ಮೂಡುಬಿದಿರೆ: ಕ್ಷುಲ್ಲಕ ಕಾರಣಕ್ಕೆ ಜಗಳ - ಪತ್ನಿಯ ಸಹೋದರನ ಕೊಲೆಯಲ್ಲಿ ಅಂತ್ಯ
Twitter
Facebook
LinkedIn
WhatsApp
ಮೂಡುಬಿದಿರೆ, ಮೇ 11 : ಕ್ಷುಲ್ಲಕ ಕಾರಣಕ್ಕೆ ನಡೆದ ಮಾತಿನ ಚಕಮಕಿಯು ವಿಕೋಪಕ್ಕೇರಿ ಬಾವನಿಂದ ಪತ್ನಿಯ ಸಹೋದರ ಕೊಲೆಯಲ್ಲಿ ಅಂತ್ಯವಾಗಿದೆ.
ಗಂಟಾಲ್ಕಟ್ಟೆ ನಿವಾಸಿ ಜಮಾಲ್ ಮೃತಪಟ್ಟವರು. ಆತನ ಬಾವ (ಅಕ್ಕನ ಗಂಡ) ಚಿಕ್ಕಮಗಳೂರು ಮೂಲದ ಸುಹೈಬ್ ಕೊಲೆ ಆರೋಪಿಯಾಗಿದ್ದಾನೆ.
ಇಬ್ಬರ ಮನೆಯೂ ಅಕ್ಕಪಕ್ಕದಲ್ಲಿದ್ದು ಮಕ್ಕಳ ವಿಷಯದಲ್ಲಿ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆಯಿತೆನ್ನಲಾಗಿದೆ. ಕೋಪದ ಭರದಲ್ಲಿ ಅಲ್ಲೇ ಇದ್ದ ಚಾಕುವಿನಲ್ಲಿ ಸುಹೈಬ್ ತನ್ನ ಬಾವ ಎಂದು ನೋಡದೆ ಜಮಾಲ್ ನ ಹೊಟ್ಟೆಗೆ ಇರಿದಿದ್ದು ತೀವ್ರವಾಗಿ ಗಾಯಗೊಂಡ ಜಮಾಲ್ ಕೊನೆಯುಸಿರೆಳೆದಿದ್ದಾರೆ. ಆರೋಪಿ ಸುಹೈಲ್ ನನ್ನು ಮೂಡುಬಿದಿರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ