ಮಂಗಳವಾರ, ಜೂನ್ 18, 2024
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ; ಸಿಎಂ ಸಿದ್ದರಾಮಯ್ಯ ಮತ್ತು ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ಏನು..?-ಕಿಸಾನ್ ಸಮ್ಮಾನ್ 17 ನೇ ಕಂತಿನ ಹಣ ನಾಳೆ ಬಿಡುಗಡೆ; ನಿಮ್ಮ ಖಾತೆಗೆ ಹಣ ಬಂದಿದೆಯೇ ಎಂದು ತಿಳಿಯುವುದು ಹೇಗೆ.?-ಶಿವಮೊಗ್ಗ ಬಿಜೆಪಿ ಪ್ರತಿಭಟನೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್ ಕುಸಿದುಬಿದ್ದು ನಿಧನ..!-Rain Alert: ಜೂನ್ 21ರಿಂದ ರಾಜ್ಯದಲ್ಲಿ ಮಳೆ ಮುನ್ಸೂಚನೆ..!-ಕುವೈತ್ ಅಗ್ನಿ ದುರಂತ; 45 ಭಾರತೀಯರ ಪಾರ್ಥಿವ ಶರೀರ ಇಂದು ಬೆಳಗ್ಗೆ ಕೊಚ್ಚಿಗೆ ಆಗಮನ..!-ಜುಲೈ 22 ರಿಂದ ಆಗಸ್ಟ್ 9ರವರೆಗೆ ಮುಂಗಾರು ಸಂಸತ್ ಅಧಿವೇಶನ..!-ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮ ಆರೋಪ; ಕೇಂದ್ರ, ಎನ್‌ಟಿಎಗೆ ಸುಪ್ರೀಂ ನೋಟಿಸ್..!-ಪೋಕ್ಸೊ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ಇಂದು ವಿಚಾರಣೆ; ಜಾಮೀನು ಸಿಗದಿದ್ದರೆ ಯಡಿಯೂರಪ್ಪ ಬಂಧನ.!-ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ!-ಪೋಕ್ಸೊ ಕೇಸ್​; ವಾರಂಟ್ ಜಾರಿಯಾದ್ರೆ ಮಾಜಿ ಸಿಎಂ ಯಡಿಯೂರಪ್ಪ ಬಂಧನ ಫಿಕ್ಸ್..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸುಳ್ಳು ಲೆಕ್ಕ ನೀಡುತ್ತಿದ್ದಾರೆ ಎಂದು ಆರೋಪಿಸಿ ಬಹಿರಂಗ ಚರ್ಚೆಗೆ ಆಹ್ವಾನಿಸಿದ ವಸಂತ ಬಂಗೇರ.

Twitter
Facebook
LinkedIn
WhatsApp
ಬೆಳ್ತಂಗಡಿ ರಾಜಕೀಯದಲ್ಲಿ ಮೇಜರ್ ಟ್ವಿಸ್ಟ್-ಬಂಗೇರ ಪುಂಜಾ ಫುಲ್ ಆಕ್ಟಿವ್.

ಬೆಳ್ತಂಗಡಿ; ಇತ್ತೀಚೆಗೆ ಶಾಸಕ ಹರೀಶ್ ಪೂಂಜ ಅವರು 3 ವರ್ಷಗಳಲ್ಲಿ ಬೆಳ್ತಂಗಡಿ ಕ್ಷೇತ್ರಕ್ಕೆ 833.69 ಅನುದಾನ ತಂದಿರುವುದಾಗಿ ಹೇಳಿದ್ದು ಆ ಬಗ್ಗೆ ದಾಖಲೆ ನೀಡಿದರೆ ನಾನು ಸಾರ್ವಜನಿಕವಾಗಿ ಅವರನ್ನು ಅಭಿನಂದಿಸುವುದಾಗಿ ಹೇಳಿದ್ದೆ. ಇದೀಗ ಅವರು ಪತ್ರಿಕೆಯಲ್ಲಿ ಪ್ರಕಟಿಸಿದ 20 ಇಲಾಖೆಗಳ ಮುಖ್ಯಸ್ಥರನ್ನು ನಾನು ಸಂಪರ್ಕಿಸಿ ದಾಖಲೆಗಳನ್ನು ಸಂಗ್ರಹಿಸಿದ್ದು ಈ ಪೈಕಿ 368.5 ಕೋಟಿ ರೂ. ವ್ಯತ್ಯಾಸ ನೀಡಿದ್ದು ಜನತೆಗೆ ತಪ್ಪಾದ ಲೆಕ್ಕ ಕೊಟ್ಟಿದ್ದಾರೆ. ಈ ಬಗ್ಗೆ ನಾನು ಅವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸುತ್ತಿದ್ದು ಪತ್ರಕರ್ತರ ಸಮಕ್ಷಮ ಶಾಸಕರು ನಿಗದಿಗೊಳಿಸಿದ ದಿನ ಅಧಿಕಾರಿಗಳನ್ನು ಕರೆದುಕೊಂಡು ಅವರು ನೀಡಿದ ಲೆಕ್ಕದ ಚರ್ಚೆಗೆ ಎಲ್ಲಿಗೆ ಕರೆದರೂ ನಾನು ಬರಲು ಸಿದ್ದನಿದ್ದೇನೆ ಎಂದು ಮಾಜಿ ಶಾಸಕ ವಸಂತ ಬಂಗೇರ ಸವಾಲೆಸೆದರು.
ಬೆಳ್ತಂಗಡಿ ಸರಕಾರಿ ಪ್ರವಾಸಿ ಬಂಗಲೆಯಲ್ಲಿ ಮಂಗಳವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ಮುಂದುವರಿದು ಮಾತನಾಡಿದ ಅವರು, ಶಾಸಕರು ಪ್ರಕಟಿಸಿದ 20   ಇಲಾಖೆಗಳ ಲೆಕ್ಕಗಳನ್ನು ಪರಿಶೀಲಿಸಿದಾಗ ಅದರಲ್ಲಿ ಕೆಲವು ಕಾಮಗಾರಿಗಳು ನನ್ನ ಅವಧಿಯಲ್ಲಿ ಮಂಜೂರಾದುದು ಸಹ ಸೇರಿದೆ . ಅಲ್ಲದೆ ಕೆಲ ಲೆಕ್ಕವನ್ನು ಎರಡೆರಡು ಇಲಾಖೆಗಳ ಕಾಮಗಾರಿಗಳ ಪಟ್ಟಿಯಲ್ಲಿ ತೋರಿಸಿ ಜನತೆಗೆ ತಪ್ಪು ಮಾಹಿತಿ ನೀಡಿದ್ದಾರೆ. ಪಟ್ಟಣ ಪಂಚಾಯತ್‌ಗೆ ನನ್ನ ಶಾಸಕತ್ವದ  ನಾನು ಕಾಮಗಾರಿಗಳು 
10 ಕೋಟಿ ಅನುದಾನವನ್ನು  ಕೆ.ಆರ್.ಐ.ಡಿಎಲ್‌ನ ಲೆಕ್ಕದಲ್ಲೂ ತೋರಿಸಿರುತ್ತಾರೆ. ಸಮಾಜ ಕಲ್ಯಾಣ ಇಲಾಖೆಗೆ ನನ್ನ ಶಾಸಕತ್ವದ ಅವಧಿಯಲ್ಲಿ ಮಂಜೂರಾದ 5 ಕೋಟಿ ಅನುದಾನವನ್ನು ಕೆ.ಆರ್.ಐ.ಡಿ.ಎಲ್‌ನ ಲೆಕ್ಕದಲ್ಲೂ ತೋರಿಸಿರುತ್ತಾರೆ .ಕಂದಾಯ ಇಲಾಖೆಗೆ ಈ ಬಾರಿ ಮಂಜೂರಾದ 35 ಲಕ್ಷ ರೂ. ಅನುದಾನವನ್ನು ನಿರ್ಮಿತಿ ಕೇಂದ್ರದ ಲೆಕ್ಕದಲ್ಲೂ ತೋರಿಸಿರುತ್ತಾರೆ. ಅಲ್ಲದೆ ಶಾಸಕರು ಕೊಟ್ಟಿರುವ 20 ಇಲಾಖೆಗಳ ಲೆಕ್ಕದಲ್ಲಿ ಹೆಚ್ಚಿನ ಅನುದಾನಗಳು ಶಾಸಕರ ವಿಶೇಷ ಅನುದಾನಗಳಾಗಿರುವುದಿಲ್ಲ . ಅವುಗಳು ವಾರ್ಷಿಕವಾಗಿ ಇಲಾಖೆಗಳಿಗೆ ಸರಕಾರದಿಂದ ಬರುವಂತಹ ನಿಯತ ಅನುದಾನಗಳಾಗಿರುತ್ತವೆ . ಅದೇ ರೀತಿ ಶಾಸಕರು ಇಲಾಖಾವಾರು ಲೆಕ್ಕದಲ್ಲಿ ಕೆಲ ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿರುವ
ಸಿಬಂಧಿಗಳ ಸಂಬಳ , ಗ್ರಾಮ ಪಂಚಾಯತ್‌ಗಳು ಅನುಷ್ಠಾನಗೊಳಿಸಿದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ [ MGNRG ] ಕೂಲಿ ಪಾವತಿಯ ಲೆಕ್ಕ , ಕೆಲವೊಂದು ಇಲಾಖೆಗಳಲ್ಲಿ ವ್ಯಯಿಸಿದ ವಾಹನ ಭತ್ಯೆ , ಮೀಟಿಂಗ್ ಸಂದರ್ಭದಲ್ಲಿ ತರಿಸಿದ ಊಟ , ಉಪಹಾರದ ಖರ್ಚುವೆಚ್ಚಗಳು ಸಹ ಸೇರಿದೆ. ತೋಟಗಾರಿಕೆ, ಕೃಷಿ ಇಲಾಖೆಯಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರ ಸಂಬಳ ಕೂಡ ಸೇರಿದೆ. ಅಲ್ಲದೆ ವಿಶೇಷವಾಗಿ ರೈತರಿಗೆ ತರಬೇತಿ ನೀಡಿದ ವೇಳೆ ಉಪಹಾರ , ರೈತರ ಅಧ್ಯಯನ ಪ್ರವಾಸದ ಖರ್ಚುವೆಚ್ಚ ಕೂಡ ಸೇರಿದೆ. 

ಈ ಎಲ್ಲಾ ದಾಖಲೆಗಳು ನನ್ನ ಬಳಿ ಇದ್ದು ಶಾಸಕರಾದ ಹರೀಶ್ ಪೂಂಜರವರು ಅಪೇಕ್ಷಿಸಿದಲ್ಲಿ ಪ್ರತಿಗಳನ್ನು ಅವರ ಕಛೇರಿಗೆ ತಲುಪಿಸಲು ಬದ್ದನಾಗಿರುತ್ತೇನೆ.  ನಾನು ಶಾಸಕರ ಈ ಕೋಟಿ ಲೆಕ್ಕದ ಬಗ್ಗೆ ಸದ್ರಿ 20 ಇಲಾಖೆಗಳ ಮುಖ್ಯಸ್ಥರನ್ನು ಸಂಪರ್ಕಿಸಿದಾಗ ಅವರು ಪ್ರಾಮಾಣಿಕವಾಗಿ ಅವುಗಳಲ್ಲಿ ನಾನು ಶಾಸಕನಾಗಿದ್ದ ಕಾಲದ ಅನುದಾನ ಕೂಡ ಸೇರ್ಪಡೆಗೊಂಡಿದೆ. ಅದೇ ರೀತಿ ಶಾಸಕರು ಕೊಟ್ಟ ಲೆಕ್ಕದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಐವನ್ ಡಿ ಸೋಜಾ , ಹಾಲಿ ವಿಧಾನ ಪರಿಷತ್ ಸದಸ್ಯರು , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ . ಹರೀಶ್‌ ಕುಮಾರ್ ರವರ ಅನುದಾನಗಳು ಕೂಡ ಸೇರಿದೆ. ಆದ್ದರಿಂದ
ನಾನು ಈ ಮೂಲಕ ಶಾಸಕ ಹರೀಶ್ ಪೂಂಜಾರವರನ್ನು ಬಹಿರಂಗವಾಗಿ ಚರ್ಚೆಗೆ ಆಹ್ವಾನಿಸುತ್ತಿದ್ದೇನೆ. ಒಂದು ವೇಳೆ ಅವರು 833.69  ಲಕ್ಷ ಅವರೇ ತರಿಸಿದ್ದು ಎನ್ನುವ ಬಗ್ಗೆ ದಾಖಲೆಗಳನ್ನು ನೀಡಿದಲ್ಲಿ ಅಲ್ಲಿಯೇ ಅವರನ್ನು ತಾಲೂಕಿನ ಜನರೆಯ ಪರವಾಗಿ ಅಲ್ಲಿಯೇ ಅಭಿನಂದಿಸಲು ನಾನು ಬದ್ಧನಾಗಿರುತ್ತೇನೆ ಎಂದರು.
ಪಕ್ಷದ ವಕ್ತಾರ, ನ್ಯಾಯವಾದಿ ಮನೋಹರ್ ಕುಮಾರ್ ಇಳಂತಿಲ ಮತ್ತು ಜಿ.ಪಂ ಮಾಜಿ ಸದಸ್ಯ ಶೇಖರ್ ಕುಕ್ಕೇಡಿ ಅವರು ಇಲಖಾವಾರು ವಿವರ ನೀಡಿದರು. 
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಉಭಯ ಘಟಕಗಳ ಅಧ್ಯಕ್ಷರುಗಳಾದ ಶೈಲೇಶ್ ಕುಮಾರ್ ಕುರ್ತೋಡಿ ಮತ್ತು ರಂಜನ್ ಜಿ ಗೌಡ, ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪಡ್ಪು, ತಾ.ಪಂ ಮಾಜಿ ಅಧ್ಯಕ್ಷೆ ದಿವ್ಯಜ್ಯೋತಿ, ತಾ.ಪಂ ಮಾಜಿ ಸದಸ್ಯರುಗಳಾದ ಓಬಯ್ಯ, ಜಯರಾಮ ಆಲಂಗಾರು, ಪ್ರವೀಣ್ , ಜಯಶೀಲಾ ಮತ್ತು ಸುಶೀಲಾ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಭಿನಂದನ್ ಹರೀಶ್ ಉಪಸ್ಥಿತರಿದ್ದರು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ವಯೋಸಹಜ ಕಾಯಿಲೆ ಹಾಗೂ ಅಸ್ತಮಾದಿಂದ ಬಳಲುತ್ತಿದ್ದ ಜಯಂತಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಸದಾ ಕೃತಕ ಆಮ್ಲಜನಕದ ಸಹಾಯದಿಂದಲೇ ಜಯಂತಿಯವರು ಉಸಿರಾಡುತ್ತಿದ್ದರು. ಜಯಂತಿಯವರ ಅಂತಿಮ ದರ್ಶನಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು.

ಬಳಿಕ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ಜಯಂತಿಯವರ ಅಂತ್ಯಸಂಸ್ಕಾರ ನಡೆಯಿತು. ಪುತ್ರ ಕೃಷ್ಣಕುಮಾರ್ ಜಯಂತಿಯವರ ಅಂತಿಮ ವಿಧಿವಿಧಾನ ನಡೆಸಿದರು.

ಕರಾವಳಿ

ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ!

ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ!

ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ! Twitter Facebook LinkedIn WhatsApp ಮಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ದಿನೇ ದಿನೇ ಏರಿಕೆ ಆಗುತ್ತಿವೆ. ಇಂದು ಸಾಗರದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು