ಭಾನುವಾರ, ಸೆಪ್ಟೆಂಬರ್ 8, 2024
ಪ್ರಜ್ವಲ್‌ ರೇವಣ್ಣಗೆ ಶಾಕ್; ಜಾಮೀನು ಅರ್ಜಿ ವಜಾ!-ಸೋನಿಯಾ, ರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿ; ಇಬ್ಬರ ವಿರುದ್ಧ ಕೇಸ್ ದಾಖಲು-ಕೋವಿಡ್ ಹಗರಣ: ಸಿಎಂ ಕೈ ಸೇರಿದ ವರದಿ; ಮಾಜಿ ಆರೋಗ್ಯ ಸಚಿವರಿಗೆ ತಟ್ಟುತ್ತಾ ಬಿಸಿ?-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರೇಪ್ ಹೇಗಾಗುತ್ತೆ ಎಂದು ಕಂಗನಾಗೆ (Kangana Ranaut) ಕೇಳಿ; ಮಾಜಿ ಸಂಸದನ ವಿವಾದಿತ ಹೇಳಿಕೆ!-Chikkaballapur: ಟಿಟಿ - ಕಾರಿನ ಮಧ್ಯೆ ಭೀಕರ ಅಪಘಾತ; ಮೂವರ ದುರ್ಮರಣ-ಐವನ್ ಡಿಸೋಜಾ ಮನೆ ಮೇಲೆ ಕಲ್ಲುತೂರಾಟ: ಬಂಟ್ವಾಳ ಮೂಲದ ಇಬ್ಬರ ಬಂಧನ-Sarah Rahanuma: ಟಿವಿ ಪತ್ರಕರ್ತೆಯ ಶವ ಢಾಕಾ ಸರೋವರದಲ್ಲಿ ಪತ್ತೆ-ನಟ ದರ್ಶನ್ ಗೆ ಜೈಲೇ ಗತಿ; ನ್ಯಾಯಾಂಗ ಬಂಧನ ವಿಸ್ತರಣೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಭಾರೀ ವೇಗದಲ್ಲಿ ಮುನ್ನುಗುತ್ತಿದೆ ಟಿವಿಎಸ್ ಐಕ್ಯೂಬ್

Twitter
Facebook
LinkedIn
WhatsApp
139026103 tvsiqubes2 720x540 1

ಟಿವಿಎಸ್ ಐಕ್ಯೂಬ್ ಭಾರತದಲ್ಲಿ ಮಾರಾಟಕ್ಕೆ ಲಭ್ಯವಿರುವ ಅತ್ಯಂತ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳಲ್ಲಿ ಒಂದಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಟಿವಿಎಸ್ ಏಕೈಕ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಮಾತ್ರ ನೀಡುತ್ತಿದೆ. ಗ್ರಾಹಕರಿಂದಲೂ ಅದ್ಧೂರಿ ಸ್ವಾಗತ ದೊರೆತಿದ್ದು, ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದೆ.

ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ಗಳ 11,071 ಯೂನಿಟ್‌ಗಳು ಡಿಸೆಂಬರ್ 2022 ರಲ್ಲಿ ಮಾರಾಟವಾಗಿವೆ. ಇದು ಡಿಸೆಂಬರ್ 2021 ಕ್ಕಿಂತ ಹೆಚ್ಚು ಎಂದು ಹೇಳಬಹುದು. ಆಗ ಕೇವಲ 1,212 ಯೂನಿಟ್ ಮಾತ್ರ ಮಾರಾಟವಾಗಿತ್ತು. ಡಿಸೆಂಬರ್ 2022ರ ಮಾರಾಟದ ಅಂಕಿಅಂಶಗಳು ದೇಶದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆ ಬಗ್ಗೆ ಮನವರಿಕೆ ಮಾಡಿಕೊಡುತ್ತದೆ. ಅಲ್ಲದೆ, ಈ ಮಾರಾಟ ಪ್ರಮಾಣದ ಏರಿಕೆಯು ವಿಶೇಷವಾಗಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌, ಖರೀದಿದಾರರನ್ನು ತನ್ನತ್ತ ಸೆಳೆಯುವ ಮೂಲಕ ಭಾರೀ ಪ್ರಮಾಣದಲ್ಲಿ ಬೇಡಿಕೆ ಹೊಂದಿದೆ ಎಂಬುದನ್ನು ಖಚಿತಪಡಿಸುತ್ತದೆ.

ಇದಕ್ಕೆ ವ್ಯತಿರಿಕ್ತವಾಗಿ, TVS ನ ಒಟ್ಟಾರೆ ದ್ವಿಚಕ್ರ ವಾಹನಗಳ ಮಾರಾಟವು ಡಿಸೆಂಬರ್ 2021 ರಲ್ಲಿ 2,35,392 ಯುನಿಟ್‌ ಇತ್ತು. ಅದು ಡಿಸೆಂಬರ್ 2022 ರಲ್ಲಿ 2,27,666 ಯುನಿಟ್‌ಗಳಿಗೆ ಕಡಿಮೆಯಾಗಿದೆ. ಇದಕ್ಕೆ ಕಾರಣ, ಮುಖ್ಯವಾಗಿ ಕಂಪನಿಯ ರಫ್ತು ಸಂಖ್ಯೆಯಲ್ಲಿ ಗಮನಾರ್ಹ ಕುಸಿತವಾಗಿರುವುದು. ಆದರೂ ದೇಶೀಯ ಮಾರಾಟವು ಡಿಸೆಂಬರ್ 2021 ರಲ್ಲಿ 1,46,763 ಯುನಿಟ್‌ಗಳಿಂದ ಕಳೆದ ವರ್ಷದ ಇದೇ ತಿಂಗಳಲ್ಲಿ 1,61,369 ಯುನಿಟ್‌ಗಳಿಗೆ ಏರಿಕೆಯಾಗಿದೆ ಎಂದು ಹೇಳಬಹುದು. ಸ್ಕೂಟರ್ ಮಾರಾಟ, ನಿರ್ದಿಷ್ಟವಾಗಿ, ಮೋಟಾರ್ ಸೈಕಲ್ ಮಾರಾಟದಲ್ಲಿನ ಕುಸಿತದ ವಿರುದ್ಧವಾಗಿ ಶೇಕಡ 14 ರಷ್ಟು ಬೆಳವಣಿಗೆಯಾಗಿದೆ.

TVS iQube price is Rs 1.15 lakh (on-road, Bengaluru) | Autocar India

ಟಿವಿಎಸ್ ಎಲೆಕ್ಟ್ರಿಕ್ ಸ್ಕೂಟರ್ ಮೂರು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಐಕ್ಯೂಬ್, ಐಕ್ಯೂಬ್ ಎಸ್ ಮತ್ತು ಐಕ್ಯೂಬ್ ST. ಆದಾಗ್ಯೂ, ಮೊದಲ ಎರಡು ರೂಪಾಂತರಗಳು ಪ್ರಸ್ತುತ ಮಾರಾಟಕ್ಕೆ ಲಭ್ಯವಿದೆ. iQube ST ರೂಪಾಂತರದ ಮಾರಾಟ ಇನ್ನೂ ಪ್ರಾರಂಭವಾಗಿಲ್ಲ. ಅಲ್ಲದೆ, ಎಲೆಕ್ಟ್ರಿಕ್ ಸ್ಕೂಟರ್‌ನ ಐಕ್ಯೂಬ್ ರೂಪಾಂತರವು 5 ಇಂಚಿನ ಸ್ಕ್ರೀನ್ ಹೊಂದಿದೆ. ಇತರೆ ಎರಡು ರೂಪಾಂತರಗಳು 7 ಇಂಚಿನ ಸ್ಕ್ರೀನ್ ಪಡೆದಿದ್ದು, ಇದು ಟಿವಿಎಸ್ ನ ಸ್ಮಾರ್ಟ್ ಎಕ್ಸ್ ಕನೆಕ್ಟ್ ತಂತ್ರಜ್ಞಾನವನ್ನು ಹೊಂದಿದೆ. ಈ ಮೂಲಕ ನ್ಯಾವಿಗೇಷನ್, ಮೊಬೈಲ್ ಸಂಪರ್ಕ ಸೇರಿದಂತೆ ಪ್ರಮುಖ ಸೌಲಭ್ಯ ಸಿಗಲಿದೆ.

ಬ್ಯಾಟರಿ ಪ್ಯಾಕ್‌ಗೆ ಸಂಬಂಧಿಸಿದಂತೆ, 4.56 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು iQube STನಲ್ಲಿ ಉನ್ನತ ರೂಪಾಂತರದಲ್ಲಿ ಬಳಸಲಾಗಿದೆ. 3.04 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಎಂಟ್ರಿ ಲೆವೆಲ್ ಮತ್ತು ಮಿಡ್-ಲೆವೆಲ್ ರೂಪಾಂತರಗಳಲ್ಲಿ (iQube S ಮತ್ತು iQube) ಬಳಸಲಾಗಿದೆ. ಇದು ಸಂಪೂರ್ಣ ಚಾರ್ಜ್ ನಲ್ಲಿ 100 ಕಿ.ಮೀ ರೇಂಜ್ ನೀಡಲಿದೆ. 4.56 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಸಂಪೂರ್ಣ ಚಾರ್ಜ್‌ನಲ್ಲಿ 145 ಕಿಮೀ ರೇಂಜ್ ನೀಡುತ್ತದೆ. ಟಿವಿಎಸ್ ದೇಶದಲ್ಲಿ ಅಂತಹ ಹೈ-ಎಂಡ್ ರೂಪಾಂತರಕ್ಕಾಗಿ ಇನ್ನೂ ಬುಕಿಂಗ್ ಆರಂಭಿಸಬೇಕಾಗಿದೆ.

Updated TVS iQube electric scooter: 5 things to know | Autocar India

ದೇಶದಲ್ಲಿ ಈ ಬುಕ್ಕಿಂಗ್‌ ಪ್ರಾರಂಭವಾದರೆ, ಟಿವಿಎಸ್ ಐಕ್ಯೂಬ್‌ನ ಮಾರಾಟವು ಇನ್ನೂ ಭಾರೀ ಪ್ರಮಾಣದಲ್ಲಿ ಹೆಚ್ಚಾಗುವ ನಿರೀಕ್ಷೆಯಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕರ್ನಾಟಕದ ಪ್ರಮುಖ ನಗರ ಪ್ರದೇಶಗಳಲ್ಲಿ ಮಾತ್ರ ಖರೀದಿಸಬಹುದು. ಬೆಂಗಳೂರು, ಬೆಳಗಾವಿ, ಬಳ್ಳಾರಿ, ಕಲಬುರ್ಗಿ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಮತ್ತು ಶಿವಮೊಗ್ಗ ಸೇರಿದಂತೆ ಇತರೆ ಪ್ರಮುಖ ನಗರಗಳಲ್ಲಿ ವಾಸಿಸುವ ಜನರು ಸಹ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬುಕ್ ಮಾಡಬಹುದು ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.

ಬೆಂಗಳೂರಿನಲ್ಲಿ TVS iQube Electric ರೂ.1,12,230 ಆನ್ ರೋಡ್ ಬೆಲೆಯಲ್ಲಿ ಮಾರಾಟಕ್ಕೆ ಲಭ್ಯವಿದೆ ಎಂದು ಹೇಳಬಹುದು. ಇದು ಐಕ್ಯೂಬ್‌ನ ಎಂಟ್ರಿ ಲೆವೆಲ್ ರೂಪಾಂತರದ ಬೆಲೆಯಾಗಿದೆ. ಇದರ iQube S ರೂಪಾಂತರಕ್ಕೆ ರೂ.1,20,183 ಆನ್ ರೋಡ್ ಬೆಲೆಯನ್ನು ನಿಗದಿಪಡಿಸಲಾಗಿದೆ. ಈ ಮೊದಲೇ ಹೇಳಿದಂತೆ, iQube ST ರೂಪಾಂತರದ ಬೆಲೆಯನ್ನು ಇಲ್ಲಿಯವರೆಗೆ ಘೋಷಿಸಲಾಗಿಲ್ಲ. ಬೆಲೆಯನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದ್ದು, ಆ ಬಳಿಕ ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗಲಿದೆ.

 

TVS ಕಂಪನಿಯ ಇತ್ತೀಚಿನ ಬೆಳವಣಿಗೆಗೆ ಸಂಬಂಧಿಸಿದಂತೆ, ಬ್ರ್ಯಾಂಡ್‌ನ ಪ್ರಮುಖ ಕೊಡುಗೆ Apache RR310 ಅನ್ನು Asphalt 8: Airborneನಲ್ಲಿ ಪರಿಚಯಿಸಲಾಯಿತು. ಇದು ಜಾಗತಿಕವಾಗಿ ಜನಪ್ರಿಯ ಮೋಟಾರ್ ರೇಸಿಂಗ್ ಆಟಗಳಲ್ಲಿ ಒಂದಾಗಿದೆ. ತನ್ನ ಮೋಟಾರ್‌ಸೈಕಲ್‌ ಅನ್ನು ವರ್ಚುವಲ್ ರೇಸಿಂಗ್ ಅನುಭವಕ್ಕೆ ನೀಡಿದ ಮೊದಲ ಭಾರತೀಯ ದ್ವಿಚಕ್ರ ವಾಹನ ಬ್ರಾಂಡ್ ಎಂಬ ಹೆಗ್ಗಳಿಕೆಗೆ ಟಿವಿಎಸ್ ಪಾತ್ರವಾಗಿದೆ. ಒಂದು ಕಾಲದಿಂದಲೂ ಜನಪ್ರಿಯ ದ್ವಿಚಕ್ರ ಕಂಪನಿಯಾಗಿರುವ ಟಿವಿಎಸ್ ಈ ವರ್ಷ ದೇಶೀಯ ಮಾರುಕಟ್ಟೆಯಲ್ಲಿ ಹೇಗೆ ಪ್ರಗತಿಯನ್ನು ಸಾಧಿಸಲಿದೆ ಕಾದು ನೋಡಬೇಕಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ