ಬೆಳ್ತಂಗಡಿ: ಹಟ್ಟಿಗೆ ನುಗ್ಗಿ ದನವನ್ನು ಕೊಂದು ತಿಂದ ಚಿರತೆ
Twitter
Facebook
LinkedIn
WhatsApp
ಬೆಳ್ತಂಗಡಿ, ಏ 18 : ಮನೆಯ ಸಮೀಪವಿದ್ದ ದನದ ಹಟ್ಟಿಗೆ ಚಿರತೆಯೊಂದು ನುಗ್ಗಿ ಕಟ್ಟಿ ಹಾಕಿದ್ದ ದನವೊಂದನ್ನು ಕೊಂದು ತಿಂದ ಘಟನೆ ಧರ್ಮಸ್ಥಳ ಗ್ರಾಮದ ನೇರ್ತನೆ ಎಂಬಲ್ಲಿ ಇಂದು ಬೆಳಗ್ಗೆ ಬೆಳಕಿಗೆ ಬಂದಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ.
ತ್ರೇಸ್ಯಾಮ್ಮ ಪಿ.ಕೆ. ಎಂಬವರಿಗೆ ಸೇರಿದ ದನ ಇದಾಗಿದ್ದು, ಅವರ ಮನೆ ಅರಣ್ಯದ ಸಮೀಪವೇ ಇದೆ. ಆಶಾ ಕಾರ್ಯಕರ್ತೆಯಾಗಿರುವ ಇವರು ಅತಿಸಣ್ಣ ಕೃಷಿಕರು ಆಗಿದ್ದು, ಹೈನುಗಾರಿಯೇ ಇವರಿಗೆ ಜೀವನೋಪಾಯವಾಗಿದೆ.
ಇನ್ನು ಮುಂಡಾಜೆ ದುಂಬೆಟ್ಟು ಪರಿಸರದಲ್ಲಿ ಕೆಲ ದಿನಗಳ ಹಿಂದೆ ಚಿರತೆ ಕಾಣಿಸಿಕೊಡು ನಾಯಿಗಳನ್ನು ತಿಂದು ಹಾಕಿತ್ತು. ಆ ಪರಿಸರದಿಂದ ಚಿರತೆ ಇಲ್ಲಿಗೆ ಬಂದಿರಬಹುದು ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ.