ಸೋಮವಾರ, ಅಕ್ಟೋಬರ್ 2, 2023
Galaxy S23 FE: ಸ್ಯಾಮ್ಸಂಗ್ ಗ್ಯಾಲಕ್ಸಿ S23 ಎಫ್​ಇ ಸ್ಮಾರ್ಟ್​ಫೋನ್ ಅ.4 ರಂದು ಬಿಡುಗಡೆ!-ಜಿಂಬಾಬ್ವೆಯಲ್ಲಿ ವಿಮಾನ ಪತನ ; ಭಾರತದ ಕೋಟ್ಯದೀಶ್ವರ ಹಾಗೂ ಗಣಿ ಉದ್ಯಮಿ ಮತ್ತು ಅವರ ಪುತ್ರ ದುರ್ಮರಣ!-ಸಂಕ್ರಾಂತಿ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ; ಸಿಪಿ ಯೋಗೇಶ್ವರ್ ಬಾಂಬ್-ದಿಗ್ಗಜ ಮಾಜಿ ಓಟಗಾರ್ತಿ ಪಿ.ಟಿ ಉಷಾರವರ ರಾಷ್ಟ್ರೀಯ ದಾಖಲೆ ಸರಿಗಟ್ಟಿ ಪದಕ ಸುತ್ತಿಗೇರಿದ ವಿತ್ಯಾ!-ನೀವು ಹೆದರಿಸದರೆ ಮಾತ್ರಕ್ಕೆ ನಾನು ಹೆದರಲ್ಲ ದೇವೇಗೌಡರಿಗೆ ಡಿಕೆಶಿ ಟಾಂಗ್!-ಜಿಪಿಎಸ್ ಮ್ಯಾಪ್ ನೋಡಿ ಕಾರನ್ನು ಚಲಿಸುವುತ್ತಿರುವಾಗ ನದಿಗೆ ಬಿದ್ದು ಇಬ್ಬರು ವೈದ್ಯರು ಸಾವು ; ಮೂವರು ಪಾರು!-ಹೃದಯ ವಿದ್ರಾವಕ ಘಟನೆ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸೇರಿ 6 ಮಂದಿ ಹತ್ಯೆ-ಬೆಂಗಳೂರಿನ ಕಂಬಳಕ್ಕೆ ಹೇಗಿದೆ ತಯಾರಿ; ದಕ್ಷಿಣ ಕನ್ನಡ ಭಾಗದ 150 ಫುಡ್ ಸ್ಟಾಲ್ ಏರ್ಪಾಡು..!-ಪಿಯುಸಿಯಲ್ಲಿ ಅಂಕ ಕಡಿಮೆ ಬಂತೆಂದು ಮನನೊಂದು ಅಪಾರ್ಟ್‌ಮೆಂಟ್‌ನಿಂದ ಜಿಗಿದ ಬಾಲಕಿ ; ರಕ್ಷಣೆಗೆ ಧಾವಿಸಿದ ಯುವಕ - ಇಲ್ಲಿದೆ ವಿಡಿಯೋ-ಬರ್ತ್‌ಡೇ ಪಾರ್ಟಿಯಲ್ಲಿ ಡೆಕೋರೇಷನ್‌ಗೆ ಹಾಕಿದ್ದ ಹೀಲಿಯಂ ಬಲೂನ್‌ ಬ್ಲಾಸ್ಟ್‌ ; ಐವರು ಗಂಭೀರ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬೆಂಗಳೂರಿನಿಂದ ಮುಂಬೈ ಮನೆ ಬಾಗಿಲಿಗೆ ಜೊಮ್ಯಾಟೊ ಮೂಲಕ ಬಿರಿಯಾನಿ ಆರ್ಡರ್ ಮಾಡಿದ ಯುವತಿ!

Twitter
Facebook
LinkedIn
WhatsApp
Biiyani

ಬೆಂಗಳೂರು: ಮುಂಬೈನ ಯುವತಿಯೊಬ್ಬಳು ಶನಿವಾರ ಬೆಂಗಳೂರಿನ ಖ್ಯಾತ ಮೇಘನಾ ಫುಡ್ಸ್‌ನಿಂದ 2,500 ರೂಪಾಯಿ ಮೌಲ್ಯದ ಬಿರಿಯಾನಿ ಆರ್ಡರ್ ಮಾಡಿದ್ದಾರೆ. ಟ್ವಿಟರ್‌ನಲ್ಲಿ ತಾನು ಮದ್ಯದ ನಶೆಯಲ್ಲಿ ನೀಡಿದ ಬಿರಿಯಾನಿ ಆರ್ಡರ್ ಬಗ್ಗೆ subiii ಎಂಬ ಬಳಕೆದಾರರು ಸ್ಕ್ರೀನ್ ಶಾಟ್ ಶೇರ್ ಮಾಡಿದ್ದಾರೆ. ಕುಡಿದ ನಶೆಯಲ್ಲಿ ನಾನು ಬೆಂಗಳೂರಿನಿಂದ 2500 ರೂಪಾಯಿ ಮೌಲ್ಯದ ಬಿರಿಯಾನಿಯನ್ನು ಆರ್ಡರ್ ಮಾಡಿದ್ದೇನೆ ಎಂದು ಸುಭಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಜೊಮ್ಯಾಟೊ, ಸುಭೀ, ಆರ್ಡರ್ ನಿಮ್ಮ ಮನೆ ಬಾಗಿಲಿಗೆ ಬಂದ ನಂತರ ನಿಮ್ಮ ಹ್ಯಾಂಗೋವರ್ ಸಂತೋಷದಾಯಕವಾಗಿರುತ್ತದೆ. ನಿಮ್ಮ ಅನುಭವದ ಬಗ್ಗೆ ಬರೆಯಿರಿ ಎಂದು ಕಾಮೆಂಟಿಸಿದೆ. ಮುಂಬೈಯ ಯುವತಿ ಬೆಂಗಳೂರಿನ ರೆಸ್ಟೋರೆಂಟ್ ನಿಂದ ಫುಡ್ ಆರ್ಡರ್ ಹೇಗೆ ಮಾಡಿದ್ದಾಳೆ ಎಂಬುದು ಎಲ್ಲರಲ್ಲಿ ಕುತೂಹಲ ಹುಟ್ಟಿಸಿದೆ. ಅಂದಹಾಗೆ Zomato Intercity Legends ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡಲು ಪ್ರಸ್ತುತ ಫುಡ್ ಡೆಲಿವರಿ ಫ್ಲಾಟ್ ಫಾರ್ಮ್ ಈ ಅವಕಾಶವನ್ನು ಬಳಸಿಕೊಂಡಿದೆ.

ಜೊಮ್ಯಾಟೊ ಲೆಜೆಂಡ್ಸ್ ಎಂಬುದು Zomato ನ ಹೊಸ ಕೊಡುಗೆಯಾಗಿದ್ದು, ಇದು ಖಾದ್ಯದ ಶೆಲ್ಫ್ ಅವಧಿ ಹೆಚ್ಚಿಸುವ ಮೊಬೈಲ್ ಶೈತ್ಯೀಕರಣ ತಂತ್ರಜ್ಞಾನವನ್ನು ಬಳಸಿಕೊಂಡು ನಗರಗಳಾದ್ಯಂತ ಖ್ಯಾತ ರೆಸ್ಟೋರೆಂಟ್‌ಗಳಿಂದ ಭಾರತದ ಅತ್ಯಂತ ಸಾಂಪ್ರದಾಯಿಕ ಭಕ್ಷ್ಯಗಳ ವಿತರಣೆಯನ್ನು ಖಚಿತಪಡಿಸುತ್ತದೆ. ಅಂದಹಾಗೆ, ಈ ಕೊಡುಗೆಯನ್ನು ಪ್ರಯತ್ನಿಸಲು ಈ ಮಾಹಿತಿಯು ನಿಮಗೆ ಸಹಾಯ ಮಾಡುತ್ತದೆ ಎಂದು ಜೊಮ್ಯಾಟೊ ಹೇಳಿದೆ.

ಈ ಪೋಸ್ಟಿಗೆ ಕಾಮೆಂಟಿಸಿದ ಬಳಕೆದಾರರು ಮೇಘನಾ ಫುಡ್ಸ್‌ನಿಂದ ಆರ್ಡರ್ ಮಾಡಿರುವ ಯುವತಿ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಹೈದರಾಬಾದ್ ಬದಲು ಬೆಂಗಳೂರಿನಿಂದ ಬಿರಿಯಾನಿ ಆರ್ಡರ್ ಮಾಡಿದ ಯುವತಿ “ನಿಜವಾಗಿಯೂ ಕುಡಿದಿದ್ದಾಳೆ” ಎಂದು ನೆಟಿಜನ್ ಒಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದರೆ, ಮತ್ತೊಬ್ಬರು ಕೊಲ್ಕತ್ತಾ ಬಿರಿಯಾನಿ ಬಗ್ಗೆ ಅದೇ ರೀತಿ ಹೇಳಿದರು.

“ಇದರಲ್ಲಿ ನನಗೆ ಯಾವುದೇ ತೊಂದರೆ ಕಾಣಿಸುತ್ತಿಲ್ಲ. ಮೇಘನಾ ಫುಡ್ಸ್ ಅತ್ಯುತ್ತಮವಾದದ್ದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. “ಮೇಘನಾದ ಬಿರಿಯಾನಿಯನ್ನು ನಿಜವಾಗಿಯೂ ಮಿಸ್ ಮಾಡುವ ವ್ಯಕ್ತಿಯಾಗಿ, ನಾನು ಈ ಕುಡುಕರ ನಿರ್ಧಾರವನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ” ಎಂದು ಇನ್ನೊಬ್ಬ ಟ್ವಿಟರ್ ಬಳಕೆದಾರರು ಹೇಳಿದ್ದಾರೆ. ಕುಡಿದ ಮತ್ತಿನಲ್ಲಿ ಮೇಘನಾದಿಂದ ಆರ್ಡರ್ ಮಾಡಿದ್ರಾ? ಅದ್ಭುತವಾದ ಈ ನಿರ್ಧಾರವನ್ನು ನಾನು ಬೆಂಬಲಿಸುತ್ತೇನೆ” ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ. ಇಷ್ಟೆಲ್ಲಾ  ಪ್ರತಿಕ್ರಿಯೆ ಸಿಕ್ಕಿರುವ ಸುಭೀ ಟ್ವೀಟ್ ಈಗ ಡಿಲೀಟ್ ಆಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ