ಭಾನುವಾರ, ಮಾರ್ಚ್ 26, 2023
ಇಂದು ಮಹಿಳಾ ಪ್ರೀಮಿಯರ್ ಲೀಗ್ ಫೈನಲ್; ಮುಂಬೈ vs ಡೆಲ್ಲಿ ಫೈನಲ್ ಫೈಟ್-ಬಂಟ್ವಾಳ: ಸರಕಾರಿ ಬಸ್ಸಿನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ- ಕಂಡಕ್ಟರ್‌ ಅರೆಸ್ಟ್-ರಾಹುಲ್ ಗಾಂಧಿಯನ್ನು "ಹುತಾತ್ಮನ ಮಗ" ಎಂದು ಕರೆದ ಪ್ರಿಯಾಂಕಾ ಗಾಂಧಿ ವಾದ್ರಾ-ಉತ್ತರಾಖಂಡ್:‌ ಸಿಡಿಲು ಬಡಿದು 350 ಕ್ಕೂ ಹೆಚ್ಚು ಕುರಿ, ಮೇಕೆಗಳು ಮೃತ್ಯು!-Redmi Note 12 Turbo: ಮೊಬೈಲ್ ಪ್ರಿಯರ ನಿದ್ದೆ ಕದ್ದಿರುವ "ರೆಡ್ಮಿ ನೋಟ್ 12 ಟರ್ಬೋ" ಮಾರ್ಚ್ 28 ರಂದು ಬಿಡುಗಡೆ-ಇಸ್ರೋ ಮತ್ತೊಂದು ಮೈಲಿಗಲ್ಲು; 36 ಉಪಗ್ರಹಗಳ ಯಶಸ್ವಿ ಉಡಾವಣೆ-ಭವಿಷ್ಯ ಹೇಳುತ್ತಿದ್ದ ಸ್ನೇಹಿತನಿಗೆ ಕಲ್ಲಿನಿಂದ ಹೊಡೆದು ಹತ್ಯೆ-ಟೀಂ ಇಂಡಿಯಾದಲ್ಲಿ ಮತ್ತೆ `ಸೂರ್ಯʼ ಉದಯಿಸುತ್ತೆ – ಮಿಸ್ಟರ್‌ 360ಗೆ ಯುವರಾಜ್‌ ಸಿಂಗ್‌ ಬೆಂಬಲ-ಪಂತ್ ಬಗ್ಗೆ ಪ್ರಶ್ನಿಸಿದಕ್ಕೆ ಗರಂ ಆದ ನಟಿ ಊರ್ವಶಿ; ವಿಡಿಯೋ ವೈರಲ್-ಕನ್ನಡದಲ್ಲೇ ಮೆಡಿಕಲ್, ಇಂಜಿನಿಯರಿಂಗ್ ಶಿಕ್ಷಣ ಸಿಗಲಿದೆ: ಮೋದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಬಿಜೆಪಿ ಪಕ್ಷಕ್ಕೆ ಬೆಂಬಲ ಘೋಷಿಸಿದ ಮಾಜಿ ಸಂಸದ ಎಲ್​ಆರ್ ಶಿವರಾಮೇಗೌಡ

Twitter
Facebook
LinkedIn
WhatsApp
ಬಿಜೆಪಿ ಪಕ್ಷಕ್ಕೆ ಬೆಂಬಲ ಘೋಷಿಸಿದ ಮಾಜಿ ಸಂಸದ ಎಲ್​ಆರ್ ಶಿವರಾಮೇಗೌಡ

ಬೆಂಗಳೂರು: ಸಂಸದೆ ಸುಮಲತಾ ಬಿಜೆಪಿಗೆ ಬೆಂಬಲ ಘೋಷಣೆ ಬೆನ್ನಲ್ಲೇ ಮಾಜಿ ಸಂಸದ ಎಲ್​ಆರ್ ಶಿವರಾಮೇಗೌಡ ಅವರು ಬಿಜೆಪಿ ಪಕ್ಷಕ್ಕೆ ಬೆಂಬಲ ಘೋಷಿಸಿದ್ದಾರೆ. ಬೆಂಗಳೂರಿನ ನಾಗಮಂಗಲ ನಿವಾಸಿಗಳ ಸಮಾವೇಶದಲ್ಲಿ ಸಚಿವ ಮುನಿರತ್ನ ಸಮ್ಮುಖದಲ್ಲಿ ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಶೀಘ್ರದಲ್ಲೇ ಅಧಿಕೃತವಾಗಿ ಶಿವರಾಮೇಗೌಡ ಬಿಜೆಪಿ ಸೇರ್ಪಡೆ ಆಗಲಿದ್ದಾರೆ.

ಇನ್ನು ಇದೇ ವೇಳೆ ಮಾತನಾಡಿದ ಮಾಜಿ ಸಂಸದ ಶಿವರಾಮೇಗೌಡ, ನಾಗಮಂಗಲ ಬಿಜೆಪಿಯಿಂದ ದೂರ ಉಳಿದಿತ್ತು. ನಾಗಮಂಗಲಕ್ಕೆ ಬಿಜೆಪಿ ಅತ್ಯಗತ್ಯವಾಗಿ ಬೇಕು. ಬಿಜೆಪಿ ಪಕ್ಷ ಈ ರಾಜ್ಯಕ್ಕೆ, ರಾಷ್ಟ್ರಕ್ಕೆ ಬೇಕು. ಬಿಎಸ್​ ಯಡಿಯೂರಪ್ಪ ಸಿಎಂ ಇದ್ದಾಗ ನನಗೆ ಲೋಕಸಭೆಗೆ ಬಿ ಫಾರಂ ಕೊಟ್ಟಿದ್ದರು. 1.67 ಮತ ಪಡೆದು ಆಗ ನಾನು ಸೋತೆ. ಬಳಿಕ ‌ನಾನು ಜೆಡಿಎಸ್​ಗೆ ಬಂದೆ ಜೆಡಿಎಸ್ ನಲ್ಲಿ ನನ್ನನ್ನು ಬಳಸಿಕೊಂಡರು. ಹೆಚ್​ಡಿ ದೇವೇಗೌಡರು, ಹೆಚ್​ಡಿ ಕುಮಾರಸ್ವಾಮಿ ಅವರು ನನ್ನನ್ನು ಬಳಸಿಕೊಂಡರು ಎಂದು ಶಿವರಾಮೇಗೌಡ ಅಸಮಾಧಾನ ಹೊರ ಹಾಕಿದ್ದಾರೆ.

ಈ ದೇಶವನ್ನು ಕಳಂಕರಹಿತವಾಗಿ ಮೋದಿಯವರು ಆಳ್ತಿದಾರೆ. ಮಂಡ್ಯದಲ್ಲಿ ಬಿಜೆಪಿ ಬೇರೂರಬೇಕು. ಮಂಡ್ಯದಲ್ಲಿ ಕಮಲ ಅರಳಿಸಬೇಕು. ನನ್ನನ್ನೂ ಬಿಜೆಪಿಯಿಂದ ಆಹ್ವಾನಿಸಲಾಗಿದೆ. ಸುಮಲತಾ ಅವರೂ ಬಿಜೆಪಿಗೆ ಬೆಂಬಲ ಕೊಟ್ಟಿದ್ದಾರೆ. ಮಂಡ್ಯದಲ್ಲಿ ನಾಗಮಂಗಲ ಸೇರಿ ಏಳೂ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಿಸ್ತೇವೆ. ಮುನಿರತ್ನ ಸೋಲಿಲ್ಲದ ಸರದಾರ. ಮುಂದಿನ 20 ವರ್ಷ ಮುನಿರತ್ನರನ್ನು ಸೋಲಿಸೋ ಗಂಡು ಹುಟ್ಟಲ್ಲ. ನಾನು ಸಿದ್ದರಾಮಯ್ಯ, ಕುಮಾರಸ್ವಾಮಿ ಆಳ್ವಿಕೆ ನೋಡಿದವನು. ನಾಗಮಂಗಲದ ಜನರ ಮತ ಕೇಳುವ ಹಕ್ಕು ಚೆಲುವರಾಯಸ್ವಾಮಿ, ಸುರೇಶ್ ಗೌಡರಿಗೆ ಇಲ್ಲ. ನಾನು ಬಿಜೆಪಿ ಸೇರುತ್ತೇನೆ ಎಂದು ಶಿವರಾಮೇಗೌಡ ಘೋಷಿಸಿದರು.

ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರು ಮಾಜಿ ಸಂಸದ ಜಿ.ಮಾದೇಗೌಡ ಅವರ ಬಗ್ಗೆ ಲಘುವಾಗಿ ಮಾತನಾಡಿ ಜೆಡಿಎಸ್‌ನಿಂದ ಉಚ್ಚಾಟನೆಗೊಂಡಿದ್ದರು. ಉಚ್ಚಾಟನೆಗೊಂಡ ಒಂದು ವರ್ಷದ ಬಳಿಕ ಬಿಜೆಪಿ ಪಕ್ಷಕ್ಕೆ ಬೆಂಬಲ ಘೋಷಿಸಿ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ