ಬುಧವಾರ, ಫೆಬ್ರವರಿ 8, 2023
ಇಂದಿನಿಂದ ಕರ್ನಾಟಕ vs ಸೌರಾಷ್ಟ್ರ ಸೆಮೀಸ್ ಫೈಟ್-ಯುವತಿಗೆ ಮೆಸೇಜ್ ಮಾಡಿದಕ್ಕೆ ಸಹೋದರನಿಂದ ಯುವಕನ ಮೇಲೆ ಹಲ್ಲೆ-ಮದುವೆಗೂ ಮುಂಚೆ ಕಂಡೀಷನ್ಸ್ ಅಪ್ಲೈ- ಬೆಂಗಳೂರಿನ ವಧು, ವರರ ನಯಾ ಟ್ರೆಂಡ್-ಟರ್ಕಿ ಸಿರಿಯಾ ಭೂಕಂಪ: ಸಾವಿನ ಸಂಖ್ಯೆ 8 ಸಾವಿರ; ಗಾಯಾಳುಗಳ ಸಂಖ್ಯೆ 35 ಸಾವಿರ, ರಕ್ಷಣಾ ಕಾರ್ಯಕ್ಕೆ ಅಡಚಣೆ-ಮನೆ ಮುಂದೆ ಮಲಗಿದವರ ಮೇಲೆ ಹುಚ್ಚು ನಾಯಿ ದಾಳಿ – 25ಕ್ಕೂ ಅಧಿಕ ಜನ ಆಸ್ಪತ್ರೆ ದಾಖಲು-ಕಾರ್ಕಳ : ಮಹಿಳೆ ನೇಣು ಬಿಗಿದು ಆತ್ಮಹತ್ಯೆ-ಕಟ್ಟಡದ ಅವಶೇಷಗಳಡಿಯೇ ಮಗುವಿಗೆ ಜನ್ಮ ನೀಡಿ ಮಹಿಳೆ ಸಾವು-ಬೈಕ್‌ನಲ್ಲಿ ರಾಂಚಿ ಸ್ಟೇಡಿಯಂನಿಂದ ಬಿಂದಾಸ್‌ ಆಗಿ ಹೊರಟ ಎಂ ಎಸ್ ಧೋನಿ..! ವಿಡಿಯೋ ವೈರಲ್-ಹೊಸ ಮುಖದ ಬಗ್ಗೆ ರಾಹುಲ್ ಗಾಂಧಿ ಒಲವು. ಕೊಡಗಿನಲ್ಲಿ ಪೊನ್ನನ್ನ,ಡಾ. ಮಂತರ್ ಗೌಡ, ಬೆಳ್ತಂಗಡಿಯಲ್ಲಿ ರಕ್ಷಿತ್ ಶಿವರಾಂ ಬಹುತೇಕ ಫಿಕ್ಸ್.-ಡಿಕ್ಕಿಹೊಡೆದ ಗಡಿಬಿಡಿಗೆ ಬ್ರೇಕ್ ಬದಲು ಎಕ್ಸಲೇಟರ್ ತುಳಿದ ಮಹಿಳೆ; ಬೈಕ್ ಸವಾರ ಸ್ಥಳದಲ್ಲಿಯೇ ಸಾವು
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮುಸ್ಲಿಂ ವಿದ್ಯಾರ್ಥಿಯನ್ನು ಟೆರರಿಸ್ಟ್​​ಗೆ ಹೋಲಿಸಿದ್ದ ಪ್ರೊಫೆಸರ್​​ ಅಮಾನತು..

Twitter
Facebook
LinkedIn
WhatsApp
ಮುಸ್ಲಿಂ ವಿದ್ಯಾರ್ಥಿಯನ್ನು ಟೆರರಿಸ್ಟ್​​ಗೆ ಹೋಲಿಸಿದ್ದ ಪ್ರೊಫೆಸರ್​​ ಅಮಾನತು..

ಉಡುಪಿ: ವಿದ್ಯಾರ್ಥಿಯನ್ನು ತರಗತಿಯೊಳಗೆ ಟೆರರಿಸ್ಟ್ ಅಂತಾ ಪ್ರೊಫೆಸರ್ ನಿಂದಿಸಿದ ಘಟನೆ ಉಡುಪಿಯ ಮಣಿಪಾಲ ಮಾಹೆ ವಿಶ್ವವಿದ್ಯಾಲಯದ ಎಂಐಟಿ ಕಾಲೇಜಿನಲ್ಲಿ ನಡೆದಿದೆ. ನವೆಂಬರ್ 26ರಂದು ಎಂಐಟಿ ಕಾಲೇಜಿನಲ್ಲಿ ಘಟನೆ ನಡೆದಿದ್ದು, ವಿದ್ಯಾರ್ಥಿಗಳೊಂದಿಗೆ ಮಾತನಾಡುವಾಗ ಮುಸ್ಲಿಮರು ಟೆರರಿಸ್ಟ್ ಗಳು ಎಂಬ ಅರ್ಥದಲ್ಲಿ ಪ್ರೊಫೆಸರ್ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂಭಾಷಣೆ ಯ ವಿಡಿಯೋ ಟ್ವಿಟರ್ ನಲ್ಲಿ ವೈರಲ್ ಆಗಿದೆ. ಪ್ರೊಫೆಸರ್ ಮಾತಿಗೆ ತರಗತಿಯಲ್ಲೇ ವಿದ್ಯಾರ್ಥಿ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಮುಸ್ಲಿಂ ಸಮುದಾಯವನ್ನು ಟೆರರಿಸ್ಟ್ ಎಂದು ಕರೆಯಬೇಡಿ. ಅನಗತ್ಯ ತಮಾಷೆಯಾಗಿ ಈ ರೀತಿ ಮಾತನಾಡಬೇಡಿ. ಇದು ತಮಾಷೆಯಲ್ಲ ಎಂದು ವಿದ್ಯಾರ್ಥಿ ಆಕ್ಷೇಪಿಸಿದ್ದಾನೆ.

ಮುಸ್ಲಿಂ ವಿದ್ಯಾರ್ಥಿಯನ್ನು ಟೆರರಿಸ್ಟ್​​ಗೆ ಹೋಲಿಸಿದ್ದ ಪ್ರೊಫೆಸರ್​​ ಅಮಾನತು..

ವಿದ್ಯಾರ್ಥಿ ಆಕ್ಷೇಪಿಸುತ್ತಿದ್ದಂತೆ ಪ್ರೊಫೆಸರ್ ಕ್ಷಮೆ ಕೇಳಿದ್ದಾರೆ. ಆದರೂ ಪಟ್ಟು ಬಿಡದ ವಿದ್ಯಾರ್ಥಿ ನೀವು ಕ್ಷಮೆ ಕೇಳಿದ ತಕ್ಷಣ ಮಾಡಿರುವ ಆರೋಪ ಬದಲಾಗಲ್ಲ ಎಂದು ಆಕ್ಷೇಪಿಸಿದ್ದಾನೆ. ಈ ಸಂಭಾಷಣೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಉಪನ್ಯಾಸಕನ ವಿರುದ್ಧ ಕ್ರಮ ಮಾಹೆ ವಿವಿ ಶಿಸ್ತು ಕ್ರಮ ಕೈಗೊಳ್ಳುವ ಭರವಸೆ ನೀಡಿದೆ.

ವಿದ್ಯಾರ್ಥಿಗೆ ಕೌನ್ಸಿಲಿಂಗ್ ಮೂಲಕ ಸಾಂತ್ವನ ಹೇಳಿದ್ದಾರೆ. ಈ ವಿಡಿಯೋವನ್ನು ತರಗತಿಯ ಒಳಗಿನ ವಿದ್ಯಾರ್ಥಿಗಳೇ ಚಿತ್ರೀಕರಣ ಮಾಡಿರುವ ಸಾಧ್ಯತೆಯಿದೆ. ಈ ಘಟನೆಯ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ ಮಾಹೆ‌ ವಿಶ್ವವಿದ್ಯಾಲಯ ,ಘಟನೆಯ ಬಗ್ಗೆ ಮಾಹೆ ವಿವಿ ಆಂತರಿಕ ತನಿಖೆ ನಡೆಸುತ್ತದೆ. ಪ್ರೊಫೆಸರ್ ಅವರನ್ನು ಅಮಾನತ್ತಿನಲ್ಲಿ ಇಡಲಾಗಿದೆ. ಈ ರೀತಿಯ ಬೆಳವಣಿಗೆಯನ್ನು ನಮ್ಮ ವಿವಿ ಸಹಿಸುವುದಿಲ್ಲ. ಧರ್ಮ, ಪಂಥ, ಮತ, ಲಿಂಗಭೇದಕ್ಕೆ ನಮ್ಮ ವಿವಿಯಲ್ಲಿ ಆಸ್ಪದ ಇಲ್ಲ. ಮಾಹೆ ವಿವಿ ಸಂವಿಧಾನವನ್ನು ಎತ್ತಿ ಹಿಡಿಯುತ್ತದೆ ಎಂದು ಮಾಹೆ ವಿವಿಯ ಎಂ ಐ ಟಿ ವಿಭಾಗ ಸ್ಪಷ್ಟನೆ ನೀಡಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ