ಮಂಗಳವಾರ, ಅಕ್ಟೋಬರ್ 3, 2023
ಹ್ಯುಂಡೈನ ಎಲ್ಲ ಮಾದರಿಯ ಕಾರುಗಳಲ್ಲಿ ಇನ್ನು ಮುಂದೆ ಆರು ಏರ್​ಬ್ಯಾಗ್​ಗಳು ನೀಡುವುದಾಗಿ ಘೋಷಿಸಿದ ಹ್ಯುಂಡ್ಯೆ!-ಉಳ್ಳಾಲ: ಅಬ್ಬಕ್ಕ ಪ್ರತಿಮೆ ಎದುರು ಪುಂಡಾಟ; ಯುವಕರಿಗೆ ನೋಟಿಸ್-ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಚಿನ್ನ ಸೀಝ್ ; ಚಿನ್ನವನ್ನು ಎಲ್ಲೆಲ್ಲಿ ಬಚ್ಚಿಟ್ಟು ತಂದಿದ್ದಾರೆ ಗೊತ್ತೆ..!-ನನ್ನ ಮೇಲೆ ಹೈಕಮಾಂಡ್ ಗೆ ಪ್ರೀತಿ ಜಾಸ್ತಿ; ಅದಕ್ಕೆ ನಾನೇನು ಮಾತನಾಡಿದರೆ ನೋಟಿಸ್ ಕೊಡುತ್ತಾರೆ !-ಕೇರಳ : ಚರ್ಚ್ ಪಾದ್ರಿ ಬಿಜೆಪಿ ಸೇರ್ಪಡೆ ; ಕರ್ತವ್ಯದಿಂದ ಅಮಾನತು!-ಮಹಾರಾಷ್ಟ್ರ : ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ದಿನ 12 ನವಜಾತ ಶಿಶುಗಳು ಸೇರಿ 24 ಮಂದಿ ಸಾವು!-ಒಂದೇ ಧರ್ಮವಿದೆ; ಅದು ಸನಾತನ ಧರ್ಮ - ಯೋಗಿ ಆದಿತ್ಯನಾಥ್-ಕಾಪು : ಆಲದ ಮರ ಉರುಳಿ ಬಿದ್ದು ಓರ್ವ ಸಾವು ; ಇಬ್ಬರಿಗೆ ಗಾಯ!-Gold Rate : ಇಳಿಕೆ ಕಂಡ ಚಿನ್ನದ ಬೆಲೆ ; 10 ಗ್ರಾಂ ಚಿನ್ನ - ಬೆಳ್ಳಿಯ ದರ ಇವತ್ತೆಷ್ಟಿದೆ!-ರಸ್ತೆ ಬದಿ ಮಲಗಿದ್ದ 10 ಮಂದಿ ಕಾರ್ಮಿಕರ ಮೇಲೆ ಹರಿದ ಟ್ರಕ್ ; 5 ಮಂದಿ ಮೃತ್ಯು - ಐವರು ಗಂಭೀರ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮಂಗಳೂರು: ಶಾಲೆಗೆ ಹೊರಡಲು ಸಿದ್ದನಾಗುತ್ತಿದ್ದ ಬಾಲಕನಿಗೆ ಹೃದಯಾಘಾತ

Twitter
Facebook
LinkedIn
WhatsApp
balaka 620x425 1

ಸುರತ್ಕಲ್‌: ಶಾಲೆಗೆ ಹೊರಡಲು ಸಿದ್ದನಾಗುತ್ತಿದ್ದ ಬಾಲಕನೊಬ್ಬ ಹೃದಯಾಘಾತಕ್ಕೆ ತುತ್ತಾಗಿ ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

ಕೃಷ್ಣಾಪುರ 7ನೇ ಬ್ಲಾಕ್‌ ನಿವಾಸಿ ಮೊಹಮ್ಮದ್‌ ಹಸೀಮ್‌ (17) ಮೃತ ಬಾಲಕ. ಬೆಳಗ್ಗೆ ಸಿದ್ದನಾಗಿದ್ದ ಹಸೀಮ್‌ಗೆ ಏಕಾಏಕಿ ತಲೆ ಸುತ್ತು ಬಂದು ಬಿದ್ದಿದ್ದು, ಮನೆಮಂದಿ ತತ್‌ಕ್ಷಣ ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಲ್ಲಿ ಮೃತಪಟ್ಟಿರುವ ಬಗ್ಗೆ ವೈದ್ಯರು ತಿಳಿಸಿದ್ದು, ಬದುಕುಳಿಯುವ ಆಸೆಯಿಂದ ಪೋಷಕರು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಬ್ದುಲ್‌ ರೆಹಮಾನ್‌ ದಂಪತಿ ಮೂವರು ಪುತ್ರರಲ್ಲಿ ಮೃತ ಹಸೀಮ್‌ ಎರಡನೆಯವನಾಗಿದ್ದಾನೆ.

ಮರಣೋತ್ತರ ಪರೀಕ್ಷೆ-ಗೊಂದಲ
ಖಾಸಗಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲು ಮುಂದಾದಾಗ ಪೋಷಕರು ಮೃತದೇಹವನ್ನು ಕೊಂಡೊಯ್ಯುವ ಬಗ್ಗೆ ವೈದ್ಯರಲ್ಲಿ ತಿಳಿಸಿದ್ದರು. ಆದರೆ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸದೆ ಬಿಟ್ಟುಕೊಡಲು ಒಪ್ಪಲಿಲ್ಲ. ಈ ಬಗ್ಗೆ ಗೊಂದಲ ಉಂಟಾದ ಕಾರಣ ಮಾಜಿ ಶಾಸಕ ಮೊದಿನ್‌ ಬಾವಾ ಅವರು ಸ್ಥಳಕ್ಕೆ ಆಗಮಿಸಿ ಬಾಲಕನ ಅಂತ್ಯಕ್ರಿಯೆಗೆ ಬೇಕಾದ ವ್ಯವಸ್ಥೆ ಮಾಡಿಕೊಟ್ಟರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ