ಭಾನುವಾರ, ಮಾರ್ಚ್ 26, 2023
ಇಂದು ಮಹಿಳಾ ಪ್ರೀಮಿಯರ್ ಲೀಗ್ ಫೈನಲ್; ಮುಂಬೈ vs ಡೆಲ್ಲಿ ಫೈನಲ್ ಫೈಟ್-ಬಂಟ್ವಾಳ: ಸರಕಾರಿ ಬಸ್ಸಿನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ- ಕಂಡಕ್ಟರ್‌ ಅರೆಸ್ಟ್-ರಾಹುಲ್ ಗಾಂಧಿಯನ್ನು "ಹುತಾತ್ಮನ ಮಗ" ಎಂದು ಕರೆದ ಪ್ರಿಯಾಂಕಾ ಗಾಂಧಿ ವಾದ್ರಾ-ಉತ್ತರಾಖಂಡ್:‌ ಸಿಡಿಲು ಬಡಿದು 350 ಕ್ಕೂ ಹೆಚ್ಚು ಕುರಿ, ಮೇಕೆಗಳು ಮೃತ್ಯು!-Redmi Note 12 Turbo: ಮೊಬೈಲ್ ಪ್ರಿಯರ ನಿದ್ದೆ ಕದ್ದಿರುವ "ರೆಡ್ಮಿ ನೋಟ್ 12 ಟರ್ಬೋ" ಮಾರ್ಚ್ 28 ರಂದು ಬಿಡುಗಡೆ-ಇಸ್ರೋ ಮತ್ತೊಂದು ಮೈಲಿಗಲ್ಲು; 36 ಉಪಗ್ರಹಗಳ ಯಶಸ್ವಿ ಉಡಾವಣೆ-ಭವಿಷ್ಯ ಹೇಳುತ್ತಿದ್ದ ಸ್ನೇಹಿತನಿಗೆ ಕಲ್ಲಿನಿಂದ ಹೊಡೆದು ಹತ್ಯೆ-ಟೀಂ ಇಂಡಿಯಾದಲ್ಲಿ ಮತ್ತೆ `ಸೂರ್ಯʼ ಉದಯಿಸುತ್ತೆ – ಮಿಸ್ಟರ್‌ 360ಗೆ ಯುವರಾಜ್‌ ಸಿಂಗ್‌ ಬೆಂಬಲ-ಪಂತ್ ಬಗ್ಗೆ ಪ್ರಶ್ನಿಸಿದಕ್ಕೆ ಗರಂ ಆದ ನಟಿ ಊರ್ವಶಿ; ವಿಡಿಯೋ ವೈರಲ್-ಕನ್ನಡದಲ್ಲೇ ಮೆಡಿಕಲ್, ಇಂಜಿನಿಯರಿಂಗ್ ಶಿಕ್ಷಣ ಸಿಗಲಿದೆ: ಮೋದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮಾನಸಿಕ ಖಿನ್ನತೆ – 7ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

Twitter
Facebook
LinkedIn
WhatsApp
ಮಾನಸಿಕ ಖಿನ್ನತೆ – 7ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

ಮಡಿಕೇರಿ: ಖಿನ್ನತೆಯಿಂದ (Mental Depression) ಬಳಲುತ್ತಿದ್ದ 7ನೇ ತರಗತಿಯ ವಿದ್ಯಾರ್ಥಿನಿ ತಮ್ಮ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ (Suicide) ಶರಣಾಗಿರುವ ಘಟನೆ ಕೊಡಗು (Kodagu) ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶಿವರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಶಿವರಹಳ್ಳಿ ಗ್ರಾಮದ ಜಿತೇಂದ್ರ-ಅಕ್ಷತಾ ದಂಪತಿಯ ಪುತ್ರಿ ವೈಷ್ಣವಿ (13) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ.

ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ (Shanivarasanthe Police Station) ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ.

ಒಂದು ವಾರದಿಂದ ಖಿನ್ನತೆಗೆ ಒಳಗಾಗಿದ್ದ ವಿದ್ಯಾರ್ಥಿನಿ: ಹಲವು ದಿನಗಳಿಂದ ಖಿನ್ನತೆಗೆ ಒಳಗಾಗಿದ್ದ ವೈಷ್ಣವಿ (13) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಆಗಿದ್ದಾಳೆ. ಈ ಘಟನೆಯು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶಿವರಳ್ಳಿ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ. ಈಕೆ ಜಿತೇಂದ್ರ ಅಕ್ಷತ ದಂಪತಿಯ ಪುತ್ರಿ ಆಗಿದ್ದಳು. ಸೊಮವಾರಪೇಟೆಯ ಖಾಸಗಿ ಶಾಲೆಯಲ್ಲಿ ಮೃತ ವಿದ್ಯಾರ್ಥಿನಿ 7 ತರಗತಿ ಓದುತ್ತಿದ್ದಳು. ಆದರೆ, ಪರೀಕ್ಷೆ ಆರಂಭವಾದ ಒಂದು ವಾರದಿಂದಲೂ ವೈಷ್ಣವಿ ತೀವರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು. ಈ ಬಗ್ಗೆ ಮನೆಯವರು ಕೇಳಿದ್ದರೂ ಯಾವುದನ್ನೂ ಹೇಳಿಕೊಂಡಿರಲಿಲ್ಲ ಎಂದು ತಿಳಿದುಬಂದಿದೆ.

ಓದಿಕೊಳ್ಳಲು ಬಿಟ್ಟರೆ ಆತ್ಮಹತ್ಯೆ ಮಾಡಿಕೊಂಡ ಮಗಳು: ಇಂದು ಭಾನುವಾರ ರಜಾ ದಿನವಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಒಬ್ಬಳನ್ನೇ ಓದಿಕೊಳ್ಳುವಂತೆ ಬಿಟ್ಟು ಪಾಲಕರು ಹೊರಗೆ ಹೋಗಿದ್ದಾರೆ. ಆದ್ದರಿಂದ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಈಕೆ ಏಕಾಏಕಿ ಆತ್ಮಹತ್ಯೆ ಮಾಡಿಕೊಳ್ಳುವ ದೃಢ ನಿರ್ಧಾರಕ್ಕೆ ಬಂದಿದ್ದಾಳೆ. ಅದರಂತೆ ತಮ್ಮ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ. ಮಗಳ ಸಾವನ್ನು ನೋಡಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ