ಗುರುವಾರ, ಫೆಬ್ರವರಿ 22, 2024
ಕುಡಿಬೇಡ ಎಂದು ಬುದ್ಧಿ ಹೇಳಿದಕ್ಕೆ ಯುವಕ ಆತ್ಮಹತ್ಯೆ..!-Suratkal :ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದಾಗಲೇ ಹೃದಯಾಘಾತ; ಯುವಕ ಸಾವು.!-ದೆಹಲಿ ಚಲೋ ಪ್ರತಿಭಟನೆಯಲ್ಲಿ ಓರ್ವ ಯುವ ರೈತ ಸಾವು ; 2 ದಿನಗಳ ಕಾಲ ಪ್ರತಿಭಟನೆ ಸ್ಥಗಿತ.!-Tanya Singh: ಖ್ಯಾತ ಮಾಡೆಲ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ; ಐಪಿಎಲ್ ಸ್ಟಾರ್ ಆಟಗಾರನಿಗೆ ನೋಟಿಸ್.!-ಡಾಲಿ ಧನಂಜಯ್: ಲೋಕಸಭೆ ಚುನಾವಣಾ ಸ್ಪರ್ಧೆ ಬಗ್ಗೆ ನಟ ಡಾಲಿ ಧನಂಜಯ್ ಪ್ರತಿಕ್ರಿಯೆ ಏನು?-ಪುತ್ತೂರು: ಟಿಪ್ಪರ್ ಮತ್ತು ಬೈಕ್ ನಡುವೆ ಅಪಘಾತ ; ಚಿಕಿತ್ಸೆ ಫಲಿಸದೆ ಯುವಕ ಸಾವು!-Gold Rate Today : ಸತತ ಇಳಿಕೆ ಕಂಡಿದ್ದ ಚಿನ್ನದ ದರ ಮತ್ತೆ ಏರಿಕೆಯತ್ತ..!-IPL 2024: ಇಂದು ಐಪಿಎಲ್ 2024 ವೇಳಾಪಟ್ಟಿ ಪ್ರಕಟ; ಫೈನಲ್ ಪಂದ್ಯ ಯಾವಾಗ?-ಬೆಡ್​ರೂಮ್​ಗೆ ನುಗ್ಗಿದ ಅಪರಿಚಿತನನ್ನು ಕೊಂದು ಪೊಲೀಸರಿಗೆ ಶರಣಾದ ವ್ಯಕ್ತಿ..!-ತನ್ನ ಬಗ್ಗೆ ಸುಳ್ಳು ಸುದ್ದಿಯ ಗ್ರಾಫಿಕ್ ಸೃಷ್ಟಿ ಮಾಡಿದವರ ವಿರುದ್ಧ ಕಾನೂನು ಕ್ರಮ - ಮಡಿಕೇರಿ ಶಾಸಕ ಡಾ.ಮಂತರ್‌ ಗೌಡ ಸ್ಪಷ್ಟನೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬಿಹಾರದ ಜನಶಕ್ತಿ ಪಕ್ಷದ ಬಂಡಾಯ ದಲ್ಲಿ ಸಿಎಂ ನಿತೀಶ್ ಕುಮಾರ್ ಕೈವಾಡ?

Twitter
Facebook
LinkedIn
WhatsApp
ಬಿಹಾರದ ಜನಶಕ್ತಿ ಪಕ್ಷದ ಬಂಡಾಯ ದಲ್ಲಿ ಸಿಎಂ ನಿತೀಶ್ ಕುಮಾರ್ ಕೈವಾಡ?

ಪಟ್ನಾ:ಬಿಹಾರದ ಪ್ರದೇಶಕ ಪಕ್ಷವಾದ ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ)ದಲ್ಲಿ ಭಿನ್ನಮತಗಳು ಭುಗಿಲೆದ್ದಿವೆ. ಪಕ್ಷದ ನಾಯಕತ್ವದ ಬದಲಾವಣೆಗೆ ಎಲ್‌ಜಿಪಿಯ ಆರು ಲೋಕಸಭಾ ಸಂಸದರ ಪೈಕಿ ಐವರು ಸಂಸದರು ಒತ್ತಾಯಿಸಿದ್ದಾರೆ. ಪ್ರಸ್ತುತ ಚಿರಾಗ್‌ ಪಾಸ್ವಾನ್‌ ಪಕ್ಷದ ನಾಯಕರಾಗಿದ್ದು, ಬಂಡಾಯ ಎದ್ದಿರುವ ಸಂಸದರು ಪಾಸ್ವಾನ್‌ ಅವರ ಚಿಕ್ಕಪ್ಪ, ಸಂಸದ ಪಶುಪತಿ ಕುಮಾರ್ ಪರಾಸ್ ಅವರನ್ನು ಎಲ್‌‌ಜೆಪಿಯ ಹೊಸ ಅಧ್ಯಕ್ಷರನ್ನಾಗಿ ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ.
ಚಿರಾಗ್‌ ಪಾಸ್ವಾನ್‌ ನಾಯಕತ್ವದ ವಿರುದ್ದ ಬಂಡಾಯ ಎದ್ದಿರುವ ಸಂಸದರಲ್ಲಿ ಪರಾಸ್‌ ಕೂಡ ಒಬ್ಬರಾಗಿದ್ದಾರೆ. ಪಕ್ಷವನ್ನು ಉಳಿಸಲು ಮತ್ತು ಎಲ್‌ಜೆಪಿಯನ್ನು ಕಟ್ಟಿದ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರ ರಾಜಕೀಯ ಸಿದ್ಧಾಂತಗಳನ್ನು ಮುಂದುವರೆಸಲು ತಮಗೆ ನಾಯಕತ್ವವನ್ನು ಕೊಡಬೇಕು ಎಂದು ಪರಾಸ್‌ ಅವರು ಆಗ್ರಹಿಸಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎಲ್‌ಜೆಪಿ ತೀವ್ರ ಹಿನ್ನಡೆ ಅನುಭವಿಸಿತು. ನಾನು ಪಕ್ಷವನ್ನು ಪುನರುಜ್ಜೀವನಗೊಳಿಸುತ್ತೇನೆ ಮತ್ತು ಈ ಮೂಲಕ ಪಕ್ಷದ ಸಂಸ್ಥಾಪಕರ ಆತ್ಮಕ್ಕೆ ಶಾಂತಿ ಒದಗಿಸಲು ಪ್ರಯತ್ನಿಸುತ್ತೇನೆ ಎಂದು ಅವರು ಹೇಳಿದ್ದಾರೆ.ಮೂಲಗಳ ಪ್ರಕಾರ, ಹೊಸ ನಾಯಕತ್ವದೊಂದಿಗೆ ಹೊಸ ಪಕ್ಷದ ರಚನೆಯನ್ನು ಭಾನುವಾರ ಸಂಜೆ ನವದೆಹಲಿಯಲ್ಲಿ ಪರಾಸ್ ನಿವಾಸದಲ್ಲಿ ನಿರ್ಧರಿಸಲಾಯಿತು. ಐವರು ಸಂಸದರೊಂದಿಗೆ ಎಲ್‌ಜೆಪಿಯ ಹೊಸ ಬಣವನ್ನು ರಚಿಸುವ ಈ ನಿರ್ಧಾರದ ಬಗ್ಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ತಿಳಿಸಲಾಯಿತು. ಚಿರಾಗ್‌ ಪಾಸ್ವಾನ್ ಅವರು ಪಕ್ಷದ ಹಿರಿಯರನ್ನು ಹಿನ್ನಲೆಗೆ ತಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದ್ದು, ಇದು ಪಕ್ಷದ ನಾಯಕರಿಗೆ ಸಾಕಷ್ಟು ಅಸಮಾಧಾನವನ್ನುಂಟು ಮಾಡಿದೆ.

ಲೋಕಸಭಾ ಸ್ಪೀಕರ್ ಅನುಮೋದನೆಯ ನಂತರ ಸೋಮವಾರ ನವದೆಹಲಿಯಲ್ಲಿ ಈ ನಾಯಕತ್ವದ ಬೆಳವಣಿಗೆಯ ಕುರಿತು ಔಪಚಾರಿಕ ಪ್ರಕಟಣೆ ಘೋಷಣೆಯಾಗುವ ಸಾಧ್ಯತೆ ಇದೆ. ಪರಾಸ್‌ ಅವರು ಇತ್ತೀಚೆಗೆ ಸಿಎಂ ನಿತೀಶ್ ಕುಮಾರ್ ಅವರನ್ನು ಉತ್ತಮ ಆಡಳಿತಗಾರ ಎಂದು ಶ್ಲಾಘಿಸಿದ್ದರು. ಇದರ ನಂತರ ಬಿಹಾರದ ರಾಜಕೀಯ ವಲಯ ಹೊಸ ಸಂಚಲನ ಮೂಡಿಸಿವೆ.
ಸಂಸದರಾದ ಪ್ರಿನ್ಸ್ ರಾಜ್, ಚಂದನ್ ಸಿಂಗ್, ವೀಣಾ ದೇವಿ ಮತ್ತು ಮೆಹಬೂಬ್ ಅಲಿ ಕೈಸರ್ ಅವರನ್ನೊಳಗೊಂಡ ಬಂಡಾಯ ಗುಂಪು ಚಿರಾಗ್ ಪಾಸ್ವಾನ್ ಅವರ ಕಾರ್ಯವೈಖರಿಯ ಬಗ್ಗೆ ಬಹಳ ದಿನಗಳಿಂದ ಅಸಮಾಧಾನ ವ್ಯಕ್ತಪಡಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ಪಕ್ಷದ ವಿಭಜನೆಗೆ ಜೆಡಿಯು ಕಾರಣ ಎಂದು ಕೂಡಾ ಚಿರಾಗ್‌ ಪಾಸ್ವಾನ್‌ ಆಪ್ತರು ಆರೋಪಿಸಿದ್ದಾರೆ. 2020 ರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್‌‌ ನೇತೃತ್ವದ ಆಡಳಿತ ಪಕ್ಷದ ವಿರುದ್ದ ಸ್ಪರ್ಧಿಸಿ ಪಕ್ಷದ ಹಲವು ಸ್ಥಾನಗಳು ಕಳೆದುಕೊಳ್ಳಲು ಚಿರಾಗ್‌ ಕಾರಣವಾಗಿದ್ದರು. ಜೆಡಿಯುಗೆ ತೀವ್ರ ಹಾನಿ ಮಾಡಿರುವ ಚಿರಾಗ್‌ ಅವರನ್ನು ಏಕಾಂಗಿಯಾಗಿಸಲು ನಿತೀಶ್ ಕುಮಾರ್‌ ಅವರ ಪಕ್ಷವು ಬಹಳ ಹಿಂದಿನಿಂಲೂ ಪ್ರಯತ್ನಿಸುತ್ತಿದೆ ಎಂದು ಹೇಳಲಾಗಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು