ಮಂಗಳವಾರ, ಮೇ 30, 2023
ಹಾವನ್ನು ಸೆರೆ ಹಿಡಿಯಲು ಹೋದಾಗ ನಾಗರ ಹಾವು ಕಚ್ಚಿ ಸ್ನೇಕ್ ನರೇಶ್ ಸಾವು!-ದ.ಕ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ - ಸುನಿಲ್ ಕುಮಾರ್-ದ.ಕ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ - ಸುನಿಲ್ ಕುಮಾರ್-ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆ ; ಪದಕಗಳನ್ನು ಗಂಗಾ ನದಿಗೆ ಎಸೆಯಲು ಕುಸ್ತಿಪಟುಗಳ ನಿರ್ಧಾರ-ಕ್ರೋಮಿಂಗ್ ಟ್ರೆಂಡ್ ಗೆ ಬಲಿಯಾದ 13 ವರ್ಷದ ಬಾಲಕಿ! ಬ್ಲೂವೇಲ್ ರೀತಿಯ ಈ ಗೇಮಿಂಗ್ ಯಾವುದು?-ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಕಾಲ ಬೆರಳಿಗೆ ಹಾವು ಕಡಿದು ವಿದ್ಯಾರ್ಥಿನಿ ಸಾವು-ಮಹಿಳೆಯರಿಗೂ ಕಂಬಳದಲ್ಲಿ ಅವಕಾಶ, ತರಬೇತಿಗೆ ಸಿದ್ಧವಾಗುತ್ತಿದೆ ವೇದಿಕೆ-ದುಬಾರಿ ಕಾರು ಬಿಟ್ಟು ಆಟೋದಲ್ಲಿ ಪ್ರಯಾಣಿಸಿದ ನಟಿ ಇರಾ ಖಾನ್‌-ಉಡುಪಿ : ಗೇರುಬೀಜ ಸಾಗಾಟದ ಲಾರಿ ಪಲ್ಟಿ ಅಪಾಯದಿಂದ ಪಾರಾದ ಚಾಲಕ-ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ: ರಾಮಲಿಂಗಾರೆಡ್ಡಿ ಘೋಷಣೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮಗನ ಕತ್ತು ಕೊಯ್ದು ಕೊಂದ ತಂದೆ; ಮೂರು ವರ್ಷಗಳ ಹಿಂದೆ ಹೆಂಡತಿಯನ್ನು ನೇಣು ಹಾಕಿ ಕೊಂದಿದ್ದ!

Twitter
Facebook
LinkedIn
WhatsApp
All about coconut tree 13

ನಂಗಲಿ (ಮುಳಬಾಗಿಲು) : ತಂದೇಯೇ ಮಗನ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದು ಕೊಲೆ ಮಾಡಿದ ಅಮಾನವೀಯ ಘಟನೆ ಸೋಮವಾರ ಮಧ್ಯರಾತ್ರಿ ಮುಳಬಾಗಿಲು ತಾಲೂಕಿನ ನಂಗಲಿಯಲ್ಲಿ ನಡೆದಿದೆ.

ಮೂಲತಃ ಪಟ್ರಹಳ್ಳಿ ಗ್ರಾಮದ ಹಾಗೂ ನಂಗಲಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಭುವನ್ ಎಂಬ ಎಂಟು ವರ್ಷದ ಬಾಲಕ ಮೃತ ದುರ್ದೈವಿ. ಮೃತ ಬಾಲಕನನ್ನು ತಂದೆ ಬಾಲಸುಬ್ರಹ್ಮಣ್ಯಂ ಮನೆಯಲ್ಲಿದ್ದ ತರಕಾರಿಯನ್ನು ಕೊಯ್ಯುವ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.


ಆರೋಪಿ ಬಾಲಸುಬ್ರಹ್ಮಣ್ಯಂ ಬೆಂಗಳೂರಿನಲ್ಲಿ ಟೈಲ್ಸ್ ಹಾಕುವ ಕೆಲಸ ಮಾಡುತ್ತಿದ್ದರಿಂದ ಮೃತ ಬಾಲಕ ತನ್ನ ಅಜ್ಜಿಯ ಜೊತೆ ನಂಗಲಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಾ, ನಂಗಲಿಯ ಖಾಸಗಿ ಶಾಲೆಯಲ್ಲಿ ಒಂದನೆಯ ತರಗತಿಯಲ್ಲಿ ಓದುತ್ತಿದ್ದ. ಆರೋಪಿ ವಾರ ಅಥವಾ ಹದಿನೈದು ದಿನಗಳಿಗೊಮ್ಮೆ ನಂಗಲಿಗೆ ಬಂದು ಮಗ ಮತ್ತು ತಾಯಿಯನ್ನು ನೋಡಿಕೊಂಡು ಹೋಗುತ್ತಿದ್ದ.

ಮಾನಸಿಕ ಅಸ್ವಸ್ಥ ತಂದೆ

ಸೋಮವಾರ ನಂಗಲಿಗೆ ಬಂದು ಶಾಲೆಯಲ್ಲಿದ್ದ ಮಗ ಭುವನನ್ನು ಬೆಂಗಳೂರಿಗೆ ಹೋಗಬೇಕು ಎಂದು ಕರೆದುಕೊಂಡು ಹೋಗಿದ್ದನು. ಕೋಲಾರದ ಗದ್ದೆ ಕಣ್ಣೂರು ಬಳಿಯಲ್ಲಿ ಶಾಲೆಯ ಸಮವಸ್ತ್ರದ ಸಮೇತ ಬಿಕ್ಷೆ ಬೇಡಿಸುತ್ತಿದ್ದ ದೃಶ್ಯವನ್ನು ಸ್ಥಳೀಯರು ನೋಡಿ ಸಂಶಯದಿಂದ 112 ಪೊಲೀಸರಿಗೆ ಮಾಹಿತಿ ನೀಡಿದರಿಂದ ಕೋಲಾರ ಗ್ರಾಮಾಂತರ ಪೊಲೀಸರು ಅವರನ್ನು ಠಾಣೆಗೆ ಕರೆ ತಂದಿದ್ದರು. ಬಳಿಕ ಬಾಲಸುಬ್ರಹ್ಮಣ್ಯಂ ತಂದೆ-ತಾಯಿ ಠಾಣೆಗೆ ಬಂದು ಮಗ ಮಾನಸಿಕ ಅಸ್ವತ್ಥನೆಂದು ತಿಳಿಸಿದ ನಂತರ ಅವರನ್ನು ನಂಗಲಿ ವಿಳಾಸಕ್ಕೆ ಕಳುಹಿಸಲಾಗಿತ್ತು.ಮನೆಗೆ ಬಂದ ತಂದೆ ರಾತ್ರಿ ಮಗನನ್ನು ಹನ್ನೊಂದು ಗಂಟೆ ಸಮಯದಲ್ಲಿ ಚಾಕುವಿನಿಂದ ಕತ್ತು‌ಕೊಯ್ದು ಕೊಲೆ ಮಾಡಿದ್ದಾನೆ.

 
ಹೆಂಡತಿಯನ್ನು ನೇಣು ಹಾಕಿ ಕೊಂದಿದ್ದ

ಆರೋಪಿ ಬಾಲಸುಬ್ರಹ್ಮಣ್ಯಂ ಅವರು ಅಸ್ವಸ್ಥನಾಗಿದ್ದು ಮತಿ ಭ್ರಮಣೆಯಾಗಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದ್ದು. ಈಚೆಗೆ ಮೂರು ವರ್ಷಗಳ ಹಿಂದೆ ತನ್ನ ಪತ್ನಿಯನ್ನೂ ಸಹ ನೇಣು ಹಾಕಿ ಕೊಲೆ ಮಾಡಿದ್ದ. ಅಂದಿನಿಂದಲೂ ಆಗಾಗ ಮಾನಸಿಕವಾಗಿ ಹುಚ್ಚನಂತೆ ವರ್ತಿಸುತ್ತಿದ್ದ ಮತ್ತು ಈಚೆಗೆ ಮೂರು ತಿಂಗಳ ಕಾಲ ಮಾನಸಿಕ ಪರಿವರ್ತನೆ ಆಸ್ಪತ್ರೆ ಹಾಗೂ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿದ್ದನು ಎನ್ನಲಾಗಿದೆ. ಆರೋಪಿಯನ್ನು ಸ್ಥಳೀಯರು ಕೈಕಾಲು ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದ್ದು, ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ