- ಅಂತಾರಾಷ್ಟ್ರೀಯ, ಕರಾವಳಿ
- 3:08 ಅಪರಾಹ್ನ
- ಮಾರ್ಚ್ 29, 2023
ಮಂಗಳೂರು: ಸೌದಿಯಲ್ಲಿ ಅಪಘಾತ ಮಲ್ಲೂರಿನ ಯುವಕ ಮೃತ್ಯು
Twitter
Facebook
LinkedIn
WhatsApp

ಮಂಗಳೂರು, ಮಾ 28 : ಸೌದಿ ಅರೇಬಿಯಾದ ಜುಬೈಲ್‌ನಲ್ಲಿ ಭಾನುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕರಾವಳಿಯ ಯುವಕ ಮೃತಪಟ್ಟಿದ್ದಾರೆ.
ಮೃತರನ್ನು ಮಂಗಳೂರು ತಾಲೂಕು ಮಲ್ಲೂರಿನ ನಿವಾಸಿ, ಪಲ್ಲಿಬೆಟ್ಟು ಸುಲೈಮಾನ್(35) ಎಂದು ಗುರುತಿಸಲಾಗಿದೆ.
ಇವರು ರಸ್ತೆ ದಾಟುತ್ತಿದ್ದ ವೇಳೆ ಕಾರು ಢಿಕ್ಕಿಯಾಗಿದ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸುಲೈಮಾನ್ ಜುಬೈಲ್ ನ ಲುಮಿನಾಸ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಇವರು ಏ .20ರಂದು ಊರಿಗೆ ಬರುವವರಿದ್ದರು.