ಮದುವೆ ಮುಗಿಸಿ, ಸೀರೆ ಒಡವೆಗಳ ಮೇಲೆಯೇ ಬಿಳಿ ಕೋಟ್ ಧರಿಸಿ, ಲ್ಯಾಬ್ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿ!
Twitter
Facebook
LinkedIn
WhatsApp
ವಿದ್ಯಾರ್ಥಿನಿಯೊಬ್ಬಳು ಮದುವೆ ದಿರಿಸಿನ ಮೇಲೆ ಬಿಳಿ ಕೋಟು, ಸ್ಟೆತಸ್ಕೋಪ್ ಧರಿಸಿ ಪರೀಕ್ಷೆ ಬರೆದ ವಿಡಿಯೋವೊಂದು ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೇರಳದ ಶ್ರೀ ಲಕ್ಷ್ಮೀ ಅನಿಲ್ ಎನ್ನುವ ಯುವತಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದು, ಆಕೆಯ ಮದುವೆ ದಿನವೇ ಪರೀಕ್ಷೆಯೂ ಫಿಕ್ಸ್ ಆಗಿತ್ತು. ಎರಡನ್ನೂ ಬಿಡಲಾಗದೇ ಆಕೆ, ಮದುವೆ ಮುಗಿಸಿ, ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಹೋಗಿದ್ದಾಳೆ. ಸೀರೆ, ಒಡವೆಗಳ ಮೇಲೆಯೇ ಬಿಳಿಕೋಟ್ ಧರಿಸಿ, ಲ್ಯಾಬ್ ಪರೀಕ್ಷೆಗೆ ಹಾಜರಾದ ಆಕೆಯನ್ನು ಸಹಪಾಠಿಗಳು ಪ್ರೋತ್ಸಾಹಿಸಿದ್ದಾರೆ.
ಮದುವೆ ಹಾಗೂ ಶಿಕ್ಷಣ ಜೀವನದ ಮಹತ್ತರ ಘಟ್ಟಗಳಾಗಿದ್ದು, ಎರಡನ್ನೂ ಯಶಸ್ವಿಯಾಗಿ, ಜಾಣ್ಮೆಯಿಂದ ನಿಭಾಯಿಸುವ ಆಕೆಯ ಪ್ರಯತ್ನಕ್ಕೆ ನೆಟ್ಟಿಗರು ಶಹಬ್ಟಾಸ್ ಎಂದಿದ್ದಾರೆ.