ಶನಿವಾರ, ಜುಲೈ 13, 2024
13 ರಲ್ಲಿ 10 ಸ್ಥಾನಗಳೊಂದಿಗೆ ಭರ್ಜರಿ ಗೆಲುವು ಸಾಧಿಸಿದ INDIA ಮೈತ್ರಿಕೂಟ; ಬಿಜೆಪಿಗೆ 2 ಸ್ಥಾನ-ಪಿಚ್‌ನ ಮಣ್ಣು ತಿಂದ ರಹಸ್ಯ; ರೋಹಿತ್ ಶರ್ಮ ಹೇಳಿದ್ದೇನು?-ವಾಲ್ಮೀಕಿ ನಿಗಮ, ಮುಡಾ ಹಗರಣ ನ್ಯಾಯಯುತ ತನಿಖೆಗಾಗಿ ಸಿಬಿಐಗೆ ವಹಿಸಬೇಕು: ಸಂಸದ ಯದುವೀರ್ ಒಡೆಯರ್-ಡಿಸಿಸಿ ಬ್ಯಾಂಕ್‌ಗೆ ನೂತನ ಅಧ್ಯಕ್ಷರಾಗಿ ಮಂಜುನಾಥ ಗೌಡ; ಉಪಾಧ್ಯಕ್ಷರಾಗಿ ಮರಿಯಪ್ಪ ಅವಿರೋಧ ಆಯ್ಕೆ!-ಪಿಸ್ತೂಲ್ ಹಿಡಿದು ರೈತರನ್ನು ಬೆದರಿಸುವ ವಿಡಿಯೋ ವೈರಲ್; ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ತಾಯಿ ಮನೋರಮಾ ವಿರುದ್ಧ ಎಫ್ಐಆರ್!-WCL 2024: ಇರ್ಫಾನ್ - ಯೂಸುಫ್ ಪಠಾಣ್ ಸಿಡಿಲಬ್ಬರದ ಬ್ಯಾಟಿಂಗ್, ಭಾರತ - ಪಾಕಿಸ್ತಾನ ಫೈನಲ್​ಗೆ ಲಗ್ಗೆ!-ಬಿಜೆಪಿ ಮೈತ್ರಿಕೂಟಕ್ಕೆ ಪರಿಷತ್ತಿನ ಚುನಾವಣೆಯಲ್ಲಿ 11ರ ಪೈಕಿ 9 ಸ್ಥಾನಗಳಲ್ಲಿ ಜಯ!-Aparna: ಕನ್ನಡ ನಾಡು ಕಂಡ ಅಪರೂಪದ ನಿರೂಪಕಿ, ನಟಿ ಅಪರ್ಣಾ ಇನ್ನಿಲ್ಲ-ಮಂಗಳೂರಿನಲ್ಲಿ ದರೋಡೆ ಮಾಡಿ ಭಯ ಹುಟ್ಟಿಸಿದ ಚಡ್ಡಿ ಗ್ಯಾಂಗ್ ಅರೆಸ್ಟ್..!-ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಗೌತಮ್​ ಗಂಭೀರ್ ನೇಮಕ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮಂಗಳೂರಿನ ಕುಳಾಯಿಯಲ್ಲಿ ಅತ್ತೆಯ ತಾಳಿಯನ್ನೇ ಕದ್ದೊಯ್ದ ಅಳಿಯ ಬಂಧನ.

Twitter
Facebook
LinkedIn
WhatsApp
ಮಂಗಳೂರಿನ ಕುಳಾಯಿಯಲ್ಲಿ ಅತ್ತೆಯ ತಾಳಿಯನ್ನೇ ಕದ್ದೊಯ್ದ ಅಳಿಯ ಬಂಧನ.

ಮಂಗಳೂರು‌: ನಗರದ ಹೊರವಲಯದ ಕುಳಾಯಿ ಗ್ರಾಮದ ಸಂಘ ಮಿತ್ತೊಟ್ಟು ಕಾಲೊನಿ ಬಳಿ ಮನೆಯೊಂದಕ್ಕೆ ಕಳ್ಳರು ನುಗ್ಗಿ ಮನೆಯೊಡತಿ ಸುಮತಿ ಆಚಾರ್ಯ(40) ಅವರನ್ನು ಏಕಾಏಕಿ ದೂಡಿ ಬಾಯಿಗೆ ಬಟ್ಟೆಕಟ್ಟಿ ಬಳಿಕ ಅವರ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಲೂಟಿ ಮಾಡಿದ ಪ್ರಕರಣದಲ್ಲಿ ಮನೆಯೊಡತಿಯ ಅಳಿಯನೇ ಪಾಲ್ಗೊಂಡಿರುವುದು ಮನೆಯವರಿಗೆ ಶಾಕ್‌ ಆಗಿದೆ.

ಕರಿಮಣಿ ಎಳೆಯುವ ಸಂದರ್ಭ ಮಹಿಳೆ ಕಳ್ಳನೊಬ್ಬನ ಕೈಗೆ ಕಚ್ಚಿದ ಕಾರಣ ಚಿನ್ನದ ಕರಿಮಣಿಯ ಅರ್ಧ ಭಾಗ ಮಾತ್ರ ಕಳ್ಳರ ಪಾಲಾಗಿತ್ತು. ಈ ವೇಳೆ ಸ್ಥಳೀಯ ಸಿಸಿ ಟಿವಿಯಲ್ಲಿ ಕಳ್ಳನು ದರೋಡೆ ನಡೆಸಿ ಪರಾರಿಯಾಗುವ ದೃಶ್ಯ ದಾಖಲಾಗಿದ್ದು ಈ ಮೂಲಕ ಸುರತ್ಕಲ್‌ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದರು. ಕಳ್ಳತನ ನಡೆಸಿದ ಆರೋಪಿಗಳಾದ ಶಿವಮೊಗ್ಗ ಮೂಲದ ಮಣಿ(35), ವಿನಯ್‌ ಕುಮಾರ್‌( 32) ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವಿಪರ್ಯಾಸವೆಂದರೆ ಆರೋಪಿ ವಿನಯ್‌ ಕುಮಾರ್‌ ಕಳ್ಳತನ ನಡೆಸಿದ ಮನೆಯೊಡತಿ ಸುಮತಿ ಆಚಾರ್ಯರ ಅಳಿಯನಾಗಿದ್ದಾನೆ. ಮನೆ ಅಳಿಯನೇ ಇಂತಹ ಕೃತ್ಯಕ್ಕೆ ಇಳಿದಿರುವುದನ್ನು ಕಂಡು ಮನೆಯವರಿಗೆ ಶಾಕ್‌ ಆಗಿದೆ. ಕಳವುಗೈದ ಸುಮಾರು 32 ಗ್ರಾಂ ತೂಕದ 60,000 ಸಾವಿರ ಮೌಲ್ಯದ ಕರಿಮಣಿಯನ್ನು ವಿನಯ್‌ ಕುಮಾರ್‌ ತನ್ನ ಪತ್ನಿಯ ಸಹಕಾರದಿಂದ ಫೈನಾನ್ಸ್‌ನಲ್ಲಿ ಅಡವಿರಿಸಿದ್ದಾನೆ ಎಂದು ತಿಳಿದು ಬಂದಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮಂಗಳೂರಿನಲ್ಲಿ ದರೋಡೆ ಮಾಡಿ ಭಯ ಹುಟ್ಟಿಸಿದ ಚಡ್ಡಿ ಗ್ಯಾಂಗ್ ಅರೆಸ್ಟ್..!

ಮಂಗಳೂರಿನಲ್ಲಿ ದರೋಡೆ ಮಾಡಿ ಭಯ ಹುಟ್ಟಿಸಿದ ಚಡ್ಡಿ ಗ್ಯಾಂಗ್ ಅರೆಸ್ಟ್..!

ಮಂಗಳೂರಿನಲ್ಲಿ ದರೋಡೆ ಮಾಡಿ ಭಯ ಹುಟ್ಟಿಸಿದ ಚಡ್ಡಿ ಗ್ಯಾಂಗ್ ಅರೆಸ್ಟ್..! Twitter Facebook LinkedIn WhatsApp Mangalore: ಕಡಲನಗರಿ ಮಂಗಳೂರನ್ನು(Mangalore) ತಲ್ಲಣಗೊಳಿಸಿದ್ದ ಚಡ್ಡಿ ಗ್ಯಾಂಗ್​ನ್ನು ಕೃತ್ಯ ನಡೆದ ಐದೇ ಗಂಟೆಯಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು