
ಮಂಗಳೂರು: ಈ ನಡುವೆ ಅಡಿಕೆ ಬೆಳೆಗಾರರಿಗೆ ಸಂತಸದ ಸುದ್ದಿಯೊಂದು ಬಂದಿದೆ.ಲಾಕ್ ಡೌನ್ ನಡುವೆ ಮಂಗಳೂರು ಚಾಳಿ ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆ ದಾಖಲೆಯ ಏರಿಕೆ ಕಂಡಿದೆ. ಜೂ. 10ರಂದು ಹೊರ ಮಾರುಕಟ್ಟೆಯಲ್ಲಿ ಹಳೆ ಅಡಿಕೆ ಕೆಜಿ.ಗೆ 510 ರೂ.ಗಳಂತೆ ಖರೀದಿಯಾಗಿದೆ. ಇದೇ ವೇಳೆ ಹೊಸ ಅಡಿಕೆ ಧಾರಣೆಯೂ ಏರಿಕೆ ಕಂಡಿದೆ.
ಲಾಕ್‌ಡೌನ್ ಕಾರಣ ನಿಗದಿತ ಅವಧಿಯಲ್ಲಿ ಮಾತ್ರ ಖರೀದಿಗೆ ಅವಕಾಶ ಇದ್ದು ಬೇಡಿಕೆಗೆ ತಕ್ಕಷ್ಟು ಪೂರೈಕೆ ಆಗದಿರುವ ಕಾರಣ ಧಾರಣೆ ನಿರಂತರ ಏರುಗತಿಯತ್ತ ಸಾಗಿದೆ ಎನ್ನುತ್ತಾರೆ ಮೂಲಗಳು.
ಕೆ.ಜಿಗೆ 510 ರೂ ಹೊಸ ಅಡಿಕೆ 410 ರೂ.ಗೆ ಖರೀದಿಯಾಗಿದೆ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹಳೆ ಅಡಿಕೆಗೆ ಕೆಜಿಗೆ 495-500 ರೂ, ಹೊಸ ಅಡಿಕೆಗೆ ಕೆ.ಜಿ.ಗೆ 400 ರೂ. ತನಕ ಖರೀದಿ ಆಗಿದೆ.
ಕಳೆದ ವರ್ಷ ಲಾಕ್‌ಡೌನ್ ಹಲವು ಕ್ಷೇತ್ರಗಳ ಮೇ ನಕಾರಾತ್ಮಕ ಪರಿಣಾಮ ಉಂಟು ಮಾಡಿದ್ದರೂ ಬೆಳೆಗಾರರ ಪಾಲಿಗೆನಿರಾಶೆ ಆಗಿರಲಿಲ್ಲ ಆ ಅವಧಿಯಲ್ಲಿ ಧಾರಣೆ ದಾಖಲೆ ಸೃಷ್ಟಿಸಿತು. ಅದೇ ಇತಿಹಾಸ ಈ ಬಾರಿಯೂ ಮರುಕಳಿಸಿದೆ.
ಒಟ್ಟಿನಲ್ಲಿ ಲಾಕ್ಡೌನ್ ವಿಪತ್ತಿನ ನಡುವೆ ಇರುವ ಕರಾವಳಿಗರ ಮೊಗದಲ್ಲಿ ತುಸು ಮಂದಹಾಸವನ್ನು ಅಡಿಕೆ ಉಂಟುಮಾಡಿದೆ.
ವಾಟ್ಸ್ಆ್ಯಪ್ನಿಂದ ಹೊಸ ಅಪ್ಡೇಟ್: ಇನ್ಮುಂದೆ ಸ್ಕ್ರೀನ್ ಶೇರ್ ಮಾಡಬಹುದು