ಶನಿವಾರ, ಜುಲೈ 20, 2024
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜು.20 ರಂದು ಶಾಲೆ ಪಿಯು ಕಾಲೇಜುಗಳಿಗೆ ರಜೆ ಘೋಷಣೆ-ಬಂಟ್ವಾಳ: ಪುಂಜಾಲಕಟ್ಟೆ ಬಳಿ ಲಾರಿ ಪಲ್ಟಿ; ಓರ್ವ ಸಾವು, ಮೂವರು ಗಂಭೀರ.!-ಶಿರಾಡಿ ಘಾಟ್ ನಲ್ಲಿ ಓಮ್ನಿ ಕಾರಿನ ಮೇಲೆ ಮಣ್ಣು ಕುಸಿತ; ಅಪಾಯದಿಂದ ಪಾರಾದ ಪ್ರಯಾಣಿಕರು-Hardik Pandya - Natasa: ವಿಚ್ಛೇದನ ಪ್ರಕಟಿಸಿದ ಹಾರ್ದಿಕ್ ಪಾಂಡ್ಯ, ನತಾಶಾ-ದಕ್ಷಿಣ ಕನ್ನಡ, ಉಡುಪಿ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜು.19 ರಂದು ಶಾಲೆ ಪಿಯು ಕಾಲೇಜುಗಳಿಗೆ ರಜೆ ಘೋಷಣೆ-World Record: ಟೆಸ್ಟ್ ಕ್ರಿಕೆಟಿನಲ್ಲಿ ಅತಿ ವೇಗದ 50 ರನ್; ವಿಶ್ವ ದಾಖಲೆ ನಿರ್ಮಿಸಿದ ಇಂಗ್ಲೆಂಡ್-ದಿಬ್ರುಗಢ ಎಕ್ಸ್‌ಪ್ರೆಸ್ ಅಪಘಾತದ ಬಗ್ಗೆ ಪ್ರಧಾನ ಮಂತ್ರಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ-Aanvi Kamdar: ವಿಡಿಯೋ ಮಾಡುವ ವೇಳೆ 300 ಅಡಿ ಎತ್ತರದ ಫಾಲ್ಸ್​​ನಿಂದ ಬಿದ್ದು ಇನ್​ಸ್ಟಾ ತಾರೆ ಸಾವು-ದಕ್ಷಿಣ ಕನ್ನಡ ಜಿಲ್ಲೆಯ ಈ 5 ತಾಲೂಕಿನ ಶಾಲೆ, ಪಿಯು ಕಾಲೇಜುಗಳಿಗೆ ಜು.18 ರಂದು ರಜೆ ಘೋಷಣೆ-ನಕಲಿ ರಜೆ ಆದೇಶ: ಎಫ್.ಐ.ಆರ್ ದಾಖಲಿಸಲು ಡಿಸಿ‌ ಸೂಚನೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬರೋಬ್ಬರಿ 130 ಮಹಿಳೆಯರನ್ನು ಕೊಲೆಗೈದ ಆರೋಪಿ ಇನ್ನಿಲ್ಲ!

Twitter
Facebook
LinkedIn
WhatsApp
ಬರೋಬ್ಬರಿ 130 ಮಹಿಳೆಯರನ್ನು ಕೊಲೆಗೈದ ಆರೋಪಿ ಇನ್ನಿಲ್ಲ!

ವಾಷಿಂಗ್ಟನ್‌: ಸುಮಾರು 130 ಮಹಿಳೆಯರನ್ನು ಕೊಲೆಗೈದ ಆರೋಪ ಹೊತ್ತಿದ್ದ ‘ದಿ ಡೇಟಿಂಗ್‌ ಗೇಮ್‌ ಕಿಲ್ಲರ್‌’ ಎಂದೇ ಕುಖ್ಯಾತಿ ಪಡೆದಿದ್ದ ರಾಡ್ನಿ ಜೇಮ್ಸ್‌ ಅಲ್ಕಾಲ (77) ಕೊನೆಯುಸಿರೆಳೆದಿದ್ದಾನೆ.
ಹಲವು ಕೊಲೆ ಪ್ರಕರಣಗಳಲ್ಲಿ ಅಪರಾಧಿ ಎಂದು ಸಾಬೀತಾಗಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಈತ ಕ್ಯಾಲಿಫೋರ್ನಿಯಾದ ಸ್ಯಾನ್‌ ಜೋವಾಕ್ವಿನ್‌ ವ್ಯಾಲಿಯ ಆಸ್ಪತ್ರೆಯೊಂದರಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ಈತ ಒಟ್ಟು 130 ಕೊಲೆ ಮಾಡಿದ್ದಾನೆ ಎನ್ನುವುದು ಪೊಲೀಸರ ಆರೋಪ. ಆದರೆ, ಐದು ಕೊಲೆ ಪ್ರಕರಣಗಳಲ್ಲಿ ಮಾತ್ರ ಅಪರಾಧಿ ಎಂದು ಸಾಬೀತಾಗಿತ್ತು.

ಕ್ಯಾಲಿಫೋರ್ನಿಯಾದಲ್ಲಿ 1977ರಿಂದ 1979ರ ಅವಧಿಯಲ್ಲಿ12 ವರ್ಷದ ಬಾಲಕಿ ಸೇರಿ ಐವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು 2010ರಲ್ಲಿ ಅಲ್ಕಾಲಗೆ ಮರಣ ದಂಡನೆ ವಿಧಿಸಿತ್ತು. ಅಮೆರಿಕದಲ್ಲಿ 1978ರಲ್ಲಿ ನಡೆಯುತ್ತಿದ್ದ ‘ದಿ ಡೇಟಿಂಗ್‌ ಗೇಮ್‌’ ಶೋನಲ್ಲಿ ಈತ ಭಾಗವಹಿಸಿದ್ದ. ಇದಾದ ಬಳಿಕ ಸರಣಿ ಕೊಲೆಗಳಲ್ಲಿ ಅಲ್ಕಾಲ ವಿರುದ್ಧ ಪ್ರಕರಣ ದಾಖಲಾದ ಕಾರಣ ಈತ ‘ದಿ ಡೇಟಿಂಗ್‌ ಗೇಮ್‌ ಕಿಲ್ಲರ್‌’ ಎಂದೇ ಕುಖ್ಯಾತನಾದ.
ಸ್ಯಾನ್‌ ಫ್ರಾನ್ಸಿಸ್ಕೋದ ಸ್ಯಾನ್‌ ಕ್ವೆಂಟಿನ್‌ ಜೈಲಿನಲ್ಲಿ ಹಲವು ವರ್ಷ ಕಳೆದ ಅಲ್ಕಾಲನನ್ನು ಬಳಿಕ ವೈದ್ಯಕೀಯ ಚಿಕಿತ್ಸೆಗಾಗಿ ಕಾರ್ಕೋರನ್‌ ಜೈಲಿಗೆ ಸ್ಥಳಾಂತರಿಸಲಾಗಿತ್ತು. ‘ಡೇಟಿಂಗ್‌ ಗೇಮ್‌ ಕಿಲ್ಲರ್‌’ ಎಂಬ ಸಿನಿಮಾ ಸಹ ಬಿಡುಗಡೆ ಮಾಡಲಾಗಿದೆ.

ಅಲ್ಕಾಲನನ್ನು ‘ಸೈಕೋ ಕಿಲ್ಲರ್‌’ ಎಂದು ಸಹ ಕರೆಯಲಾಗುತ್ತದೆ. ಮಹಿಳೆಯರು ಹಾಗೂ ಹುಡುಗಿಯರನ್ನೇ ಗುರಿಯಾಗಿಸಿ ಕೊಲೆ ಮಾಡುತ್ತಿದ್ದ ಈತ ಅವರ ಕಿವಿಯೋಲೆ ಬಿಚ್ಚಿ, ಸಂಗ್ರಹಿಸುತ್ತಿದ್ದ. ಈತನ ಬಳಿ ಸಿಕ್ಕ ಕಿವಿಯೋಲೆಗಳು ಸಹ ಪೊಲೀಸರ ತನಿಖೆಗೆ ನೆರವಾಗಿವೆ. ಹಲವು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಸಹ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ದಕ್ಷಿಣ ಕನ್ನಡ, ಉಡುಪಿ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜು.19 ರಂದು ಶಾಲೆ ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜು.20 ರಂದು ಶಾಲೆ ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜು.20 ರಂದು ಶಾಲೆ ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ದಕ್ಷಿಣ ಕನ್ನಡ ಜಿಲ್ಲೆ: ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವ ಹಿನ್ನಲೆ ಜುಲೈ 20 ರಂದು

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು