- ರಾಷ್ಟ್ರೀಯ
- 10:44 ಫೂರ್ವಾಹ್ನ
- ಮೇ 24, 2023
ಭಾರತದ ಪ್ರಧಾನಿ ವಿರುದ್ಧ ಸಾಕ್ಷ್ಯಚಿತ್ರ ತಯಾರಿಸಿದ್ದ ಬಿಬಿಸಿಗೆ ಸಂಕಷ್ಟ!

ನವದೆಹಲಿ: ಜಾಗತಿಕ ಸುದ್ದಿ ಸಂಸ್ಥೆಯಾದ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (BBC) ಇತ್ತೀಚೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಕುರಿತು ನಿರ್ಮಿಸಿದ್ದು ಸಾಕ್ಷ್ಯಚಿತ್ರವನ್ನು (Documentary) ಸಾಕಷ್ಟು ವಿವಾದಕ್ಕೀಡಾಗಿತ್ತು. 2002ರ ಗುಜರಾತ್ (Gujarat) ಗಲಭೆಗಳನ್ನು ಉಲ್ಲೇಖಿಸಿ ಅಂದಿನ ರಾಜ್ಯದ ಮುಖ್ಯಮಂತ್ರಿ ಮೋದಿ ಕುರಿತು ಬಿಬಿಸಿಯ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ (India: The Modi Question) ಸಾಕ್ಷ್ಯಚಿತ್ರ ವಿವಾದಕ್ಕೀಡಾಗಿತ್ತು. ಪ್ರಧಾನಿಗೆ ಅವಮಾನ ಮಾಡುತ್ತಿದೆ ಎಂದು ಈ ಸಾಕ್ಷ್ಯಚಿತ್ರವನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಇದೀಗ ಸಾಕ್ಷ್ಯಚಿತ್ರವು ಭಾರತ, ನ್ಯಾಯಾಂಗ ಮತ್ತು ಪ್ರಧಾನಿಯ ಚಿತ್ರಣವನ್ನು ದೂಷಿಸುತ್ತದೆ ಎಂದು ಗುಜರಾತ್ ಮೂಲದ ಎನ್‌ಜಿಒ ಸಲ್ಲಿಸಿದ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಲಾಗುತ್ತು. ಇದೀಗ ದೆಹಲಿ ಹೈಕೋರ್ಟ್ ಸೋಮವಾರ ಬಿಬಿಸಿಗೆ ಸಮನ್ಸ್ ಜಾರಿ ಮಾಡಿದೆ.
ಗುಜರಾತ್ ಮೂಲದ ಎನ್‌ಜಿಒ ಸಂಸ್ಥೆ, ಜಸ್ಟಿಸ್ ಆನ್ ಟ್ರಯಲ್ ಎಂಬ ಸಂಸ್ಥೆಯು ದೆಹಲಿ ಹೈಕೋರ್ಟ್‌ನಲ್ಲಿ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹೂಡಿದೆ. ಬಿಬಿಸಿಯ ಎರಡು ಭಾಗಗಳ ಸಾಕ್ಷ್ಯಚಿತ್ರ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ ಶೀರ್ಷಿಕೆಯು ಪ್ರಧಾನ ಮಂತ್ರಿ ಪ್ರತಿಷ್ಠೆಗೆ ಮಸಿ ಬಳಿದಿದೆ.
ಪ್ರಧಾನಿ ಅವರ ಮೇಲೆ ಮಾನಹಾನಿಕರವಾದ ಆರೋಪವನ್ನು ಮಾಡುತ್ತದೆ. ದೇಶ ಮತ್ತು ನ್ಯಾಯಾಂಗದ ಪ್ರತಿಷ್ಠೆಯ ಅವಮಾನ ಮಾಡಿದ ಎಂದು ಎನ್‌ಜಿಒ ಸಂಸ್ಥೆ ವಾದ ಮಂಡಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಬಿಬಿಸಿ ಯುಕೆ ಜೊತೆಗೆ, ಬಿಬಿಸಿ ಇಂಡಿಯಾಗೂ ಸಮನ್ಸ್ ಜಾರಿ ಮಾಡಿದೆ.