ಗುರುವಾರ, ಫೆಬ್ರವರಿ 22, 2024
ಕುಡಿಬೇಡ ಎಂದು ಬುದ್ಧಿ ಹೇಳಿದಕ್ಕೆ ಯುವಕ ಆತ್ಮಹತ್ಯೆ..!-Suratkal :ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದಾಗಲೇ ಹೃದಯಾಘಾತ; ಯುವಕ ಸಾವು.!-ದೆಹಲಿ ಚಲೋ ಪ್ರತಿಭಟನೆಯಲ್ಲಿ ಓರ್ವ ಯುವ ರೈತ ಸಾವು ; 2 ದಿನಗಳ ಕಾಲ ಪ್ರತಿಭಟನೆ ಸ್ಥಗಿತ.!-Tanya Singh: ಖ್ಯಾತ ಮಾಡೆಲ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ; ಐಪಿಎಲ್ ಸ್ಟಾರ್ ಆಟಗಾರನಿಗೆ ನೋಟಿಸ್.!-ಡಾಲಿ ಧನಂಜಯ್: ಲೋಕಸಭೆ ಚುನಾವಣಾ ಸ್ಪರ್ಧೆ ಬಗ್ಗೆ ನಟ ಡಾಲಿ ಧನಂಜಯ್ ಪ್ರತಿಕ್ರಿಯೆ ಏನು?-ಪುತ್ತೂರು: ಟಿಪ್ಪರ್ ಮತ್ತು ಬೈಕ್ ನಡುವೆ ಅಪಘಾತ ; ಚಿಕಿತ್ಸೆ ಫಲಿಸದೆ ಯುವಕ ಸಾವು!-Gold Rate Today : ಸತತ ಇಳಿಕೆ ಕಂಡಿದ್ದ ಚಿನ್ನದ ದರ ಮತ್ತೆ ಏರಿಕೆಯತ್ತ..!-IPL 2024: ಇಂದು ಐಪಿಎಲ್ 2024 ವೇಳಾಪಟ್ಟಿ ಪ್ರಕಟ; ಫೈನಲ್ ಪಂದ್ಯ ಯಾವಾಗ?-ಬೆಡ್​ರೂಮ್​ಗೆ ನುಗ್ಗಿದ ಅಪರಿಚಿತನನ್ನು ಕೊಂದು ಪೊಲೀಸರಿಗೆ ಶರಣಾದ ವ್ಯಕ್ತಿ..!-ತನ್ನ ಬಗ್ಗೆ ಸುಳ್ಳು ಸುದ್ದಿಯ ಗ್ರಾಫಿಕ್ ಸೃಷ್ಟಿ ಮಾಡಿದವರ ವಿರುದ್ಧ ಕಾನೂನು ಕ್ರಮ - ಮಡಿಕೇರಿ ಶಾಸಕ ಡಾ.ಮಂತರ್‌ ಗೌಡ ಸ್ಪಷ್ಟನೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬೆಳ್ತಂಗಡಿ ರಾಜಕೀಯದಲ್ಲಿ ಮೇಜರ್ ಟ್ವಿಸ್ಟ್-ಬಂಗೇರ, ಪುಂಜಾ ಫುಲ್ ಆಕ್ಟಿವ್.

Twitter
Facebook
LinkedIn
WhatsApp
ಬೆಳ್ತಂಗಡಿ ರಾಜಕೀಯದಲ್ಲಿ ಮೇಜರ್ ಟ್ವಿಸ್ಟ್-ಬಂಗೇರ ಪುಂಜಾ ಫುಲ್ ಆಕ್ಟಿವ್.

ಬೆಳ್ತಂಗಡಿ ರಾಜಕೀಯ ಚುನಾವಣೆಯ ಮೊದಲೇ ರಂಗೇರಿದೆ. ಶಾಸಕ ಹರೀಶ್ ಪೂಂಜಾ 240 ಕೋಟಿ ರೂಪಾಯಿಗಳ ನೀರಿನ ಯೋಜನೆಗಳನ್ನು ಬೆಳ್ತಂಗಡಿಗೆ ತಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಹರೀಶ್ ಪೂಂಜಾ ಅಭಿವೃದ್ಧಿಯ ಬತ್ತಳಿಕೆ ಯನ್ನು ಸಮರ್ಥವಾಗಿ ಪ್ರಯೋಗಿಸುತ್ತಿದ್ದಾರೆ ‌.

ಆದರೆ ಕಳೆದ ಎರಡು ತಿಂಗಳಿಂದ ಗೊಂದಲದಲ್ಲಿದ್ದ ಬೆಳ್ತಂಗಡಿ ಕಾಂಗ್ರೆಸ್ಸಿನಲ್ಲಿ ಈಗ ಹೊಸ ಹುಮ್ಮಸ್ಸು ಗೋಚರವಾಗುತ್ತಿದೆ. ಕೆಪಿಸಿಸಿ ಮಾಜಿ ಕಾರ್ಯದರ್ಶಿ ರಕ್ಷಿತ್ ಎಂಟ್ರಿಯ ನಂತರ ಬಂಗೇರ ಹಾಗೂ ಹರೀಶ್ ಕುಮಾರ್ ಬಣ ಜೊತೆಗೂಡಿದ್ದು, ಗ್ರಾಮ ಗ್ರಾಮಕ್ಕೆ ಬ್ಲಾಕ್ ಅಧ್ಯಕ್ಷರುಗಳು ವಸಂತ ಬಂಗೇರ ಅವರೊಂದಿಗೆ ಭೇಟಿ ನೀಡುತ್ತಿದ್ದಾರೆ. ಇದು ಕಾಂಗ್ರೆಸ್ನಲ್ಲಿ ಹೊಸ ಸಂಚಲನವನ್ನು ಉಂಟು ಮಾಡಿದೆ.

ಆದರೆ ಬಿಜೆಪಿ ಅಷ್ಟು ಸುಲಭದಲ್ಲಿ ಬಿಟ್ಟುಕೊಡುವ ಲಕ್ಷಣ ಕಾಣುತ್ತಿಲ್ಲ. ಕಾಂಗ್ರೆಸ್ನ ಭಿನ್ನಮತದ ಸಂಪೂರ್ಣ ಲಾಭ ಎತ್ತಲು ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್ ಬಂಗೇರ, ಹರೀಶ್ ಕುಮಾರ್, ರಕ್ಷಿತ್, ರಂಜನ್ ಈ ರೀತಿಯಾಗಿ ಬೇರೆ ಬೇರೆ ಹಿಂಬಾಲಕರನ್ನು ಹೊಂದಿಕೊಂಡು ಸ್ವಲ್ಪ ಹಿನ್ನಡೆಯಲ್ಲಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಈ ನಡುವೆ ಬಿಜೆಪಿಯಲ್ಲಿ ಒಳಗಿಂದಲೇ ಅಸಮಾಧಾನ ಇದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಹರೀಶ್ ಪೂಂಜಾ ವಿರುದ್ಧ ಕೆಲವು ಹಿರಿಯ ನಾಯಕರು ಒಳಗಿಂದಲೇ ಅಸಮಾಧಾನಗೊಂಡಿದ್ದಾರೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಈ ನಡುವೆ 4 ಹಿಂಬಾಲಕರ ಪಡೆ ಕಾಂಗ್ರೆಸ್ ನಲ್ಲಿರುವ ಕಾರಣದಿಂದ ಹೈಕಮಾಂಡ್ ಇವರನ್ನೆಲ್ಲ ಬಿಟ್ಟು ಹೊಸ ಮುಖಕ್ಕೆ ಅವಕಾಶ ನೀಡಿದರು ಅಚ್ಚರಿ ಇಲ್ಲ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಒಟ್ಟಿನಲ್ಲಿ ಬಿಜೆಪಿಗೆ ತನ್ನ ಸ್ಥಾನ ಉಳಿಸಿಕೊಳ್ಳುವ ತಲೆನೋವು ಆದರೆ, ಕಾಂಗ್ರೆಸ್ಗೆ ಅಧಿಕಾರ ಪಡೆದುಕೊಳ್ಳುವ ತವಕ ಇದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು