
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಜ್ವಾಲಾ ಗುಟ್ಟಾ ವಿವಾದಗಳಿಗೆ ಸಿಲುಕಿದ್ದರು. ಆದರೆ ಆಕೆಯ ಕ್ರೀಡಾ ಸಾಧನೆ ಸರ್ವರು ಮೆಚ್ಚುವಂತದ್ದು. 1983 ರಲ್ಲಿ ಜನಿಸಿದ ಜ್ವಾಲಾ ತನ್ನ ಬ್ಯಾಡ್ಮಿಟನ್ ಆಟವನ್ನು ಸಾವಿರದ ಒಂಬೈನೂರ ತೊಂಬತ್ತು ರಲ್ಲಿ ಆರಂಭ ಮಾಡುತ್ತಾರೆ.
ಜ್ವಾಲಾ ಅವರ ತಾಯಿ ಚೀನಾ ಮೂಲದವರು. ತಂದೆ ಭಾರತೀಯ ತೆಲುಗು ಮೂಲದವರು. 2010ರಲ್ಲಿ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕವನ್ನು ಗಳಿಸಿದ ಸಾಧನೆ ಇವರದಾಗಿದೆ.
2011ರಲ್ಲಿ ಓಲ್ಡ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು. 2012ರಲ್ಲಿ ಲಂಡನ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಜ್ವಾಲಾ ಆ ಮೂಲಕ ಪ್ರಥಮ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
2014ರಲ್ಲಿ ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕವನ್ನು ಪಡೆದ ಜ್ವಾಲಾ ಆ ಮೂಲಕ ವಿಶಿಷ್ಟ ಸಾಧನೆಯನ್ನು ಮಾಡಿದ್ದಾರೆ. 2015ರಲ್ಲಿ ವಿಶ್ವ ಬ್ಯಾಡ್ಮಿಂಟನ್ ಆಟಗಾರ್ತಿ ರ್ಯಾಂಕಿಂಗ್ ಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಏರಿದ ಜ್ವಾಲಾ ವಿಶಿಷ್ಟ ಸಾಧನೆಯನ್ನು ಮಾಡಿದ್ದಾರೆ.
ಗ್ಲಾಮರಸ್ಸಾಗಿ ಯು ಮಿಂಚುತ್ತಿರುವ ಜ್ವಾಲಾ ಈ ನಡುವೆ ಹಲವಾರು ವಿವಾದಗಳಿಗೆ ತುತ್ತಾಗಿದ್ದರು. ಬ್ಯಾಡ್ಮಿಂಟನ್ ಸಂಸ್ಥೆಯೊಂದಿಗೆ ನಡೆದ ವಿವಾದ ಚರ್ಚೆಗೆ ಒಳಗಾದ ವಿವಾದ.
ಡಬಲ್ಸ್ ಹಾಗೂ ಮಿಕ್ಸಡ್ ಡಬಲ್ಸ್ ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಬ್ಯಾಡ್ಮಿಂಟನ್ ಆಟಗಾರ ಚೇತನ್ ಆನಂದ್ ಅವರನ್ನು ವಿವಾಹವಾಗಿದ್ದರು. ಈ ವಿವಾಹ ಹೆಚ್ಚು ಕಾಲ ಉಳಿಯಲಿಲ್ಲ. ಈಚೆಗೆ ಸಿನಿಮಾ ನಿರ್ದೇಶಕರನ್ನು ಜ್ವಾಲಾ ಅವರು ವಿವಾಹವಾಗಿದ್ದಾರೆ.
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
108MP ಕ್ಯಾಮೆರಾದ ಗ್ಯಾಲಕ್ಸಿ F54 5G ಅನಾವರಣ ಮಾಡಿದ ಸ್ಯಾಮ್ಸಂಗ್