ಬೆಳ್ತಂಗಡಿ: ಮನೆಯೊಳಗೆ ಮಂಚದಡಿಯಲ್ಲಿತ್ತು12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ..!
Twitter
Facebook
LinkedIn
WhatsApp

ಮಂಗಳೂರು, ಮೇ 28: ಮನೆಯೊಳಗೆ ಬಂದ 12 ಅಡಿ ಉದ್ದದ ಬೃಹತ್ ಗಾತ್ರ ಕಾಳಿಂಗ ಸರ್ಪವೊಂದನ್ನು (King Cobra) ದಕ್ಷಿಣ ಕನ್ನಡ ಜಿಲ್ಲೆಯ ಇಂದಬೆಟ್ಟುವಿನಲ್ಲಿ ರಕ್ಷಿಸಿ ಕಾಡಿಗೆ ಬಿಡಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಇಂದಬೆಟ್ಟುವಿನ ಬಂಗಾಡಿ (Bangadi) ಎಂಬಲ್ಲಿನ ಮನೆಯ ಮಂಚದ ಅಡಿಯಲ್ಲಿ ಕಾಳಿಂಗ ಸರ್ಪ ಇತ್ತು.
ಮನೆಮಂದಿ ಮನೆಯ ಒಂದು ಪಾರ್ಶ್ವವನ್ನು ಮಾತ್ರ ಬಳಸುತ್ತಿದ್ದರು. ಮತ್ತೊಂದು ಪಾರ್ಶ್ವದ ಕೋಣೆಯ ಮಂಚದ ಅಡಿಯಲ್ಲಿ ಕಾಳಿಂಗ ಸರ್ಪ ಇತ್ತು. ಕೋಣೆಯ ಬಾಗಿಲು ತೆಗೆದಾಗ ಮಂಚದಡಿಯಲ್ಲಿ ಶಬ್ದ ಕೇಳಿಬಂದಿದೆ. ಏನೆಂದು ಮಂಚದಡಿ ನೋಡಿದಾಗ ಬೃಹತ್ ಕಾಳಿಂಗ ಸರ್ಪ ಪತ್ತೆಯಾಗಿದೆ. ನಂತರ ಮನೆಯವರು ಉರಗ ರಕ್ಷಕ ಅಶೋಕ್ ಲಾಯಿಲ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಉರಗ ರಕ್ಷಕ ಅಶೋಕ್ ಲಾಯಿಲ ಕಾಳಿಂಗ ಸರ್ಪವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.