ಮಗನಿಗೆ ಮನ ಬಂದಂತೆ ಥಳಿಸಿದ ತಾಯಿ; ಕ್ರೂರ ವರ್ತನೆ ಕಂಡು ಪೊಲೀಸರಿಗೆ ದೂರು ನೀಡಿದ ಪತಿ.!

ಹರಿಯಾಣ: ಮಹಿಳೆಯೊಬ್ಬರು ತನ್ನ 11 ವರ್ಷದ ಮಗನನ್ನು ಅಮಾನುಷವಾಗಿ ಥಳಿಸಿರುವ ಘಟನೆ ಫರಿದಾಬಾದ್‌ನಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೆಲಸದಿಂದ ಸಂಜೆ ಮನೆಗೆ ಬಂದ ಪತಿ ಸಿಸಿಟಿವಿ ದೃಶ್ಯ ಕಂಡು ಬೆಚ್ಚಿ ಬಿದ್ದಿದ್ದಾನೆ. ಇಂತಹ ಅಮಾನುಷ ಕೃತ್ಯಗೈದ ಪತ್ನಿಯ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಮಹಿಳೆ ತನ್ನ ಮಗನಿಗೆ ಥಳಿಸುತ್ತಿರುವುದನ್ನು ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆ ತನ್ನ ಮಗುವಿಗೆ ಥಳಿಸುವ ಹಲವು ದೃಶ್ಯಗಳನ್ನು ತೋರಿಸಲಾಗಿದೆ. ಅವಳು ಹುಡುಗನನ್ನು ಒದೆಯುವುದು ಕೂಡ ಕಂಡುಬಂದಿದೆ. ಹಲ್ಲೆಯ ಸಂದರ್ಭದಲ್ಲಿ ಮಗುವಿನ ತಂದೆ ಮಧ್ಯಪ್ರವೇಶಿಸಿ ಮಗುವನ್ನು ತನ್ನ ಕ್ರೂರ ತಾಯಿಯಿಂದ ರಕ್ಷಿಸಿದ ದೃಶ್ಯಾವಳಿಗಳು ಸಹ ಸೆರೆಯಾಗಿದೆ.
ಮಕ್ಕಳ ಕಲ್ಯಾಣ ಸಮಿತಿಯ (ಸಿಡಬ್ಲ್ಯುಸಿ) ಆದೇಶದ ಮೇರೆಗೆ ಸೂರಜ್‌ಕುಂಡ್ ಪೊಲೀಸ್ ಠಾಣೆಯು ತಾಯಿಯ ವಿರುದ್ಧ ಕ್ರೌರ್ಯ ಪ್ರಕರಣವನ್ನು ದಾಖಲಿಸಿದೆ. ಪ್ರಕರಣ ದಾಖಲಾದ ಬಳಿಕ ಮಹಿಳೆ ತನ್ನ ಮಗನನ್ನು ಕರೆದುಕೊಂಡು ತಾಯಿ ಮನೆಗೆ ಹೋಗಿದ್ದಾಳೆ. ಮಗುವಿನ ಹೇಳಿಕೆಯನ್ನು ಇನ್ನೂ ತೆಗೆದುಕೊಂಡಿಲ್ಲ. ಮಗು ತನ್ನ ಹೇಳಿಕೆಯನ್ನು ನೀಡಿದ ನಂತರ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಸೂರಜ್‌ಕುಂಡ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಶಂಶೇರ್ ಸಿಂಗ್ ತಿಳಿಸಿದ್ದಾರೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಬಾಲಕನ ತಂದೆ, ಪತ್ನಿಯ ಕ್ರೂರ ವರ್ತನೆ ವಿರುದ್ಧ ಪೊಲೀಸರಿಗೆ ದೂರು ಕೂಡ ನೀಡಿದ್ದಾರೆ.
#Faridabad | Mother Caught On CCTV Brutally Beating Her 11-Year-Old Son
— Voice For Men India (@voiceformenind) May 27, 2024
▪️The father of the child complained to police about his wife's violence. He added that his wife would threaten to consume poison every time he would try to stop her from beating the child
🔹️Child's… pic.twitter.com/LfkMRLdJto