ಗುರುವಾರ, ಜುಲೈ 25, 2024
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಂಗಳೂರಿನ ಶ್ರೀಯುತ ಮೋಹನ್ ಶೆಟ್ಟಿ ವಿಧಿವಶ-Anandpur: ಮದುವೆಯಾಗುವಂತೆ ಪೀಡಿಸುತ್ತಿದ್ದಾಳೆಂದು ಪ್ರೇಯಸಿ ಕೊಲೆ ಮಾಡಿದ ಪ್ರಿಯಕರ-ಮುಡಾ ಸೈಟ್ ಕೋಲಾಹಲ: ಬಿಜೆಪಿ ಶಾಸಕರಿಂದ ಸದನದಲ್ಲಿ ಶ್ರೀರಾಮನ ಭಜನೆ-Shiroor: ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಟ್ರಕ್ ಗಂಗಾವಳಿ ನದಿಯಲ್ಲಿ ಪತ್ತೆ-Ladies PG: ಬೆಂಗಳೂರಿನಲ್ಲಿ ಲೇಡಿಸ್ ಪಿಜಿಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ!-ಕಾಂಗ್ರೆಸ್​ ಹಿರಿಯ ನಾಯಕ ಮರಿಗೌಡ ಪಾಟೀಲ್ ಹುಲ್ಕಲ್ ನಿಧನ-Shimoga: ರಸ್ತೆ ಅಪಘಾತ; ಶಿವಮೊಗ್ಗ ಧರ್ಮಪ್ರಾಂತ್ಯದ ಫಾ.ಆಂಟನಿ ಪೀಟರ್ ಇನ್ನಿಲ್ಲ-Mudra loan: ಮುದ್ರಾ ಸಾಲದ ಮಿತಿ 10 ಲಕ್ಷದಿಂದ 20 ಲಕ್ಷ ರೂಗೆ ಏರಿಕೆ; ಉದ್ದಿಮೆದಾರರಿಗೆ ಉತ್ತೇಜನ-Gold Rate: ಬಜೆಟ್‌ ಬೆನ್ನಲ್ಲೇ ಚಿನ್ನ, ಬೆಳ್ಳಿ ದರ ದಿಢೀರ್‌ ಇಳಿಕೆ-Sanket: ಮಹಿಳಾ ನಿರ್ದೇಶಕಿಯ ಅದ್ಭುತ ನಿರ್ದೇಶನ, ಅಂತರಾಷ್ಟ್ರೀಯ ಮಟ್ಟದ ಬಿಜಿಎಂ, ಕಲಾವಿದರ ಅದ್ಭುತ ಅಭಿನಯ ದಿಂದ ಮನಸೂರೆಗೊಂಡಿರುವ ಕನ್ನಡ ಚಲನಚಿತ್ರ ಸಾಂಕೇತ್ ಜುಲೈ 26ಕ್ಕೆ ಬಿಡುಗಡೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬರೋಬ್ಬರಿ 41 ವರ್ಷದ ಬಳಿಕ ಒಲಿಂಪಿಕ್ ಹಾಕಿಯಲ್ಲಿ ಭಾರತಕ್ಕೆ ಕಂಚಿನ ಪದಕ!

Twitter
Facebook
LinkedIn
WhatsApp
ಬರೋಬ್ಬರಿ 41 ವರ್ಷದ ಬಳಿಕ ಒಲಿಂಪಿಕ್ ಹಾಕಿಯಲ್ಲಿ ಭಾರತಕ್ಕೆ ಕಂಚಿನ ಪದಕ!

ಟೋಕಿಯೋ: ಭಾರತೀಯ ಪುರುಷರ ಹಾಕಿ ತಂಡವು ಬರೋಬ್ಬರಿ 41 ವರ್ಷಗಳ ನಂತರ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ಹರ್ಷ ವ್ಯಕ್ತಪಡಿಸಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕಕ್ಕಾಗಿ ಜರ್ಮನಿ ವಿರುದ್ಧ 5-4 ಅಂತರದಲ್ಲಿ ಗೆಲುವು ಸಾಧಿಸಿದೆ.
ಮಂಗಳವಾರ ನಡೆದ ಸೆಮಿಫೈನಲ್‌ನಲ್ಲಿ ಭಾರತ ತಂಡವು ಬೆಲ್ಜಿಯಂ ವಿರುದ್ದ 2-5 ಅಂತರದಲ್ಲಿ ಸೋಲುಂಡು ಚಿನ್ನದ ಕನಸನ್ನು ಕೈಬಿಟ್ಟಿತ್ತು. 1980 ರಲ್ಲಿ ಮಾಸ್ಕೋ ಕ್ರೀಡಾಕೂಟದಲ್ಲಿ ಭಾರತವು ಕೊನೆಯ ಬಾರಿಗೆ ಹಾಕಿಯಲ್ಲಿ ಪದಕ ಗೆದ್ದಿತ್ತು.
ಸಿಮ್ರಂಜಿತ್ ಸಿಂಗ್ ಎರಡು ಗೋಲ್‌ ಮತ್ತು ಹಾರ್ದಿಕ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್ ಮತ್ತು ರೂಪಿಂದರ್ ಪಾಲ್ ಸಿಂಗ್ ತಲಾ ಒಂದೊಂದು ಗೋಲ್‌ ದಾಖಲಿಸಿದರು. ಮೊದಲ ಕ್ವಾರ್ಟರ್‌ನ ಎರಡನೇ ನಿಮಿಷದಲ್ಲಿ ಜರ್ಮನಿಯ ತೈಮೂರ್ ಒರುಜ್ ಗೋಲು ಗಳಿಸುವುದರೊಂದಿಗೆ ಜರ್ಮನಿ ತಂಡವು ಆರಂಭಿಕ ಮುನ್ನಡೆ ಸಾಧಿಸಿತ್ತು.

ಸಿಮ್ರಂಜಿತ್ ಸಿಂಗ್ ಆಟದ 17 ನೇ ನಿಮಿಷದಲ್ಲಿ ಗೋಲು ಗಳಿಸುವುದರೊಂದಿಗೆ ಭಾರತದ ಅಂಕವನ್ನು 1-1 ಕ್ಕೆ ಏರಿಸಿದರು. ಆದಾಗ್ಯೂ ಎರಡನೆ ಕ್ವಾರ್ಟರ್‌ನಲ್ಲಿ ಜರ್ಮನಿ ಮತ್ತೆ ಎರಡು ಗೋಲುಗಳನ್ನು ಗಳಿಸಿ 3-1 ಮುನ್ನಡೆ ಸಾಧಿಸಿತು.
ಎರಡನೇ ಕ್ವಾರ್ಟರ್‌‌ನಲ್ಲಿ ಹಾರ್ದಿಕ್ ಸಿಂಗ್‌ ಮತ್ತು ಹರ್ಮನ್‌ಪ್ರೀತ್ ಸಿಂಗ್ ಮತ್ತೊಮ್ಮೆ ಭಾರತಕ್ಕೆ ತಲಾ ಒಂದೊಂದು ಗೋಲ್‌ ನೀಡುವುದರೊಂದಿಗೆ ತಂಡವನ್ನು 3-3 ಕ್ಕೆ ತಂದು ಸಮಬಲ ಗೊಳಿಸಿದರು.
ಮೂರನೆಯ ಕ್ವಾರ್ಟರ್‌‌ನಲ್ಲಿ ರುಪಿಂದರ್ ಪಾಲ್ ಸಿಂಗ್ ತನ್ನ ಪೆನಾಲ್ಟಿ ಸ್ಟ್ರೋಕ್ ನಲ್ಲಿ ಭಾರತಕ್ಕೆ 4-3 ಮುನ್ನಡೆಯ ಗೋಲ್ ದಾಖಲಿಸಿದರು ನೀಡಿದರು. ನಂತರ ಸಿಮ್ರಂಜಿತ್ ಸಿಂಗ್ ಪಂದ್ಯದ ಎರಡನೇ ಗೋಲು ಗಳಿಸಿ ಭಾರತಕ್ಕೆ 5-3 ಮುನ್ನಡೆ ತಂದುಕೊಟ್ಟರು.
ಜರ್ಮನಿ ಅಂತಿಮ ಕ್ವಾರ್ಟರ್‌ನಲ್ಲಿ ಪೆನಾಲ್ಟಿ ಕಾರ್ನರ್‌ ಮೂಲಕ ಒಂದು ಗೋಲ್ ಪಡೆಯಲು ಯಶಸ್ವಿಯಾಯಿತು. ಆದಾಗ್ಯೂ, ಭಾರತೀಯ ಆಟಗಾರರು ಸಮರ್ಥವಾಗಿ ಜರ್ಮನಿಯನ್ನು ಎದುರಿಸಿ ಒಂದು ಅಂಕಗಳ ಮುನ್ನಡೆಯನ್ನು ಕಾಯ್ದು ಕೊಳ್ಳುವಲ್ಲಿ ಯಶಸ್ವಿಯಾದರು.
ಆಟ ಮುಗಿಯಲು ಕೆಲವೇ ಸೆಕೆಂಡುಗಳು ಬಾಕಿ ಇರುವಾಗ, ಜರ್ಮನಿಗೆ ಪೆನಾಲ್ಟಿ ಕಾರ್ನರ್‌ ಪಡೆಯುವಲ್ಲಿ ಯಶಸ್ವಿಯಾದರೂ, ಗೋಲಿ ಪಿಆರ್ ಶ್ರೀಜೇಶ್ ಅದನ್ನು ತಡೆದು ಭಾರತವನ್ನು ಗೆಲುವಿನ ದಡಕ್ಕೆ ತಲುಪಿಸಿದರು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು