಟಿವಿ ಪತ್ರಕರ್ತೆಯ ಶವ ಢಾಕಾ ಸರೋವರದಲ್ಲಿ ಪತ್ತೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮೈಸೂರು ರೇಪ್ ಆರೋಪಿಗಳು ಬಂಧನ

Twitter
Facebook
LinkedIn
WhatsApp
ಮೈಸೂರು ರೇಪ್ ಆರೋಪಿಗಳು ಬಂಧನ

ಮೈಸೂರು : ಖಾಕಿ ಪಡೆಗೆ ತಲೆನೋವು ತರಿಸಿದ್ದ ಮೈಸೂರಿನಲ್ಲಿ ನಡೆದಿದ್ದ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಕೊನೆಗೂ ಬಯಲಾಗಿದೆ. ಕತ್ತಲ ರಾತ್ರಿಯಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣದ ಆರೋಪಿಗಳ ಬಂಧನದ ಸ್ಟೋರಿಯೇ ನಿಜಕ್ಕೂ ರೋಚಕ. ಅದ್ರಲ್ಲೂ ಆ ಒಂದು ಬಸ್‌ ಟಿಕೆಟ್‌ ಆರೋಪಿಗಳ ಬಂಧನಕ್ಕೆ ಸಹಕಾರಿಯಾಗಿದೆ.

ಮೈಸೂರುನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ.

ಎಂಬಿಎ ವಿದ್ಯಾರ್ಥಿನಿಯ ಮೇಲೆ ಕಾಮುಕರು ಕತ್ತಲ ರಾತ್ರಿಯಲ್ಲಿ ಅತ್ಯಾಚಾರವೆಸಗಿದ್ದರು. ಸ್ನೇಹಿತನ ಜೊತೆಗೆ ವಾಕಿಂಗ್‌ಗೆ ತೆರಳಿದ್ದ ಯುವತಿ ರಸ್ತೆ ಪಕ್ಕದಲ್ಲಿ ಕುಳಿತು ಮಾತನಾಡುತ್ತಿದ್ದಳು. ಈ ವೇಳೆಯಲ್ಲಿ ಬಂದ ಐವರು ಕಾಮುಕರನ್ನು ಯುವಕನ ಮೇಲೆ ಹಲ್ಲೆಯನ್ನು ನಡೆಸಿ ಯುವತಿಯನ್ನು ಪೊದೆಯ ಬಳಿಗೆ ಕರೆದೊಯ್ದು ಅತ್ಯಾಚಾರ ವೆಗಿಸಿದ್ದಾರೆ. ನಂತರ ಯುವಕನ ಬಳಿಯಲ್ಲಿ ಮೂರು ಲಕ್ಷಕ್ಕೆ ಬೇಡಿಕೆಯಿಟ್ಟು ಸುಮಾರು ಎರಡು ಗಂಟೆಗಳ ನಂತರ ಸ್ಥಳದಿಂದ ಪರಾರಿಯಾಗಿದ್ದರು. ಯುವಕ ಯುವತಿಯನ್ನು ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆಯೇ ಪ್ರಕರಣ ಬಯಲಿಗೆ ಬಂದಿತ್ತು.

ಸಾಮೂಹಿಕ ಅತ್ಯಾಚಾರ ಪ್ರಕರಣ ರಾಜ್ಯ ಮಾತ್ರವಲ್ಲದೇ ದೇಶದಾದ್ಯಂತ ಬಾರೀ ಸುದ್ದಿಯಾಗಿತ್ತು. ಇದೇ ಕಾರಣಕ್ಕೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ತಜ್ಞರ ಹಾಗೂ ಹಿರಿಯ ಪೊಲೀಸ್‌ ಅಧಿಕಾರಿಗಳ ತಂಡ ಆರೋಪಿಗಳ ಸುಳಿವು ಪತ್ತೆಯ ಕಾರ್ಯವನ್ನು ಮಾಡಿದ್ದರು. ಘಟನಾ ಸ್ಥಳದಲ್ಲಿ ಸಿಕ್ಕ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಸ್ಥಳದಲ್ಲಿ ಮದ್ಯದ ಬಾಟಲಿ, ಬಸ್‌ ಟಿಕೆಟ್‌ ಜೊತೆಗೆ ಘಟನೆ ನಡೆದ ಸಮಯದಲ್ಲಿನ ಸಮೀಪದ ಮೊಬೈಲ್‌ ಟವರ್‌ ಮೂಲಕ ಯಾವೆಲ್ಲಾ ಮೊಬೈಲ್‌ ಸಂಖ್ಯೆ ಕಾರ್ಯನಿರ್ವಹಿಸಿದೆ ಅನ್ನೋ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ಸುಳಿವುಕೊಟ್ಟ ಮದ್ಯದ ಬಾಟಲಿ, ಬಸ್‌ ಟಿಕೆಟ್‌

ಆರೋಪಿಗಳು ಘಟನೆ ನಡೆದ ನಂತರದಲ್ಲಿ ಗೂಡ್ಸ್‌ ವಾಹನದ ಮೂಲಕ ಮೈಸೂರಿನಿಂದ ತಾಳವಾಡಿಗೆ ತೆರಳಿದ್ದರು. ಯುವಕ ಹಾಗೂ ಯುವತಿಯ ಮೊಬೈಲ್‌ಗಳನ್ನು ಕಿತ್ತುಕೊಂಡು ಕಾಮುಕರು ಪರಾರಿಯಾಗಿದ್ದರು. ಸ್ಥಳದಲ್ಲಿ ಯಾವುದೇ ಸಿಸಿ ಕ್ಯಾಮರಾ ದೃಶ್ಯಾವಳಿ ಪತ್ತೆಯಾಗಿರಲಿಲ್ಲ. ಜೊತೆಗೆ ಯಾವುದೇ ಖಚಿತ ಸುಳಿವು ಸಿಗದೇ ಇರೋದು ಪೊಲೀಸರ ತನಿಖೆಗೆ ಹಿನ್ನಡೆಯಾಗಿತ್ತು.

ಸಂತ್ರಸ್ತೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌, ಮುಂಬೈ ತೆರಳಿದ ಯುವತಿ ಆದರೆ ಆರೋಪಿಗಳು ದರೋಡೆ ಮಾಡುವ ಹುನ್ನಾರ ನಡೆಸಿರೋದು ಯುವಕನ ಹೇಳಿಕೆಯಿಂದ ಖಚಿತವಾಗಿತ್ತು. ಇದೊಂದು ದರೋಡೆಯ ಉದ್ದೇಶ ಅನ್ನೋದು ಪೊಲೀಸರಿಗೆ ತಿಳಿಯುತ್ತಲೇ ಎಲ್ಲಾ ಆಂಗಲ್‌ನಲ್ಲಿಯೂ ತನಿಖೆಯನ್ನು ಚುರುಕುಗೊಳಿಸಿದ್ದರು. ಸ್ಥಳದಲ್ಲಿ ಸಿಕ್ಕಿರುವ ಮದ್ಯದ ಬಾಟಲಿಯ ಬಾರ್‌ ಕೋಡ್‌ ಮೂಲಕ ಖರೀದಿ ಮಾಡಿದ ಸ್ಥಳವನ್ನು ಪತ್ತೆ ಹಚ್ಚಿದ್ದರು. ಅಲ್ಲದೇ ಬಸ್‌ ಟಿಕೆಟ್‌ ತಾಳವಾಡಿ ಸ್ಥಳದ ಮಾಹಿತಿ ನೀಡಿತ್ತು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ivan dsouza ಐವನ್ ಡಿಸೋಜಾ

ಐವನ್ ಡಿಸೋಜಾ ಮನೆ ಮೇಲೆ ಕಲ್ಲುತೂರಾಟ: ಬಂಟ್ವಾಳ ಮೂಲದ ಇಬ್ಬರ ಬಂಧನ

ಐವನ್ ಡಿಸೋಜಾ ಮನೆ ಮೇಲೆ ಕಲ್ಲುತೂರಾಟ: ಬಂಟ್ವಾಳ ಮೂಲದ ಇಬ್ಬರ ಬಂಧನ Twitter Facebook LinkedIn WhatsApp ಮಂಗಳೂರು, ಆಗಸ್ಟ್​​ 28: ರಾಜ್ಯಪಾಲರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಎಂಎಲ್​ಸಿ ಐವನ್ ಡಿಸೋಜಾ (Ivan D’Souza)  ಮನೆ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು