ಗುರುವಾರ, ಮಾರ್ಚ್ 13, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮೂರನೇ ಮದುವೆಗೆ ರೆಡಿಯಾದರಾ ಪವರ್ ಸ್ಟಾರ್ ಪುತ್ರಿ

Twitter
Facebook
LinkedIn
WhatsApp
Sreeja Konidela Wiki Biography 1024x555 1

ತೆಲುಗಿನ ಪವರ್ ಸ್ಟಾರ್ ಚಿರಂಜೀವಿ ಪುತ್ರ ಶ್ರೀಜಾ ಬದುಕಿಗೆ ಮತ್ತೋರ್ವ ವ್ಯಕ್ತಿ ಪ್ರವೇಶ ಮಾಡಿದ್ದಾರಾ? ಹಾಗೆನ್ನುತ್ತಿದೆ ಅವರೇ ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವ ಪೋಸ್ಟ್. ಈವರೆಗೂ ತಮ್ಮ ಖಾಸಗಿ ಬದುಕಿನ ಬಗ್ಗೆ ಏನೂ ಹೇಳಿಕೊಳ್ಳದೇ ಶ್ರೀಜಾ ಇದೀಗ ಏಕಾಏಕಿಯಾಗಿ ಇನ್ಸ್ಟಾದಲ್ಲಿ ಪೋಸ್ಟ್ ವೊಂದನ್ನು ಮಾಡಿದ್ದಾರೆ. ಡಿಯರ್ 2022, ನೀನು ನನ್ನ ಜೀವನಕ್ಕೆ ಹೊಸ ವ್ಯಕ್ತಿಯನ್ನು ಪರಿಚಯ ಮಾಡಿಸಿದ್ದೀಯಾ. ಅವನ ಭೇಟಿ ನಿಜಕ್ಕೂ ಒಂದು ಅದ್ಭುತ ಪಯಣವನ್ನೇ ಆರಂಭಿಸಲಿದೆ’ ಎಂದು ಬರೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಈ ಮೊದಲು ಶ್ರೀಜಾಗೆ ಸಿರೀಶ್ ಭಾರಧ್ವಜ್ ಜೊತೆ ಮದುವೆ ಆಗಿತ್ತು. ಕೇವಲ 19 ವರ್ಷದ ಶ್ರೀಜಾ ಮನೆಯವರನ್ನು ವಿರೋಧ ಕಟ್ಟಿಕೊಂಡು ಸಿರೀಶ್ ಜೊತೆ ಮದುವೆ ಆಗಿದ್ದರು. ಈ ಪ್ರೀತಿಯ ಮದುವೆ ತುಂಬಾ ದಿನ ಉಳಿಯಲಿಲ್ಲ. ಮತ್ತೆ ತವರು ಮನೆಗೆ ಬಂದ ಶ್ರೀಜಾ, ಗಂಡನು ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ 2011ರಲ್ಲಿ ಡಿವೋರ್ಸ್ ಪಡೆದುಕೊಂಡರು. ಅಲ್ಲಿಗೆ ಮೊದಲ ಮದುವೆ ಮುರಿದು ಬಿದ್ದಿತ್ತು.

ಕುಟುಂಬಸ್ಥರು ಸೇರಿ ಶ್ರೀಜಾಗೆ 2016ರಲ್ಲಿ ಉದ್ಯಮಿ ಕಲ್ಯಾಣ ದೇವ್ ಜೊತೆ ಮದುವೆ ಮಾಡಿದರು. ಅದು ಕುಟುಂಬವೇ ಸೇರಿ ಮಾಡಿದಂತಹ ಮದುವೆ ಆಗಿತ್ತು. ಆನಂತರ ಇಬ್ಬರಲ್ಲೂ ಬಿರುಕು ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿತ್ತು. ಅದಕ್ಕೆ ಪೂರಕ ಎನ್ನುವಂತೆ ಶ್ರೀಜಾ ತಮ್ಮ ಪತಿಯ ಹೆಸರನ್ನು ಸೋಷಿಯಲ್ ಮೀಡಿಯಾದಿಂದ ಕಿತ್ತು ಹಾಕಿದರು. ಅವರನ್ನು ಅನ್ ಫಾಲೋ ಮಾಡಿದರು. ಈ ಮಧ್ಯ ಕಲ್ಯಾಣ್ ದೇವ್ ಕೂಡ ತಮ್ಮ ಬದುಕು ಕಠಿಣ ಅನಿಸುತ್ತಿದೆ ಎಂದು ಬರೆದುಕೊಂಡಿದ್ದರು. ಇಬ್ಬರೂ ದೂರವಾಗಿದ್ದಾರಾ ಅಥವಾ ಡಿವೋರ್ಸ್ ಪಡೆದಿದ್ದಾರಾ ಎನ್ನುವ ಕುರಿತು ಮಾಹಿತಿ ಇಲ್ಲ.

ಇಷ್ಟರಲ್ಲಿ ಶ್ರೀಜಾ ಮತ್ತೆ ಪೋಸ್ಟ್ ಮಾಡಿ ತಮ್ಮ ಜೀವನಕ್ಕೆ ಮತ್ತೋರ್ವ ವ್ಯಕ್ತಿ ಎಂಟ್ರಿ ಪಡೆದಿರುವ ಹಾಗೂ ಅವನೊಂದಿಗೆ ಹೊಸ ಜೀವನ ನಡೆಸುವ ಕುರಿತು ಸುಳಿವು ನೀಡಿದ್ದಾರೆ. ಆದರೆ, ಈ ಬರಹ ತೆಲುಗು ಸಿನಿಮಾ ರಂಗದಲ್ಲಿ ಭಾರೀ ಸಂಚಲನವನ್ನಂತೂ ಮೂಡಿಸಿದೆ. ಶ್ರೀಜಾ ಹಾಕಿರುವ ಈ ಪೋಸ್ಟ್ ಹಿಂದಿನ ಅರ್ಥವನ್ನು ಕೆದುಕುವ ಪ್ರಯತ್ನವನ್ನು ಮಾಡಲಾಗುತ್ತಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist