- ರಾಜ್ಯ
- 9:06 ಫೂರ್ವಾಹ್ನ
- ಜನವರಿ 6, 2023
ಮುತ್ಯಾಲಮಡುವು ಪ್ರವಾಸಿತಾಣದಲ್ಲಿ ಈಜಲು ಹೋಗಿ ವ್ಯಕ್ತಿ ನೀರುಪಾಲು
Twitter
Facebook
LinkedIn
WhatsApp

ಆನೇಕಲ್: ಈಜಲು ಹೋಗಿ ವ್ಯಕ್ತಿಯೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹೆಸರಾಂತ ಪ್ರವಾಸಿ ತಾಣ ಮುತ್ಯಾಲಮಡುವಿ (Muthyala Maduvu) ನಲ್ಲಿ ನಡೆದಿದೆ.
ಜಿಗಣಿ ನಿವಾಸಿ ಜೋತಿಶ್ ಕುಮಾರ್ ಮೃತ ವ್ಯಕ್ತಿಯಾಗಿದ್ದು, ತನ್ನ ಎರಡು ವರ್ಷದ ಮಗನ ಜೊತೆಯಲ್ಲಿ ಮಧ್ಯಾಹ್ನ ಮುತ್ಯಾಲಮಡುವಿಗೆ ದ್ವಿಚಕ್ರ ವಾಹನದಲ್ಲಿ ಬಂದಿದ್ದರು. ಮುತ್ಯಾಲಮಡು ಜಲಪಾತದ ಬಳಿಗೆ ತೆರಳಿ ಅಲ್ಲಿಯೇ ಮದ್ಯವನ್ನ ಸೇವಿಸಿ ಬಳಿಕ ಈಜಲು ಮುಂದಾಗಿದ್ದರು.
ಈ ವೇಳೆ ನೀರಿನಲ್ಲಿ ಮುಳುಗಿದ್ದ ಜ್ಯೋತಿಶ್ ಕುಮಾರ್ ಅಲ್ಲಿದ್ದ ಇತರೆ ಪ್ರವಾಸಿಗಳು ನೀರಿನಿಂದ ಹೊರತೆಗೆದಿದ್ದಾರೆ. ಅಷ್ಟರಲ್ಲಿ ಆಗಲೇ ಜ್ಯೋತಿಶ್ ಕುಮಾರ್ ಪ್ರಾಣಪಕ್ಷಿ ಹಾರಿಹೋಗಿದ್ದು, ಆನೇಕಲ್ ಪೋಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೋಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.