ಗುರುವಾರ, ಫೆಬ್ರವರಿ 22, 2024
ಕುಡಿಬೇಡ ಎಂದು ಬುದ್ಧಿ ಹೇಳಿದಕ್ಕೆ ಯುವಕ ಆತ್ಮಹತ್ಯೆ..!-Suratkal :ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದಾಗಲೇ ಹೃದಯಾಘಾತ; ಯುವಕ ಸಾವು.!-ದೆಹಲಿ ಚಲೋ ಪ್ರತಿಭಟನೆಯಲ್ಲಿ ಓರ್ವ ಯುವ ರೈತ ಸಾವು ; 2 ದಿನಗಳ ಕಾಲ ಪ್ರತಿಭಟನೆ ಸ್ಥಗಿತ.!-Tanya Singh: ಖ್ಯಾತ ಮಾಡೆಲ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ; ಐಪಿಎಲ್ ಸ್ಟಾರ್ ಆಟಗಾರನಿಗೆ ನೋಟಿಸ್.!-ಡಾಲಿ ಧನಂಜಯ್: ಲೋಕಸಭೆ ಚುನಾವಣಾ ಸ್ಪರ್ಧೆ ಬಗ್ಗೆ ನಟ ಡಾಲಿ ಧನಂಜಯ್ ಪ್ರತಿಕ್ರಿಯೆ ಏನು?-ಪುತ್ತೂರು: ಟಿಪ್ಪರ್ ಮತ್ತು ಬೈಕ್ ನಡುವೆ ಅಪಘಾತ ; ಚಿಕಿತ್ಸೆ ಫಲಿಸದೆ ಯುವಕ ಸಾವು!-Gold Rate Today : ಸತತ ಇಳಿಕೆ ಕಂಡಿದ್ದ ಚಿನ್ನದ ದರ ಮತ್ತೆ ಏರಿಕೆಯತ್ತ..!-IPL 2024: ಇಂದು ಐಪಿಎಲ್ 2024 ವೇಳಾಪಟ್ಟಿ ಪ್ರಕಟ; ಫೈನಲ್ ಪಂದ್ಯ ಯಾವಾಗ?-ಬೆಡ್​ರೂಮ್​ಗೆ ನುಗ್ಗಿದ ಅಪರಿಚಿತನನ್ನು ಕೊಂದು ಪೊಲೀಸರಿಗೆ ಶರಣಾದ ವ್ಯಕ್ತಿ..!-ತನ್ನ ಬಗ್ಗೆ ಸುಳ್ಳು ಸುದ್ದಿಯ ಗ್ರಾಫಿಕ್ ಸೃಷ್ಟಿ ಮಾಡಿದವರ ವಿರುದ್ಧ ಕಾನೂನು ಕ್ರಮ - ಮಡಿಕೇರಿ ಶಾಸಕ ಡಾ.ಮಂತರ್‌ ಗೌಡ ಸ್ಪಷ್ಟನೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬಿಹಾರದಲ್ಲಿ ಬಿಜೆಪಿ ವಿರುದ್ದ ಹೊಸ ಮೈತ್ರಿ ಆರಂಭದ ಸೂಚನೆ. ಚಿರಾಗ್‌ ಪಾಸ್ವಾನ್‌ – ಆರ್‌ಜೆಡಿ ನಾಯಕರ ಭೇಟಿ!

Twitter
Facebook
LinkedIn
WhatsApp
ಬಿಹಾರದಲ್ಲಿ ಬಿಜೆಪಿ ವಿರುದ್ದ ಹೊಸ ಮೈತ್ರಿ ಆರಂಭದ ಸೂಚನೆ. ಚಿರಾಗ್‌ ಪಾಸ್ವಾನ್‌ – ಆರ್‌ಜೆಡಿ ನಾಯಕರ ಭೇಟಿ!

ಪಾಟ್ನಾ:ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಮುಗಿದ ಒಂದು ವರ್ಷವೇ ಕಳೆದಿದೆ. ಆದರೂ, ಅಲ್ಲಿನ ರಾಜಕೀಯ ವಿದ್ಯಾಮಾನಗಳು ದೇಶದ ಗಮನ ಸೆಳೆಯುತ್ತಲೇ ಇವೆ. ಅಲ್ಲಿನ ಆಡಳಿತಾರೂಢ ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರದ ವಿರುದ್ದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮತ್ತು ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ)ಗಳು ಹೊಸ ಮೈತ್ರಿ ಮಾಡಿಕೊಳ್ಳಲು ಮುಂದಾಗಿವೆ ಎಂದು ಹೇಳಲಾಗಿದೆ. ಈ ಮಧ್ಯೆ, ಆರ್‌ಜೆಡಿ ಪಕ್ಷದ ನಾಯಕ  ಶ್ಯಾಮ್‌ ರಜಾಕ್‌ ಅವರು ಎಲ್‌ಜೆಪಿ ನಾಯಕ ಚಿರಾಗ್‌ ಪಾಸ್ವಾನ್‌ ಭೇಟಿ ಮಾಡಿದ್ದಾರೆ.
ತಮ್ಮ ಭೇಟಿಯ ಬಗ್ಗೆ ಮಾತನಾಡಿರುವ ರಜಾಕ್‌ ಅವರು, ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ಮೈತ್ರಿಕೂಟ ಮಾಡಿಕೊಳ್ಳುವ ಅಗತ್ಯವಿದೆ. ಈ ಬಗ್ಗೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ಮಾತನಾಡಲಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಈ ಹಿಂದೆ ಬಿಹಾರ ಸಿಎಂ, ಜೆಡಿಯು ನಾಯಕ ನಿತೀಶ್‌ ಕುಮಾರ್‌ ಅವರ ಆಪ್ತ ಸಹಾಯಕರಾಗಿದ್ದ ರಜಾಕ್‌, ಈಗ ಆರ್‌ಜೆಡಿಯಲ್ಲಿದ್ದಾರೆ. ಬಿಜೆಪಿಯಿಂದ ತೇಜೋವಧೆಗೊಳಗಾಗಿದ್ದ ಇವರ ರಾಜಕೀಯ ನೆಲೆಯೂ ಅಲುಗಾಡಿತ್ತು. ಇದೀಗ ತಮ್ಮ ನೆಲೆಯನ್ನು ಭದ್ರಮಾಡಿಕೊಳ್ಳಲು ಮುಂದಾಗಿರುವ ರಜಾಕ್‌, ಎಲ್‌ಜೆಪಿ ನಾಯಕರನ್ನು ಭೇಟಿ ಮಾಡಿ, ಆರ್‌ಜೆಡಿ ಮತ್ತು ಎಲ್‌ಜೆಪಿ ಮೈತ್ರಿಯ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ.
ಪಾಸ್ವಾನ್ ಅವರ ಚಿಕ್ಕಪ್ಪ ಪಶುಪತಿ ಕುಮಾರ್ ಪಾರಸ್ ಮತ್ತು ನಾಲ್ವರು ಎಲ್‌ಜೆಪಿ ಸಂಸದರು ಲೋಕಸಭೆಯಲ್ಲಿ ಬಿಜೆಪಿಗೆ ಬಂಬಲ ಘೋಷಿಸಿದ್ದಾರೆ. ಇದರಿಂದಾಗಿ ಪಾರಸ್‌ ಅವರಗೆ ಮೋದಿ ಕ್ಯಾಬಿನೆಟ್‌ನಲ್ಲಿ ಸಚಿವ ಸ್ಥಾನವೂ ದೊರೆತಿದೆ. ಅಲ್ಲದೆ, ಎಲ್‌ಜೆಪಿಗೆ ತಾವೇ ನಾಯಕ ಎಂದು ಪಾರಸ್‌ ಹೇಳಿಕೊಂಡಿದ್ದು, ಇದು ಚಿರಾಗ್‌ ಪಾಸ್ವಾನ್‌ ಅವರ ಕೆಂಗಣ್ಣಿಗೆ ಗುರಿಯಾಗಿದೆ. 

ಹೀಗಾಗಿ ಬಿಜೆಪಿ ವಿರುದ್ದ ಪಾಸ್ವಾನ್‌ ಸಿಟ್ಟಾಗಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಆರ್‌ಜೆಡಿ ನಾಯಕರು ಚಿರಾಗ್ ಪಾಸ್ವಾನ್ ಅವರನ್ನು ಬೆಂಬಲಿಸಿ ಮಾತನಾಡುತ್ತಿದ್ದು, ಬಿಹಾರದಲ್ಲಿ ಪ್ರತಿಪಕ್ಷಗಳ ಮೈತ್ರಿಕೂಟದೊಂದಿಗೆ ಕೈಜೋಡಿಸುವಂತೆ ಒತ್ತಾಯಿಸುತ್ತಿದ್ದಾರೆ. ಸದ್ಯ ಪಾಸ್ವಾನ್ ಅವರೊಂದಿಗೆ ಯಾವುದೇ ಶಾಸಕರು ಇಲ್ಲದಿದ್ದರೂ ಕೂಡ, ಬಿಜೆಪಿಯೊಂದಿಗಿನ ಸಂಬಂಧವನ್ನು ಕಡಿದುಕೊಂಡು ಪ್ರತಿಪಕ್ಷಗಳ ಬಣಕ್ಕೆ ಸೇರುವ ಪಾಸ್ವಾನ್ ಅವರ ನಿರ್ಧಾರದಿಂದ ವಿಪಕ್ಷಗಳಿಗೆ ಪ್ರಯೋಜನವಾಗಲಿದೆ ಎನ್ನಲಾಗುತ್ತಿದೆ.
ದಲಿತ ಮತ್ತು ಹಿಂದುಳಿದ ಜಾತಿಗಳ ಹಿತಾಸಕ್ತಿಗಳಿಗಾಗಿ ಬಿಜೆಪಿ ವಿರೋಧಿ ಮೈತ್ರಿ ಕಟ್ಟುವ ಅವಶ್ಯಕತೆಯಿದೆ ಎಂದು ಆರ್‌ಜೆಡಿ ಮುಖಂಡ ರಜಾಕ್‌ ಹೇಳಿದ್ದಾರೆ. ಆದಾಗ್ಯೂ, ತಮ್ಮ ಪಕ್ಷವನ್ನು ಬಲಪಡಿಸುವುದೇ ತಮ್ಮ ಮುಂದಿರುವ ಸದ್ಯದ ಗುರಿ ಎಂದಿರುವ ಪಾಸ್ವಾನ್, ಈ ಉದ್ದೇಶಕ್ಕಾಗಿಯೇ ರಾಜ್ಯದಲ್ಲಿ ‘ಆಶಿರ್ವಾದ್ ಯಾತ್ರೆ’ಯನ್ನು ಪ್ರಾರಂಭಿಸಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು