ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಮಂಡ್ಯ: ಪೋಷಕರು ತಮ್ಮ ಅವಳಿ ಹೆಣ್ಣು ಮಕ್ಕಳಿಗೆ ಮದುವೆ ನಿಶ್ವಯ ಮಾಡಿದ್ದಾರೆ. ಮದುವೆಯಾಗಿ ಬೇರೆ ಬೇರೆ ಮನೆಗೆ ಹೋಗಬೇಕು ಅನ್ನೋ ಕಾರಣಕ್ಕೆ ಮನನೊಂದು ಸಹೋದರಿಯರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದೆ.
ಶ್ರೀರಂಗಪಟ್ಟಣದ ತಾಲೂಕಿನ ಹುಣಸನಹಳ್ಳಿ ಗ್ರಾಮದ ಸುರೇಶ್ ಮತ್ತು ಯಶೋಧ ದಂಪತಿ ಪುತ್ರಿಯರಾದ ದೀಪಿಕಾ (19 ವರ್ಷ) ಮತ್ತು ದಿವ್ಯ(19 ವರ್ಷ) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ದಿವ್ಯ ಹಾಗೂ ದೀಪಿಕಾ ಸಹೋದರಿಯರು ಬಾಲ್ಯದಿಂದಲೂ ಬಹಳ ಅನ್ಯೋನ್ಯತೆಯಿಂದ ಇದ್ದು, ಇದೀಗ ಇಬ್ಬರು ಪುತ್ರಿಯರನ್ನು ಬೇರೆ ಬೇರೆ ಮನೆಗೆ ಮದುವೆ ಮಾಡಿಕೊಡಲು ಪೋಷಕರು ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದರು ಎನ್ನಲಾಗಿದೆ.
ಬೇರೆ ಬೇರೆ ಮನೆಗೆ ಮದುವೆಯಾದರೆ ತಮ್ಮ ಬಾಂಧವ್ಯ ಕೊನೆಯಾಗುತ್ತದೆ ಎಂದು ನಿರ್ಧರಿಸಿ ಸಂಜೆ ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
108MP ಕ್ಯಾಮೆರಾದ ಗ್ಯಾಲಕ್ಸಿ F54 5G ಅನಾವರಣ ಮಾಡಿದ ಸ್ಯಾಮ್ಸಂಗ್