
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
ಬರ್ಮುಡಾ ಟ್ರಯಾಂಗಲ್ ಎಂಬ ನಿಗೂಢ ಪ್ರದೇಶ ಇಂದಿಗೂ ವಿಜ್ಞಾನಿಗಳಿಗೆ, ತಜ್ಞರಿಗೆ, ಸಾಹಸಪ್ರಿಯರಿಗೆ ನಿಗೂಢವಾಗಿಯೇ ಉಳಿದಿದೆ. ಅಟ್ಲಾಂಟಿಕ್ ಸಮುದ್ರದಲ್ಲಿ ಇರುವಂತಹ ನಿಗೂಢ ಸಮುದ್ರದ ಪ್ರದೇಶ ಇವತ್ತಿಗೂ ಭೇದಿಸಲಾಗದ ಒಂದು ದೊಡ್ಡ ಯಕ್ಷಪ್ರಶ್ನೆಯಾಗಿ ಉಳಿದಿದೆ.
ಹಲವಾರು ಹಡಗುಗಳು, ವಿಮಾನಗಳು ಈ ಟ್ರಯಾಂಗಲ್ ನ ಗರ್ಭದಲ್ಲಿ ಹೂತು ಹೋಗಿವೆ. ಯಾವುದಕ್ಕೂ ಸಿಗದೆ ಇಂದಿಗೂ ನಿಗೂಢವಾಗಿಯೇ ಉಳಿದಿದೆ. ಮಿಯಾಮಿ ,ಬರ್ಮುಡಾ, ಪುಟ್ ರಿಕೋ ಪ್ರದೇಶದಲ್ಲಿ ಬರುವ ಇಲ್ಲಿ ಹಲವಾರು ಹಡಗುಗಳು ನಾಪತ್ತೆಯಾಗಿ ಉಳಿದಿವೆ. ಸುಮಾರು 50000 ಸ್ಕ್ವೇರ್ ಮೈಲ್ಸ್ ಉದ್ದವಾಗಿರುವ ಉದ್ದ ಮತ್ತು ಅಗಲವಾಗಿರುವ ಈ ಪ್ರದೇಶ ವಿಸ್ಮಯಗಳ ಗೂಡಾಗಿದೆ.
ಈ ಟ್ರಯಾಂಗಲ್ ಕುರಿತಾಗಿ ವಿವಿಧ ವಾದಗಳು ಹುಟ್ಟಿಕೊಂಡಿವೆ. ಸಮುದ್ರದ ಸುಳಿಯಲ್ಲಿ ಸಿಲುಕುವ ಹಡಗು ಮತ್ತು ವಿಮಾನಗಳು ತನ್ನ ಒಡಲಿಗೆ ಅದನ್ನು ಎಳೆದುಕೊಳ್ಳುತ್ತವೆ ಎಂಬ ಒಂದು ವಾದವಾದರೆ, ಇನ್ನೊಂದು ವಾದದ ಪ್ರಕಾರ ಅತಿಮಾನುಷ ಶಕ್ತಿ ಇಲ್ಲಿದೆ ಎನ್ನುತ್ತಾರೆ.
ಸತತವಾಗಿ ಇದರ ಬಗ್ಗೆ ಸಂಶೋಧನೆ ನಡೆಸಲಾಗಿದ್ದು, ಇದುವರೆಗೆ ಯಾವುದೇ ಸ್ಪಷ್ಟ ಫಲಿತಾಂಶಗಳು ಹೊರ ಬಂದಿಲ್ಲ. ಇದುವರೆಗೆ ಸುಮಾರು 50 ಕ್ಕಿಂತಲೂ ಅಧಿಕ ಹಡಗುಗಳು, ಇಪ್ಪತ್ತಕ್ಕಿಂತ ಅಧಿಕ ವಿಮಾನಗಳು ಈ ಟ್ರೈಯಾಂಗಲ್ ಗರ್ಭದೊಳಗೆ ಸೇರಿಹೋಗಿವೆ.
ಕಡಿಮೆ ರೇಡಿಯೋ ಫ್ರೀಕ್ವೆನ್ಸಿ ಯನ್ನು ಹೊಂದಿರುವ ಪ್ರದೇಶ ಎಂದು ಒಂದು ಅಂದಾಜು ಹೇಳುತ್ತದೆ. ಇನ್ನೊಂದು ವಾದದ ಪ್ರಕಾರ ಇಲ್ಲಿ ಚಲಿಸಲು ವಾತಾವರಣ ಸರಿಯಾಗಿಲ್ಲ ಎನ್ನುತ್ತದೆ. ಅದು ಇದುವರೆಗೆ ಕಾಣೆಯಾದ ಯಾವುದೇ ಹಡಗುಗಳು ಮತ್ತು ವಿಮಾನಗಳು ಯಾರಿಗೂ ಸಿಕ್ಕಿಲ್ಲ.
ಇನ್ನೊಂದು ವಾದದ ಪ್ರಕಾರ ಅತಿ ಹೆಚ್ಚು ಗ್ರವಿಟಿ ಶಕ್ತಿಯನ್ನು ಈ ಪ್ರದೇಶ ಹೊಂದಿದೆ ಎನ್ನಲಾಗುತ್ತಿದೆ. ಇದರಿಂದ ಈ ಪ್ರದೇಶ ಅದನ್ನು ಒಳಗೆ ಸೆಳೆದುಕೊಳ್ಳುತ್ತದೆ ಎಂದು ವಾದಿಸಲಾಗುತ್ತಿದೆ. ಆದರೆ ವಾದವೇನು ಇದ್ದರು ಇದುವರೆಗೆ ಯಾವುದೇ ಸಂಪೂರ್ಣ ವಾದಂತಹ ತೀರ್ಮಾನಕ್ಕೆ ಬರಲಾಗಿಲ್ಲ.
ಈ ಕೌತುಕ ದ ಜಗತ್ತಿನಲ್ಲಿ ಬರ್ಮುಡಾ ಟ್ರಯಾಂಗಲ್ ಇದುವರೆಗೆ ನಿಗೂಢವಾಗಿಯೇ ಉಳಿದಿದೆ.
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
108MP ಕ್ಯಾಮೆರಾದ ಗ್ಯಾಲಕ್ಸಿ F54 5G ಅನಾವರಣ ಮಾಡಿದ ಸ್ಯಾಮ್ಸಂಗ್