
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಪತ್ತನಂತಿಟ್ಟ: ಮಂಗಳವಾರದಿಂದ ಶಬರಿಮಲೆ ಪ್ರವೇಶಕ್ಕೆ ಭಕ್ತರಿಗೆ ಅವಕಾಶ ನೀಡಲಾಗಿದ್ದು, ಮಳೆಯಿಂದಾಗಿ ಇಲ್ಲಿನ ಅಚನ್‌ಕೋವಿಲ್ ನದಿ ತುಂಬಿ ಹರಿಯುತ್ತಿದ್ದು, ಅನೇಕ ರಸ್ತೆಗಳು, ಸೇತುವೆಗಳು ಮುಳುಗಿ ಅವಘಡ ಸಂಭವಿಸಿರುವ ಕಾರಣ ಮತ್ತು ಮಳೆಗೆ ಮತ್ತಷ್ಟುಹಾನಿ ಸಂಭವಿಸದಂತೆ ಮುನ್ನೆಚ್ಚರಿಕೆಯಿಂದ ಭಕ್ತರ ಇರುವಂತೆ ಸೂಚನೆ ನೀಡಲಾಗಿದೆ.
ಪತ್ತನಂತಿಟ್ಟ ಜಿಲ್ಲೆಯಲ್ಲಿ ಎಡಬಿಡದೆ ಭಾರೀ ಮಳೆಯಾಗುತ್ತಿದ್ದು, ಪ್ರಮುಖ ಹೆದ್ದಾರಿಗಳು ಸೇರಿದಂತೆ ರಸ್ತೆಗಳು ಟ್ರಾಫಿಕ್ ಜಾಮ್ ಆಗಿದ್ದು, ಪಂದಳಂ-ಪತ್ತನಂತಿಟ್ಟ-ಮಾವೆಲಿಕ್ಕರ ರಸ್ತೆ ಹಲವು ಕಡೆ ಜಲಾವೃತಗೊಂಡಿದ್ದು, ಶಬರಿಮಲೆ ಯಾತ್ರಿಕರು ಬಳಸುವ ಪ್ರಮುಖ ರಸ್ತೆಗಳಲ್ಲಿ ಇದೂ ಒಂದು. ಭಕ್ತರು ಪಂದಳಂ ವಲಿಯಕೊಯಿಕ್ಕಲ್ ಶಾಸ್ತಾ ದೇವಸ್ಥಾನಕ್ಕೆ ಭೇಟಿ ನೀಡಿ ನಂತರ ಶಬರಿಮಲೆಗೆ ಭೇಟಿ ನೀಡುವುದು ಪದ್ಧತಿಯಾಗಿದೆ. ಆದರೆ ಮಳೆಯಿಂದಾಗಿ ಕಡಕ್ಕಾಡ್‌ನಲ್ಲಿ ಪಂದಳಂ-ಪತ್ತನಂತಿಟ್ಟ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ.
ಶಬರಿಮಲೆ ದೇವಸ್ಥಾನಕ್ಕೆ ಟ್ರೆಕ್ಕಿಂಗ್ ಸ್ವಾಮಿ ಅಯ್ಯಪ್ಪನ್ ರಸ್ತೆಯ ಮೂಲಕ ಮಾತ್ರ ಅನುಮತಿ ನೀಡಲಾಗಿದೆ. ಭಕ್ತರ ದರ್ಶನ ವೇಳೆ ಯಾವುದೇ ಅಹಿತಕರ ಘಟನೆ ಜರುಗದಂತೆ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಕೇರಳ ಸರ್ಕಾರ ಕೈಗೊಂಡಿದೆ.
ನೂರನಾಡ್, ಚಾರುಮ್ಮೂಡು ಮತ್ತು ಕಾಯಂಕುಲಂ ಪ್ರದೇಶಗಳ ಹಲವು ರಸ್ತೆಗಳು ಹಲವು ಕಡೆಗಳಲ್ಲಿ ಬ್ಲಾಕ್ ಆಗಿವೆ. ಅಚನ್‌ಕೋವಿಲ್‌ನ ಕರಾವಳಿ ಪ್ರದೇಶಗಳಾದ ಇರಾಮನ್, ಪ್ರಮದಮ್, ತುಂಪಮೊನ್, ಮುತ್ತಮ್ ಮತ್ತು ಕುಡಸ್ಸನಾಡ್‌ನ ಹಲವು ಗ್ರಾಮಗಳು ಸಹ ಜಲಾವೃತವಾಗಿವೆ. ಈ ಭಾಗದ ಸಣ್ಣ ರಸ್ತೆಗಳೂ ಜಲಾವೃತವಾಗಿವೆ.
ಪಂದಳಂನಿಂದ ಮಾವೇಲಿಕ್ಕಾರಕ್ಕೆ ಹೋಗುವ ಮಾರ್ಗದಲ್ಲಿ ಐರಾನಿಮುತ್ತಮ್ ಮತ್ತು ಮುದಿಯೂರ್ಕೋಣಂ ಪ್ರದೇಶಗಳಲ್ಲಿ ಪ್ರವಾಹದಿಂದಾಗಿ ಸಂಚಾರ ಅಸ್ತವ್ಯಸ್ತವಾಗಿದೆ. ಅಡೂರಿನ ವೈದ್ಯಕೀಯ ಸೇವಾ ನಿಗಮದ ಗೋದಾಮಿಗೆ ನೀರು ನುಗ್ಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಔಷಧಗಳು ನಾಶವಾಗಿದೆ.
ಇನ್ನು ಶಬರಿಮಲೆ ರಸ್ತೆಯಲ್ಲಿ ಮರ ಬಿದ್ದ ಪರಿಣಾಮ ಭೂಕುಸಿತ ಹಾಗೂ ರಸ್ತೆ ತಡೆ ಆಗುವ ಸಾಧ್ಯತೆ ಇದ್ದು, ಅಡೆತಡೆಗಳನ್ನು ತೆಗೆದುಹಾಕಲು ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಸಿದ್ಧಪಡಿಸಲಾಗಿದೆ.
ಶಬರಿಮಲೆ ಯಾತ್ರೆಗಾಗಿ ಆನ್ ಲೈನ್ ಮೂಲಕ ಬುಕ್ ಮಾಡಿದವರ ಸಂಖ್ಯೆ ಮಂಗಳವಾರಕ್ಕೆ 8,000 ಆಗಿದ್ದು, ಭಕ್ತರ ಸಂಖ್ಯೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ರಾಜ್ಯ ಸರ್ಕಾರ ಆದೇಶಿಸಿದೆ.
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
108MP ಕ್ಯಾಮೆರಾದ ಗ್ಯಾಲಕ್ಸಿ F54 5G ಅನಾವರಣ ಮಾಡಿದ ಸ್ಯಾಮ್ಸಂಗ್