ಗುರುವಾರ, ಜುಲೈ 25, 2024
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಂಗಳೂರಿನ ಶ್ರೀಯುತ ಮೋಹನ್ ಶೆಟ್ಟಿ ವಿಧಿವಶ-Anandpur: ಮದುವೆಯಾಗುವಂತೆ ಪೀಡಿಸುತ್ತಿದ್ದಾಳೆಂದು ಪ್ರೇಯಸಿ ಕೊಲೆ ಮಾಡಿದ ಪ್ರಿಯಕರ-ಮುಡಾ ಸೈಟ್ ಕೋಲಾಹಲ: ಬಿಜೆಪಿ ಶಾಸಕರಿಂದ ಸದನದಲ್ಲಿ ಶ್ರೀರಾಮನ ಭಜನೆ-Shiroor: ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಟ್ರಕ್ ಗಂಗಾವಳಿ ನದಿಯಲ್ಲಿ ಪತ್ತೆ-Ladies PG: ಬೆಂಗಳೂರಿನಲ್ಲಿ ಲೇಡಿಸ್ ಪಿಜಿಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ!-ಕಾಂಗ್ರೆಸ್​ ಹಿರಿಯ ನಾಯಕ ಮರಿಗೌಡ ಪಾಟೀಲ್ ಹುಲ್ಕಲ್ ನಿಧನ-Shimoga: ರಸ್ತೆ ಅಪಘಾತ; ಶಿವಮೊಗ್ಗ ಧರ್ಮಪ್ರಾಂತ್ಯದ ಫಾ.ಆಂಟನಿ ಪೀಟರ್ ಇನ್ನಿಲ್ಲ-Mudra loan: ಮುದ್ರಾ ಸಾಲದ ಮಿತಿ 10 ಲಕ್ಷದಿಂದ 20 ಲಕ್ಷ ರೂಗೆ ಏರಿಕೆ; ಉದ್ದಿಮೆದಾರರಿಗೆ ಉತ್ತೇಜನ-Gold Rate: ಬಜೆಟ್‌ ಬೆನ್ನಲ್ಲೇ ಚಿನ್ನ, ಬೆಳ್ಳಿ ದರ ದಿಢೀರ್‌ ಇಳಿಕೆ-Sanket: ಮಹಿಳಾ ನಿರ್ದೇಶಕಿಯ ಅದ್ಭುತ ನಿರ್ದೇಶನ, ಅಂತರಾಷ್ಟ್ರೀಯ ಮಟ್ಟದ ಬಿಜಿಎಂ, ಕಲಾವಿದರ ಅದ್ಭುತ ಅಭಿನಯ ದಿಂದ ಮನಸೂರೆಗೊಂಡಿರುವ ಕನ್ನಡ ಚಲನಚಿತ್ರ ಸಾಂಕೇತ್ ಜುಲೈ 26ಕ್ಕೆ ಬಿಡುಗಡೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬಡತನದಲ್ಲಿ ಬೆ೦ದು ಹೋಗಿದ್ದ ಟಿಕೆಟ್ ಕಲೆಕ್ಟರ್ ರೇವತಿ ಒಲಿಂಪಿಕ್ಸ್ ಗೆ ಆಯ್ಕೆ!!

Twitter
Facebook
LinkedIn
WhatsApp
ಬಡತನದಲ್ಲಿ ಬೆ೦ದು ಹೋಗಿದ್ದ ಟಿಕೆಟ್ ಕಲೆಕ್ಟರ್ ರೇವತಿ ಒಲಿಂಪಿಕ್ಸ್ ಗೆ ಆಯ್ಕೆ!!

ತಮಿಳುನಾಡು:ಬಡತನ ಮೆಟ್ಟಿ ನಿಂತು ಟೋಕಿಯೋ ಒಲಿಂಪಿಕ್ಸ್ ಗೆ ಟಿಕೆಟ್ ಕಲೆಕ್ಟರ್​ ತಮಿಳುನಾಡಿನ ಮಧುರೈ ನಿವಾಸಿ ರೇವತಿ ವೀರಮಣಿ ಆಯ್ಕೆಯಾಗುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಜುಲೈ 23ರಿಂದ ನಡೆಯಲಿರುವ ಜಪಾನ್​ನ ಟೋಕಿಯೋದಲ್ಲಿ ಒಲಿಂಪಿಕ್ಸ್​ ಗೆ ಭಾರತದಿಂದ ನೂರಾರು ಅಥ್ಲೀಟ್​ಗಳು ಪ್ರಯಾಣ ಬೆಳೆಸಲು ಸಜ್ಜಾಗಿದ್ದಾರೆ. ಇದೀಗ ದಕ್ಷಿಣ ರೈಲ್ವೇ ಟಿಕೆಟ್​ ಕಲೆಕ್ಟರ್ ರೇವತಿ ವೀರಮಣಿ ಆಯ್ಕೆಯಾಗಿದ್ದು ಭಾರತವನ್ನು ಪ್ರತಿನಿಧಿಸಲಿದ್ದಾರೆಂದು ರೈಲ್ವೆ ಇಲಾಖೆ ಟ್ವೀಟ್ ಮಾಡಿದೆ.

ತಮ್ಮ ಚಿಕ್ಕ ವಯಸ್ಸಿನಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡ ರೇವತಿ ವೀರಮಣಿ ಅಜ್ಜಿ ಮನೆಯಲ್ಲಿ ಬೆಳೆದಿದ್ದಾರೆ. ದಿನದ ಒಂದು ಹೊತ್ತು ಊಟಕ್ಕೂ ಕಷ್ಟ ಪಟ್ಟಿದ್ದಾರೆ.  ಶಾಲೆಯಲ್ಲಿ ಕ್ರೀಡೆಯ ಬಗ್ಗೆ ಹೆಚ್ಚು ಒಲವು ಹೊಂದಿದ್ದ ರೇವತಿ ವೀರಮಣಿ ಅವರು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗೆಲ್ಲುತ್ತಿದ್ದರು. 12ನೇ ತರಗತಿಯಲ್ಲಿದ್ದಾಗ ರಾಜ್ಯ ಮಟ್ಟದ 100 ಮೀಟರ್​ ರೇಸ್​ನಲ್ಲಿ ಭಾಗಿಯಾಗಿದ್ದರು.

ಇವರ ಪ್ರತಿಭೆ ಗುರುತಿಸಿದ ಕೋಚ್​ ಕೆ. ಕಣ್ಣನ್​ ಇವರಿಗೆ ಸಲಹೆ ನೀಡುವ ಜೊತೆಗೆ ಆರ್ಥಿಕವಾಗಿ ಸಹಾಯ ಮಾಡುತ್ತಾರೆ. ಇದರ ಫಲವಾಗಿ 2016ರಲ್ಲಿ ನಡೆದ ಜೂನಿಯರ್​​ ರಾಷ್ಟ್ರೀಯ ಓಟದಲ್ಲಿ 100 ಹಾಗೂ 200 ಮೀಟರ್​ನಲ್ಲಿ ಬೆಳ್ಳಿ ಪದಕ ಗೆಲ್ಲುತ್ತಾರೆ. ಇದಾದ ಬಳಿಕ 2019ರಲ್ಲಿ ಏಷ್ಯನ್​ ಚಾಂಪಿಯನ್ಸ್​​ನಲ್ಲಿ 4X100 ಮೀಟರ್​ ರಿಲೇಯಲ್ಲಿ 4ನೇ ಸ್ಥಾನ ಪಡೆದುಕೊಳ್ಳುತ್ತಾರೆ.

ಇದಾದ ಬಳಿಕ 2019ರಲ್ಲೇ ರೈಲ್ವೇ ಇಲಾಖೆಯಲ್ಲಿ ಕೆಲಸ ಪಡೆದುಕೊಂಡು ಅಭ್ಯಾಸ ಆರಂಭಿಸಿರುವ ರೇವತಿ ಸದ್ಯ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಸ್ಟಾರ್​ ಆಟಗಾರ್ತಿ ಹಿಮಾದಾಸ್​ ಒಲಿಂಪಿಕ್ಸ್​ನಿಂದ ಹೊರಬಿದ್ದಿದ್ದಾರೆ.

ರೇವತಿ ವೀರಮಣಿ ಅವರೊಂದಿಗೆ ಸುಭಾ ವೆಂಕಟೇಶನ್ ಮತ್ತು ಎಸ್. ಶ್ರೀಮತಿ ರೇವತಿ ದಕ್ಷಿಣ ರೈಲ್ವೆಯ ಮಧುರೈ ವಿಭಾಗದಲ್ಲಿ ವಾಣಿಜ್ಯ ಗುಮಾಸ್ತ-ಕಮ್-ಟಿಕೆಟ್ ಸಂಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಮಂಗಳವಾರ ಐದು ಕ್ರೀಡಾಪಟುಗಳಿಗೆ 5 ಲಕ್ಷ ರೂ. ಪ್ರೋತ್ಸಾಹ ಧನ ಘೋಷಿಸಿ ಪ್ರೋತ್ಸಾಹ ನೀಡಿದ್ದಾರೆ.
“ಮೊದಲ ಬಾರಿಗೆ, ತಮಿಳುನಾಡಿನ ಕ್ರೀಡಾಪಟು ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು